37 C
Hubli
ಮೇ 2, 2024
eNews Land
ಸುದ್ದಿ

ಹುಬ್ಬಳ್ಳಿಯ ಗಣೇಶನಿಗೆ ಸಂಭ್ರಮದ ವಿದಾಯ

ಇಎನ್ಎಲ್ ಹುಬ್ಬಳ್ಳಿ: ಹತ್ತು ದಿನಗಳ ಕಾಲ ಹುಬ್ಬಳ್ಳಿಯ ವಿವಿಧ ಬಡಾವಣೆಗಳಲ್ಲಿ ಪ್ರತಿಷ್ಠಾಪಿಸಲಾಗಿದ್ದ ಗಣೇಶ ವಿಗ್ರಹಗಳನ್ನು ಆಯಾ ಸಮಿತಿಯವರು ಶೃಂಗಾರ ಮಾಡಿದ ವಾಹನಗಳಲ್ಲಿ ಪ್ರತಿಷ್ಠಾಪನೆ ಮಾಡಿ ಭವ್ಯ ಮೆರವಣಿಗೆಯಲ್ಲಿ ಪಾಲ್ಗೊಂಡರು.

ಮೆರವಣಿಗೆ ಉದ್ದಕ್ಕೂ ಯುವಕರು, ಮಹಿಳೆಯರು, ವಯೋವೃದ್ಧರು ಪಾಲ್ಗೊಂಡು ಕುಣಿದು ಕುಪ್ಪಳಿಸಿ ಗಣಪತಿ ಬಪ್ಪ ಮೊರೆಯಾ, ಗಣಪತಿ ಮಹಾರಾಜ ಕಿ ಜೈ, ಘೋಷಣೆಗಳನ್ನು ಕೂಗುತ್ತಾ, ನೃತ್ಯ ಮಾಡುತ್ತಾ ಪರಸ್ಪರ ಗುಲಾಲ ಎರಚಿಕೊಂಡು ಸಂತೋಷ ವಿನಿಮಯ ಹಂಚಿಕೊಂಡರು ಗಣೇಶ ಮೆರವಣಿಗೆ ಆಗಮಿಸಿದಂತೆ ಮಹಿಳೆಯರು ಆರತಿ ಬೆಳಗಿ ನೈವೇದ್ಯ ಅರ್ಪಿಸಿ ತಮ್ಮ ಹರಕೆ ಸಮರ್ಪಿಸಿ ಪುನೀತರಾದರು.

ಯುವಕರು ವಿವಿಧ ಬಗೆಯ ಪಟಾಕ್ಷಿಗಳನ್ನು ಹಾರಿಸಿ ಗಗನದಲ್ಲಿ ಚಿತ್ತಾರಗೊಂಡಾಗ ನೋಡುವವರ ಕಣ್ಣುಗಳಿಗೆ ಹಬ್ಬದ ಸಂಭ್ರಮ ಎಂದು ಮಾಡಿತ್ತು ಇದರೊಂದಿಗೆ ಬ್ಯಾಂಡ್, ಸಂಭ್ಯಾಳ, ಮೇಳ, ಝಾಂಜ, ಭಜನೆಮೇಳ, ಜಾನಪದ ಕಲಾ ತಂಡಗಳು, ಜನರ ಮನಸ್ಸು ಆಕರ್ಷಗೊಂಡಿತ್ತು ಭಾವ್ಯವಾದ ಧ್ವನಿವರ್ಧಕಗಳು ಮೆರವಣಿಗೆಯ ಅಬ್ಬರವು ಮೆರಗು ತಂದು ಕೊಟ್ಟಿತ್ತು.

ಮೆರವಣಿಗೆಯ ದುರ್ಗದಬೈಲ ನಿಂದ ಪ್ರಾರಂಭವಾಗಿ ಬ್ರಾಡವೇ, ಮೇದಾರ ಓಣಿ, ದಾಜಿಬಾನ ಪೇಟ, ಸಂಗೊಳ್ಳಿ ರಾಯಣ್ಣ ವೃತ್ತ, ಚನ್ನಮ್ಮ ವೃತ್ತ, ಬಸವೇಶ್ವರ ವನ, ಮುಖಾಂತರ ಇಂದಿರಾ ಗಾಜಿನ ಮನೆ ಆವರಣದಲ್ಲಿ ಇರುವ ಗಣೇಶ ಭಾವಿ ಹಾಗೂ ನೂತನವಾಗಿ ಹೊಸೂರಿನ 16 ನo ಶಾಲೆಯ ಆವರಣದಲ್ಲಿ ಇರುವ ಗಣೇಶ ಭಾವಿಯಲ್ಲಿ ಗಣೇಶ ವಿಗ್ರಹಗಳ ವಿಸರ್ಜನೆಯ ಭಕ್ತಿ, ಶ್ರದ್ಧೆಯಿಂದ ಜರಗಿತ್ತು.

ಇದಕ್ಕೂ ಮುನ್ನ ದುರ್ಗದಬೈಲ್ ನಲ್ಲಿ ಹುಬ್ಬಳ್ಳಿ ಸಾರ್ವಜನಿಕ ಗಣೇಶೋತ್ಸವ ಸಮಿತಿಗಳ ಮಹಾಮಂಡಳ ಆಯೋಜಿಸಿದ ಗಣಪತಿ ವಿಗ್ರಹಗಳ ಸಾಮೂಹಿಕ ವಿಸರ್ಜನೆ ಮೆರವಣಿಗೆಯ ಉದ್ಧಾಟನೆ ಸಮಾರಂಭವನ್ನು ಪೂಜ್ಯ ಮ. ನೀ. ಜಗದ್ಗುರು ಡಾ || ಗುರುಸಿದ್ದರಾಜಯೋಗೀಂದ್ರ ಮಹಾ ಸ್ವಾಮಿಗಳು ಉದ್ಘಾಟಿಸಿ ಆಶೀರ್ವದಿಸಿದ ಅವರು ಸಂಘಟನೆಯಲ್ಲಿ ಏಕತೆ ಉಂಟು ಮಾಡುವ ಹಬ್ಬ ಹುಬ್ಬಳ್ಳಿಯ ಗಣೇಶ ಹಬ್ಬ ನಾವು ವಿಂಜ್ಞಾನದಲ್ಲಿ ಎಷ್ಟೋ ಪ್ರಗತಿಯನ್ನು ಸಾಧಿಸಿದ್ದೇವೆ ಜನಸಂಖ್ಯೆ, ಪ್ರಾಣಿ ಪಕ್ಷಿಗಳ ಸಂಖ್ಯೆ, ಹುಲಿಗಳ ಸಂಖ್ಯೆ ಹೀಗೆ ಎಲ್ಲ ವರ್ಗಗಳ ಅಂಕಿ ಸಂಖ್ಯೆಗಳ ಲೆಕ್ಕ ಸಿಗಬಹುದು ಆದರೆ ದೇವಾನು ದೇವತೆಗಳ ಲೆಕ್ಕ ಸಿಗಲು ಸಾಧ್ಯವಿಲ್ಲ ಕಲ್ಲು ಮಣ್ಣುಗಳಿಗೆ ರೂಪ ಕೊಟ್ಟಾಗ ಹಾಗೂ ಬೆಳ್ಳಿ ಬಂಗಾರ ಹೂಗಳಿಂದ ಅಲಂಕಾರ ಮಾಡಿದಾಗ ನಮ್ಮಲ್ಲಿ ಪೂಜಿಸುವ, ಮನೋ ಭಾವನೆ ಉಂಟಾಗುತ್ತದೆ ನಮ್ಮಲ್ಲಿ ಆದೀ ಕಾಲದಿಂದಲೂ ಆಚಾರ ವಿಚಾರಗಳು, ಪೂಜ್ಯ ಮನೋ ಭಾವನೆಗಳು, ಭಾವನಾತ್ಮಕವಾಗಿ ಬೆಳೆದು ಬಂದಿದ್ದರಿಂದ ಪೂಜ್ಯತೆ, ನಂಬಿಕೆ, ವಿಶ್ವಾಸ, ಕರ್ತುತ್ವ ಶಕ್ತಿ, ಭಾವನೆಗಳು ಮೂಡುತ್ತದೆ ಅಂದಿನಿಂದಲೂ ಇಂದಿನವರೆಗೆ ದೇವಾನು ದೇವತೆಗಳು, ಮರಗಳು, ಜಲ, ಮಣ್ಣು, ಕಲ್ಲು ಮತ್ತು ಲೋಹಗಳಿಗೆ ಹೆಚ್ಚಿನ ಪ್ರಾಧಾನ್ಯತೆ ನೀಡುತ್ತಾ ಬಂದಿದ್ದೇವೆ ಈ ಹಿನ್ನಲೆವಾಗಿ ಗಣೇಶ ಹಬ್ಬವನ್ನು ಪ್ರತಿಯೊಬ್ಬರಲ್ಲಿ ಭಯ – ಭಕ್ತಿ ಭಾವದಿಂದ ಆಚರಿಸಲ್ಪಡುತ್ತೇವೆ ಹುಬ್ಬಳ್ಳಿಯ ಗಣೇಶ ಹಬ್ಬವು ಸಂಸ್ಕೃತಿ ನಮ್ಮ ಸಂಸ್ಕೃತಿಯನ್ನು ಎತ್ತಿ ಹಿಡಿದಿದೆ ಈ ಹಬ್ಬದಿಂದ ಹುಬ್ಬಳ್ಳಿಗೆ ಒಳ್ಳೆ ಹೆಸರು ಬರಲು ಸಾಧ್ಯವಾಗಿದೆ ಎಂದು ನುಡಿದರು.

ಸಮಾರಂಭಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ ಶಾಸಕ ಪ್ರಸಾದ ಅಬ್ಬಯ್ಯ ಅವರು ಮಾತನಾಡಿ ಹುಬ್ಬಳ್ಳಿಯ ಗಣೇಶ ಹಬ್ಬವು ಸಾಮರಸ್ಯ ಪ್ರತೀಕವಾಗಿದೆ ಜಾತಿ, ಮತ, ಪಂಥ ಹಾಗೂ ಮೇಲೂ ಕೀಳು ಎಂಬ ಭಾವನೆ ಇಲ್ಲದೆ ಸೋದರತ್ತ ಮನೋ ಭಾವನೆಯಿಂದ ಆಚರಿಸುತ್ತಿದ್ದಾರೆ. ಇದರಿಂದ ವ್ಯಾಪಾರ, ಉದ್ದಿಮೆ, ಜನರಲ್ಲಿ ಶಾಂತತೆ ಬೆಳೆಯಲು ಸಾಧ್ಯವಾಗಿದೆ ಮತ್ತು ವಿವಿಧತೆಯಲ್ಲಿ ಏಕತೆ ಕಾಣಲು ಈ ಹಬ್ಬವಾಗಿದೆ ಈ ಹಬ್ಬದ ವಾತಾವರಣದಲ್ಲಿ ಲಕ್ಷಾಂತರ ಜನರು ಗಣೇಶ ದರ್ಶನ ಪಡೆದು ಪುನೀತರಾಗುತ್ತಿದ್ದಾರೆ ಎಂದು ನುಡಿದರು.

ಅತಿಥಿಯಾಗಿ ಆಗಮಿಸಿದ ಶಾಸಕ ಮಹೇಶ ಟೆಂಗಿನಕಾಯಿ ಅವರು ಮಾತನಾಡಿ ಹುಬ್ಬಳ್ಳಿಯ ಸಾರ್ವಜನಿಕ ಗಣೇಶೋತ್ಸವ ಹಬ್ಬವು ಇಡೀ ರಾಜ್ಯದ ಗಮನ ಸೆಳೆದಿದೆ ಈ ಹಬ್ಬವು ಎಲ್ಲ ಸಮುದಾಯದವರನ್ನು ಒಂದುಗೂಡಿಸುವ ಹಬ್ಬವಾಗಿದೆ ಅಂದು ಎಸ್. ಎಸ್. ಕಮಡೊಳ್ಳಿ ಶೆಟ್ಟರು ಸ್ಥಾಪನೆ ಮಾಡಿದ್ದ ಈ ಮಹಾಮಂಡಳವು ಇಲ್ಲಿವರೆಗೂ ನಿರಂತರವಾಗಿ ತನ್ನದೇ ಆದ ಚಟುವಟಿಕೆಗಳಿಂದ ನಡೆದು ಬಂದಿದ್ದು ಶ್ಲಾಘನೀಯವಾಗಿದೆ ಎಂದು ನುಡಿದರು.

ಅತಿಥಿಯಾಗಿ ಆಗಮಿಸಿದ ಮಜೇಥಿಯಾ ಫೌಂಡೇಶನ್ ಚೇರಮನ್ ಜೀತೆಂದ್ರ ಮಜೇಥಿಯಾ, ದುರ್ಗದ ಬೈಲ್ ಅಧ್ಯಕ್ಷರಾದ ರವಿ ರೇವಣಕರ, ಶಿವು ಮೆಣಸಿನಕಾಯಿ, ವಿನಾಯಕ ಲದ್ವಾ, ಸಂತೋಷ ಕಾಟ್ವೇ, ಅಲ್ತಾಫ್ ಕಿತ್ತೂರ್, ಶಾಂತರಾಜ ಪೋಳ, ಸರಸ್ವತಿ ಮೇಹರವಾಡೆ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.

ಸಮಾರಂಭದ ಅಧ್ಯಕ್ಷತೆಯನ್ನು ಮಹಾಮಂಡಳದ ಅಧ್ಯಕ್ಷರಾದ ಮೋಹನ ಲಿಂಬಿಕಾಯಿ ಅವರು ಮಾತನಾಡಿ ನಮ್ಮ ಪರಂಪರೆ, ನಮ್ಮ ಸಂಸ್ಕೃತಿ, ನಮ್ಮ ಧಾರ್ಮಿಕತೆ ಎತ್ತಿ ಹಿಡಿಯುವ ಹಬ್ಬವಾಗಿದೆ ಎಂದು ನುಡಿದರು.

ಅಮರೇಶ್ ಹಿಪ್ಪರಗಿ, ಎಸ್, ಎಸ್, ಕಮಡೊಳ್ಳಿ ಶೆಟ್ಟರ್, ಡಾ|| ಚಿದಾನಂದ ತೆಗ್ಗಿಹಳ್ಳಿ, ಎಮ್. ಎಮ್. ಡಂಬಳ, ರೋಹನ ಗೊಂದಕರ, ಬಾಬಣ್ಣ ಪವಾರ, ಐ. ಎಫ್. ನಾಯ್ಕರ್, ಅನಿಲ್ ಕವಿಶೇಟ್ಟಿ, ಅನಿಲ್ ಬೇವಿನಕಟ್ಟಿ, ಗಾಯತ್ರಿ ನೆಲ್ಲಿಕೊಪ್ಪ, ಸಾಧನಾ ಪೂಜಾರ, ರೇಖಾ ಆಪ್ಟೆ, ಅನಿತಾ ಜಡಿ, ಚಂದ್ರಶೇಖರ ಗಾಣಿಗೇರ, ಸಂತೋಷ ಕಟ್ಟಿ, ಶಿವಕುಮಾರ ಹಿರೇಮಠ, ಜಯಕುಮಾರ ಮುರಗೋಡ, ಮಹೇಶ ಪತ್ತಾರ, ಗುರುನಾಥ ಪತ್ತಾರ, ಉಪಸ್ಥಿತರಿದ್ದರು.

ಪ್ರಾರಂಭದಲ್ಲಿ ಮೋಹಕ ಲಿಂಬಿಕಾಯಿ ಸ್ವಾಗತಿಸಿದರು ಕಾರ್ಯಕ್ರಮ ನಿರೂಪಣೆ ಅಮರೇಶ್ ಹಿಪ್ಪರಗಿ ಶಾಂತರಾಜ ಪೋಳ ವಂದಿಸಿದರು.

Related posts

ನಡೆದಾಡುವ ದೇವರು ಸಿದ್ಧೇಶ್ವರ ಸ್ವಾಮೀಜಿ ವೈಕುಂಠಕ್ಕೆ

eNEWS LAND Team

ಗೃಹಲಕ್ಷ್ಮೀ ಯೋಜನೆ ಕಾರ್ಯಕ್ರಮ ವೀಕ್ಷಿಸಿದ ಗೃಹಲಕ್ಷ್ಮೀಯರು

eNEWS LAND Team

ಅಣ್ಣಿಗೇರಿ ಪುರಸಭೆ ಚುನಾವಣೆ ಅಂಗಳದಲ್ಲಿ ಉದ್ದ ಜಿಗಿತ, ಎತ್ತರ ಜಿಗಿತ!!

eNEWS LAND Team