ಇಎನ್ಎಲ್ ಕಲಘಟಗಿ:
ತಾಲೂಕಿನಲ್ಲಿ ನರೇಗಾ ಕಾಮಗಾರಿಗಳು ಉತ್ತಮವಾಗಿವೆ. ರಸ್ತೆ, ಗಟಾರಗಳು, ಶೌಚಾಲಯಗಳು ಸೇರಿದಂತೆ ಗ್ರಾಮಗಳ ಜನರು ಸ್ವಚ್ಛತೆಯತ್ತ ಗಮನಹರಿಸುತ್ತಿದ್ದಾರೆ. ಎಂದು ನರೇಗಾ ಯೋಜನೆಯ ರಾಜ್ಯ ಮಟ್ಟದ ಗುಣಮಟ್ಟ ಪರಿವೀಕ್ಷಕರಾಗಿ ಆಗಮಿಸಿದ ಗುರುಲಿಂಗಸ್ವಾಮಿ ಹೇಳಿದರು.
ತಾಲೂಕಿನ ದೇವಿಕೊಪ್ಪ ಗ್ರಾಮದ ಸರಕಾರಿ ಪ್ರೌಢಶಾಲೆಯ ಕಂಪೌoಡ ಕಾಮಗಾರಿ ವೀಕ್ಷಿಸಿ ಹಳ್ಳಿಗಳ ಅಭಿವೃದ್ದಿಗೆ ನರೇಗಾ ಉತ್ತಮ ಯೋಜನೆಯಾಗಿದ್ದು ಉದ್ಯೋಗದ ಜೊತೆಗೆ ಅಭಿವೃದ್ಧಿಯೂ ಆಗುತ್ತದೆ ಎಂದರು. ಕಡತಗಳನ್ನು ಇನ್ನಷ್ಟು ಸರಿಪಡಿಸಲು ಸೂಚಿಸಿದರು. ದೇವಿಕೊಪ್ಪ ಗ್ರಾ.ಪಂ. ಅಧ್ಯಕ್ಷರು ಹಾಗೂ ಮಾಜಿ ಸೈನಿಕರಾದ ಸಾತಪ್ಪ ಸೂಳೀಕಟ್ಟಿ ಮಾತನಾಡಿ ಸೈನಿಕನಾಗಿ ಸೇವೆಸಲ್ಲಿಸಿದ ನನಗೆ ಗ್ರಾಮದ ಜನರು ಆಶೀರ್ವದಿಸಿ ಅಧ್ಯಕ್ಷ ಸ್ಥಾನ ಕೊಟ್ಟಿದ್ದಾರೆ. ನನ್ನ ವ್ಯಾಪ್ತಿಯ ಎಲ್ಲ ಗ್ರಾಮಗಳ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸುತ್ತೇನೆ ಎಂದರು.
ಈ ಸಂದರ್ಭದಲ್ಲಿ ಶ್ರವಣಾನಂದ ಸ್ವಾಮಿಗಳು ರಾಮಲಿಂಗೇಶ್ವರ ಮಠ ದೇವಿಕೊಪ್ಪ, ಚಂದ್ರಶೇಖರ ಪೂಜಾರ, ತಾಂತ್ರಿಕ ಸಹಾಯಕ ಅಭಿಯಂತರ ಅಭಿಷೇಕ ಡೊಂಬರ, ಗ್ರಾಪಂ ಪಿಡಿಓ ಸಿ.ಎಸ್.ಉಳ್ಳಾಗಡ್ಡಿ , ಶಂಕ್ರಪ್ಪ ಕೆಲಗೇರಿ, ಮಾದೇವಪ್ಪ ಭೋವಿ, ಮುಖ್ಯೋಪಾದ್ಯಾಯ ಕುಮಾರ.ಕೆ.ಎಫ ಮುಂತಾದವರು ಉಪಸ್ಥಿತರಿದ್ದರು.