22 C
Hubli
ಏಪ್ರಿಲ್ 20, 2024
eNews Land
ತಂತ್ರಜ್ಞಾನ ದೇಶ ರಾಜ್ಯ ಸುದ್ದಿ

ಮುಂದಿನ ವರ್ಷದಿಂದ ಜಿಲ್ಲಾ ಕೇಂದ್ರಗಳಲ್ಲಿ ಸರ್.ಎಮ್.ವಿ ಜನ್ಮ ದಿನಾಚರಣೆ: ಸಿಎಂ ಬೊಮ್ಮಾಯಿ

ಇಎನ್ಎಲ್ ಬೆಂಗಳೂರು: ಮುಂದಿನ ವರ್ಷ ಸರ್ಕಾರದ ವತಿಯಿಂದ  ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಸರ್.ಎಮ್.ವಿಶ್ವೇಶ್ವರಯ್ಯ ಜನ್ಮ ದಿನಾಚರಣೆ ಆಯೋಜನೆ  ಮಾಡಲಾಗುವುದು  ಎಂದು ಮುಖ್ಯಮಂತ್ರಿ ಬೊಮ್ಮಾಯಿ ತಿಳಿಸಿದ್ದಾರೆ. 

ಶ್ರಮಿಕ್ ಸಂಜೀವಿನಿ ಸಂಚಾರಿ ಚಿಕಿತ್ಸಾ ಘಟಕ ವಾಹನಕ್ಕೆ ಚಾಲನೆ: ಶ್ರಮಿಕರ ಮನೆ ಬಾಗಿಲಿಗೆ ಆರೋಗ್ಯ ಸೇವೆ ಎಲ್ಲಿದೆ ನೋಡಿ?

ಇಂದು ಕರ್ನಾಟಕ ಇಂಜಿನಿಯರಿಂಗ್ ಸೇವಾ ಸಂಘ ಹಾಗೂ ಕರ್ನಾಟಕ ಇಂಜಿನಿಯರುಗಳ ಸಂಘದ ಸಹಭಾಗಿತ್ವದಲ್ಲಿ ಕೆ.ಆರ್.ವೃತ್ತದ ಬಳಿ  ಆಯೋಜಿಸಿದ್ದ ಅಭಿಯಂತರರ ದಿನಾಚರಣೆ ಕಾರ್ಯಕ್ರಮದಲ್ಲಿ ಭಾರತರತ್ನ ಸರ್.ಎಂ.ವಿಶ್ವೇಶ್ವರಯ್ಯ ಅವರ ಪುತ್ಥಳಿಗೆ  ಪುಷ್ಪನಮನ ಸಲ್ಲಿಸಿದ ನಂತರ ಮಾಧ್ಯಮದವರೊಂದಿಗೆ ಮಾತನಾಡಿದರು.

ಆಸ್ಟ್ರೇಲಿಯಾ ದೇಶದ ಕನ್ನಡ ಸಾಹಿತ್ಯ ಪರಿಷತ್ತಿನ ಘಟಕದ ಗೌರವ ಅಧ್ಯಕ್ಷ ಸತೀಶ್ ಭದ್ರಣ್ಣ ನೇಮಕ

ಸರ್.ಎಂ.ವಿಶ್ವೇಶ್ವರಯ್ಯ ಅವರ ಜನ್ಮ ದಿನವನ್ನು ಇಂಜಿನಿಯರ್ಸ್ ದಿನವನ್ನಾಗಿ ಆಚರಿಸುತ್ತೇವೆ. ಈ ವರ್ಷ ಭಾರತ ಸರ್ಕಾರವೂ ಕೂಡ ಅಧ್ಯಯನ ಮಾಡಿ ಎಲ್ಲಾ ರಾಜ್ಯಗಳಲ್ಲಿ  ಸರ್ಕಾರವೇ ಅಭಿಯಂತರರ ದಿನಾಚರಣೆ ಆಚರಿಸಲು ಸೂಚಿಸಿದೆ. ನಮ್ಮ ರಾಜ್ಯದಲ್ಲಿ ಈಗಾಗಲೇ ಆಚರಣೆ ಮಾಡಿಕೊಂಡು ಬರಲಾಗುತ್ತಿದೆ ಎಂದರು. ಸರ್.ಎಂ.ವಿಶ್ವೇಶ್ವರಯ್ಯ ಅವರು ಕನ್ನಡನಾಡಿನ ಅತ್ಯಂತ ಹೆಮ್ಮೆಯ ಪುತ್ರ. ಅವರು ಸದಾ ಕಾಲ ನಮಗೆ ಪ್ರೇರಣೆ. ಕನ್ನಡ ನಾಡು ಕಟ್ಟಿದ ಧೀಮಂತ ವ್ಯಕ್ತಿ ಎಂದರು.

 ಸಾಕ್ಷರತಾ ಕಾರ್ಯಕ್ರಮಗಳ ಅನುಷ್ಠಾನ: ಸಾಮೂಹಿಕ ಜವಾಬ್ದಾರಿ
ಸರ್. ಎಂ.ವಿಶ್ವೇಶ್ವರಯ್ಯ ಅವರ ಹೆಸರಿನಲ್ಲಿಯೇ ಸ್ಫೂರ್ತಿ ಇದೆ. 90 ವರ್ಷಕ್ಕಿಂತ ಹೆಚ್ಚು ಕಾಲ ಬಾಳಿ ಬದುಕಿದ ಅವರ ಬದುಕಿನ ಪ್ರತಿ ಕ್ಷಣವೂ ನಾಡಿನ, ದೇಶನ ಅಭಿವೃದ್ಧಿ, ಜನರ ಒಳಿತಿಗಾಗಿ ಹತ್ತು ಹಲವು ಕಾರ್ಯಕ್ರಮಗಳನ್ನು ಜಾರಿಗೆ ತಂದರು. ಇಷ್ಟು ವೈವಿಧ್ಯಮಯ ಜ್ಞಾನ ಮತ್ತು ಬದ್ಧತೆ ಇರುವ ವ್ಯಕ್ತಿಗಳು ಬಹಳ ಕಡಿಮೆ. ನಿಜವಾದ ದೇಶಭಕ್ತರು, ನಾಡು ಕಟ್ಟಿದವರು. ಕೇವಲ ಅಣೆಕಟ್ಟುಗಳನ್ನು, ರಸ್ತೆಗಳನ್ನು ಮಾತ್ರ ನಿರ್ಮಾಣ ಮಾಡಲಿಲ್ಲ. ಇಂಧನ ಕ್ಷೇತ್ರದಲ್ಲಿಯೂ ಅವರ ಕೊಡುಗೆ ಅಪಾರ. ಬೃಹತ್ ಕಾರ್ಖಾನೆಗಳ ನಿರ್ಮಾಣವನ್ನು ಕೂಡ ಮಾಡಿದರು ಎಂದರು.

ಶೇ.60 ಕ್ಕಿಂತ ಹೆಚ್ಚು ಅಂಕ ಪಡೆದ ಪ.ಜಾ ಮತ್ತು ಪ.ಪಂ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನ

ಕರ್ನಾಟಕ ರಾಜ್ಯದ ಅಧೀನದಲ್ಲಿರುವ  ವಿಶ್ವೇಶ್ವರಯ್ಯ ಉಕ್ಕು ಕಾರ್ಖಾನೆ, ಸಿಮೆಂಟ್, ಕಾಗದ ಮುಂತಾದ ಕಾರ್ಖಾನೆಗಳನ್ನು ಮೈಸೂರು ಮಹಾರಾಜರ ಆಶ್ರಯದಲ್ಲಿ ಆರಂಭಿಸಿದರು. ಕೆ.ಆರ್.ಎಸ್ ಅಣೆಕಟ್ಟು ಕಟ್ಟಿ ನಮ್ಮ ಕಾವೇರಿ ಜಲಾನಯನ ಭಾಗದ ರೈತರಿಗೆ ದೊಡ್ಡ ಕೊಡುಗೆ ನೀಡಿದ್ದಾರೆ. ಸಾಮಾಜಿಕ ಬದ್ಧತೆಯನ್ನು ಸಹ ಮೆರೆದ ಅವರು ಹೆಣ್ಣುಮಕ್ಕಳಿಗೆ ವಿಶೇಷವಾಗಿ ಕಾಲೇಜುಗಳ ನಿರ್ಮಾಣ, ಮೀಸಲಾತಿ, ಆರ್ಥಿಕ ವಲಯದಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಮೈಸೂರು ಪ್ರಾರಂಭಿಸಿದರು. ಎಲ್ಲಾ ಕ್ಷೇತ್ರಗಳಲ್ಲಿ ತಮ್ಮ ಕ್ರಿಯಾಶೀಲತೆ ಮೆರೆದಿದ್ದಾರೆ ಎಂದರು.
ಈ ವೇಳೆ ಸಚಿವರಾದ ಗೋವಿಂದ ಕಾರಜೋಳ, ಸಿ.ಸಿ.ಪಾಟೀಲ್, ಆನಂದ್ ಸಿಂಗ್, ಬಿಬಿಎಂಪಿ ಆಡಳಿತಾಧಿಕಾರಿ ಹಾಗೂ ಅಪರ ಮುಖ್ಯ ಕಾರ್ಯದರ್ಶಿ ರಾಕೇಶ್ ಸಿಂಗ್ ಕೆ.ಇ.ಎಸ್.ಎ. ಅಧ್ಯಕ್ಷ ಪೀತಾಂಬರಸ್ವಾಮಿ ಮೊದಲಾದವರು ಉಪಸ್ಥಿತರಿದ್ದರು.

ಶರಣ ಹೂಗಾರ ಮಾದಯ್ಯ ಜಯಂತಿ ಹಾಗೂ ಹೂಗಾರ ಸಮಾಜದ ಪ್ರಥಮ ಸಮಾವೇಶ

Related posts

ಮಾನವೀಯತೆ ಮರೆತು ಲಂಚ ಕೇಳಿದ್ದವರು ಎಸಿಬಿ ಕೆಡ್ಡಾಕ್ಕೆ ಬಿದ್ದರು! ಇಲ್ಲಿದೆ ಹುಬ್ಬಳ್ಳಿ ಭ್ರಷ್ಟಿಗಳ ಕಥೆ

eNewsLand Team

ಕಟ್ಟುನಿಟ್ಟಾಗಿ ಪಾರದರ್ಶಕ ನಿಷ್ಪಕ್ಷಪಾತ ಚುನಾವಣೆಗೆ ಕ್ರಮವಹಿಸಿ: ಅಪರ ಜಿಲ್ಲಾಧಿಕಾರಿ ಶಿವಾನಂದ ಭಜಂತ್ರಿ

eNewsLand Team

ಹುಬ್ಬಳ್ಳಿ-ಲಕ್ಷ್ಮೇಶ್ವರ ರಸ್ತೆಯ ಶಿರೂರ ಸಮೀಪದ ಮೇಲ್ಸೇತುವೆ ಕಾಮಗಾರಿ ಬಹುಬೇಗನೆ ಮುಗಿಸಿ ಎಂದ : ಕರವೇ

eNEWS LAND Team