ಇದನ್ನೂ ಓದಿ ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ: ಆತಂಕ ಇಲ್ಲ: ಸಿಎಂ ಬೊಮ್ಮಾಯಿ
ಇಎನ್ಎಲ್ ಬೆಂಗಳೂರು: ನಾಡಿನ ಹಿತ ರಕ್ಷಣೆ ಉದ್ದೇಶದಿಂದ ರಾಷ್ಟ್ರೀಯ ಜನಹಿತ ಪಾರ್ಟಿ ಅಸ್ಥಿತ್ವಕ್ಕೆ ಬಂದಿದ್ದು, ಪಕ್ಷಕ್ಕೆ ಚುನಾವಣಾ ಆಯೋಗ ಮಂಜೂರು ಮಾಡಿರುವ ಕುಕ್ಕರ್ ಚಿಹ್ನೆಯನ್ನು ಇಂದು ಬಿಡುಗಡೆ ಮಾಡಲಾಯಿತು.
ಇದನ್ನೂ ಓದಿ ಗೋ ಸಾಗಾಣೆ ವೇಳೆ ವ್ಯಕ್ತಿ ಅನುಮಾನಸ್ಪದ ಸಾವು ಪ್ರಕರಣ
ಸುದ್ದಿಗೋಷ್ಠಿಯಲ್ಲಿ ರಾಷ್ಟ್ರೀಯ ಜನಹಿತ ಪಾರ್ಟಿಯ ರಾಷ್ಟ್ರೀಯ ಅಧ್ಯಕ್ಷ ಮಂಜುನಾಥ್ ವಿಶ್ವಕರ್ಮ, ರಾಜ್ಯಾಧ್ಯಕ್ಷ ಎಸ್.ಬಿ. ರಮೇಶ್ ಹಾಗೂ ಪಕ್ಷದ ಮುಖಂಡರು ಕುಕ್ಕರ್ ಚಿಹ್ನೆ ಮತ್ತು ಪ್ರಣಾಳಿಕೆ ಬಿಡುಗಡೆ ಮಾಡಿದರು.
ಇದನ್ನೂ ಓದಿ ಬಿಜೆಪಿಗೆ ನಟ ಸುದೀಪ್ ಬೆಂಬಲ: ಸಿಎಂ ಬೊಮ್ಮಾಯಿ
ಬಳಿಕ ರಾಷ್ಟ್ರೀಯ ಅಧ್ಯಕ್ಷ ಮಂಜುನಾಥ್ ಮಾತನಾಡಿ, ನಾಡಿನ ಜನರ ಸಂಕಷ್ಟ ನಿವಾರಣೆ ಮತ್ತು ನಾಡು, ನುಡಿ ಹಾಗೂ ಮೂಲಭೂತ ಸಮಸ್ಯೆಗಳನ್ನು ಬಗೆಹರಿಸುವುದು ನೂತನ ಪಕ್ಷದ ಗುರಿಯಾಗಿದೆ. ರಾಜ್ಯದ 224 ಕ್ಷೇತ್ರಗಳಲ್ಲೂ ಸಮಾಜಮುಖಿ ಸೇವೆ ಸಲ್ಲಿಸುವ ಅಭ್ಯರ್ಥಿಗಳು ಚುನಾವಣೆಯಲ್ಲಿ ಸ್ಪರ್ದಿಸಲಿದ್ದೇವೆ ಹಾಗೂ ಮಹಿಳೆಯರಿಗೆ ಹೆಚ್ಚಿನ ಆದ್ಯತೆ ನೀಡಿದ್ದು. ನಾಡಿನ ನೆಲ, ಜಲ, ಭಾಷೆ ರಕ್ಷಣೆಗಾಗಿ ಅವಿರತವಾಗಿ ಪಕ್ಷ ಹೋರಾಟ ಮಾಡಲಿದ್ದು, ಜನರ ಆಶಯದಂತೆ ಯೋಜನೆಗಳನ್ನು ರೂಪಿಸಲಾಗುವುದು ಎಂದರು.
ಇದನ್ನೂ ಓದಿ ಬಿಜೆಪಿಗೆ ನಟ ಸುದೀಪ್ ಬೆಂಬಲ: ಸಿಎಂ ಬೊಮ್ಮಾಯಿ
ಉನ್ನತ ವೈದ್ಯಕೀಯ ಸೌಲಭ್ಯ, ಶಿಕ್ಷಣ, ಆರೋಗ್ಯ, ರೈತರ ಬದುಕು ಸಾಗಿಸಲು ಹಾಗೂ ನಿರುದ್ಯೋಗ ನಿವಾರಣೆಗಾಗಿ ತಲಾ 15 ಲಕ್ಷ ರೂಪಾಯಿಗಳ ಗ್ಯಾರೆಂಟಿ ಕಾರ್ಡ್ ವಿತರಿಸಲಾಗುವುದು. ರೈತರ ಬೆಳೆಗೆ ಯೋಗ್ಯ ಬೆಂಬಲ ಬೆಲೆ ನಿಗದಿ, ಶುದ್ಧ ಕುಡಿಯುವ ನೀರು, ಉತ್ತಮ ರಸ್ತೆ ಮತ್ತು 24 ಗಂಟೆಗಳ ಕಾಲ ವಿದ್ಯುತ್ ನೀಡುವ, ಹೈನುಗಾರಿಕೆ, ತೋಟಗಾರಿಕೆ ಚಟುವಟಿಕೆಗಳಿಗೆ ಆದ್ಯತೆ ನೀಡಲಾಗಿದೆ ಎಂದರು.
ಇದನ್ನೂ ಓದಿ ಅಣ್ಣಿಗೇರಿ ಶಾರದಾ ಪಬ್ಲಿಕ್ ಸ್ಕೂಲ್‌ನಲ್ಲಿ ಶಾರದಾ ಉತ್ಸವ
ಶಿಕ್ಷಣ, ಆರೋಗ್ಯ, ಕೃಷಿ ಮತ್ತು ಪರಿಸರ ಸಂರಕ್ಷಣೆ ನಮ್ಮ ಆದ್ಯತೆಯಾಗಿದ್ದು, ಆರ್ಥಿಕ ಸೌಲಭ್ಯ ಹಾಗೂ ಆರ್ಥಿಕಾಭಿವೃದ್ಧಿಯ ಫಲವನ್ನು ಪ್ರತಿಯೊಬ್ಬರಿಗೂ ಪರಿಣಾಮಕಾರಿಯಾಗಿ ದೊರಕಿಸಲು ಸೂಕ್ತ ನೀತಿ, ರಾಜಕೀಯ ವ್ಯವಸ್ಥೆಯ ಶುದ್ದೀಕರಣ, ಉತ್ತಮ ರಾಜಕೀಯ ಸಂಸ್ಕೃತಿ ರೂಪಿಸುವ, ಸ್ವಚ್ಛ ಹಾಗೂ ಸುರಕ್ಷಿತ, ಪಾರದರ್ಶಕ ಆಡಳಿತ ನೀಡುವ ಗುರಿ ಹೊಂದಲಾಗಿದೆ. ವಿಶೇಷವಾಗಿ ಮಹಿಳೆಯರಿಗೆ ಮತ್ತು ಮಕ್ಕಳು, ಹಿಂದುಳಿದ, ಅಲ್ಪ ಸಂಖ್ಯಾತ, ಪರಿಶಿಷ್ಟ ಜಾತಿ ಮತ್ತು ಪಂಗಡದವರ ಶ‍್ರೇಯೋಭಿವೃದ್ಧಿ ಪಕ್ಷದ ಗುರಿಯಾಗಿದೆ ಎಂದರು. ಪಕ್ಷದ ಪದಾಧಿಕಾರಿಗಳಾದ ರಿಯಾಜ್ ಹುಸೇನ್, ಪ್ರಕಾಶ್, ರಘುನಾಥ್ ರಾವ್, ರಾಮಕೃಷ್ಣ, ಮುನಿರಾಜು, ನಾರಾಯಣಸ್ವಾಮಿ, ರಮೇಶ್ , ಸೀತಾ, ಪ್ರಭಾವತಿ ಮತ್ತಿತರರು ಪಾಲ್ಗೊಂಡಿದ್ದರು.
ಇದನ್ನೂ ಓದಿ ಕ್ರಿಕೆಟ್ ಬೆಟ್ಟಿಂಗ್; ಇಬ್ಬರು ಗಡಿಪಾರು!!