ಇಎನ್ಎಲ್ ಹುಬ್ಬಳ್ಳಿ ನ.26: ಹುಬ್ಬಳ್ಳಿ ವಿದ್ಯಾನಗರದ ಮಹಿಳಾ ವಿದ್ಯಾಪೀಠದ ಮಹಿಳಾ ಪಾಲಿಟೆಕ್ನಿಕ್ ನಿರಂತರ ತಾಂತ್ರಿಕ ಶಿಕ್ಷಣ ಘಟಕದ ವತಿಯಿಂದ
ನಿರುದ್ಯೋಗಿ ಯುವತಿಯರಿಗೆ ಫ್ಯಾಷನ್ ಡಿಸೈನಿಂಗ್ ಬ್ಯುಟಿಷಿಯನ್, ಬಟ್ಟೆ ಬ್ಯಾಗ್ ತಯಾರಿಕೆಯ ಅಲ್ಪಾವಧಿ ಕೋರ್ಸ್‌ಗಳನ್ನು ಡಿಸೆಂಬರ್ 01 ಆರಂಭಿಸಲಾಗುವುದು. ಎಸ್.ಎಸ್.ಎಲ್.ಸಿ ಪಾಸ್ ಅಥವಾ ಫೇಲ್ ಆದ ಯುವತಿಯರು ನವೆಂಬರ್ 30 ರ ಒಳಗಾಗಿ ತರಬೇತಿಗೆ ನೊಂದಾಯಿಸಿಕೊಳ್ಳಬೇಕು.
ಹೆಚ್ಚಿನ ಮಾಹಿತಿಗಾಗಿ :
ನಿರಂತರ ತಾಂತ್ರಿಕ ಶಿಕ್ಷಣ ಘಟಕ ಮುಖ್ಯಸ್ಥರು.
ಕಿರಣ್ ಕುಮಾರ್ ಎಂ.ಟಿ.
ದೂರವಾಣಿ ಸಂಖ್ಯೆ 9448923928