28 C
Hubli
ಸೆಪ್ಟೆಂಬರ್ 21, 2023
eNews Land
ಸುದ್ದಿ

ತುಮರಿಕೊಪ್ಪ ವ ರಂಗಾಪೂರ ಗ್ರಾಮದ ಗಣಪತಿ ಜಾತ್ರಾ ಮಹೋತ್ಸವ. ಇಲ್ಲಿದೆ ಕಂಪ್ಲೀಟ್ ಮಾಹಿತಿ

ಇಎನ್ಎಲ್ ಕಲಘಟಗಿ: ತಾಲೂಕಿನ ತುಮರಿಕೊಪ್ಪ ವ ರಂಗಾಪೂರ ಗ್ರಾಮದ ಶ್ರೀ ಗಣಪತಿ ದೇವರ 5ನೇ ಜಾತ್ರಾ ಮಹೋತ್ಸವ ಇದೇ ಏ.26 ಮಂಗಳವಾರ ಜರುಗಲಿದೆ. ಬೆಳಿಗ್ಗೆ ಕುಂಭಮೇಳ, ಸಕಲ ವಾದ್ಯಗಳೊಂದಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಶ್ರೀ ಗಣಪತಿ ದೇವರ ಮೆರವಣಿಗೆ ಜರುಗುವುದು. ದಿವ್ಯ ಸಾನಿಧ್ಯವನ್ನು ನವಲಗುಂದ ಗವಿಮಠದ ಪ.ಪೂ.ಶ್ರೀಬಸವಲಿಂಗ ಮಹಾಸ್ವಾಮಿಗಳು, ಬಮ್ಮಿಗಟ್ಟಿಯ ಶ್ರೀ ಸದ್ಗುರು ಸಿದ್ಧಾರೂಢ ಬೃಹನ್ಮಠದ ಶ್ರೀ ಸದ್ಗುರು ದಯಾನಂದ ಮಹಾಸ್ವಾಮಿಗಳು, ಸಾನಿಧ್ಯವನ್ನು ತುಮರಿಕೊಪ್ಪದ ವೇ.ಮೂ.ಶ್ರೀ ಈರಯ್ಯ ಸಿದ್ದಯ್ಯ ಹೀರೆಮಠ ವಹಿಸುವರು. ವಿಶೇಷ ಆಮಂತ್ರಿತರಾಗಿ ಶಾಸಕ ಸಿ.ಎಮ್.ನಿಂಬಣ್ಣವರ, ಮಾಜಿ ಸಚಿವ ಸಂತೋಷ ಲಾಡ್, ಜಿ.ಪಂ.ಮಾಜಿ ಸದಸ್ಯ ವಾಯ್.ಬಿ.ದಾಸನಕೊಪ್ಪ , ಆಯ್.ಸಿ.ಗೋಕುಲ, ಮುಂತಾದವರು ಭಾಗವಹಿಸುವರು. ಸಹಸ್ರ ಸಂಖ್ಯೆಯಲ್ಲಿ ಸದ್ಭಕ್ತರು ಆಗಮಿಸಿ ಶ್ರೀ ಗಣಪತಿ ದೇವರ ಕೃಪೆಗೆ ಪಾತ್ರರಾಗಬೇಕೆಂದು ಪ್ರಕಟನೆಗೆ ತಿಳಿಸಿದ್ದಾರೆ.

Related posts

ಆಯುಷ್ ವಿವಿ ಸೇರಿ 8 ವಿಧೇಯಕ ಅಂಗೀಕಾರ

eNewsLand Team

ಕಡಲೆ ಖರೀದಿ ಕೇಂದ್ರ ತೆರೆಯಲು ಆಗ್ರಹಿಸಿ ಅಮರಣ ಉಪವಾಸ ಸತ್ಯಾಗ್ರಹ

eNEWS LAND Team

ಹುಬ್ಬಳ್ಳಿ ವಾ.ಕ.ರ.ಸಾ.ಸಂಸ್ಥೆಯಲ್ಲಿ : ವಾಲ್ಮೀಕಿ ಜಯಂತಿ

eNEWS LAND Team