37 C
Hubli
ಮೇ 8, 2024
eNews Land
ಸುದ್ದಿ

ಬಿಸಿಗಾಳಿಗೆ ಐವತ್ತು ಸಾವು? ಘೋರ ದುರಂತ ಆಗಿರೋದೆಲ್ಲಿ? ರೆಡ್ ಅಲರ್ಟ್!!

ಇಎನ್ಎಲ್ ಡೆಸ್ಕ್

ಹವಾಮಾನ ವೈಪರೀತ್ಯಗಳ‌ ದುಷ್ಪರಿಣಾಮ ಹೆಚ್ಚಾಗಿದ್ದು, ತಾಪಮಾನದ ಏರಿಕೆಗೆ ಉತ್ತರ ಭಾರತ ತತ್ತರಿಸುತ್ತಿದೆ. ಕಳೆದ ಇಪ್ಪತ್ನಾಲ್ಕು ಗಂಟೆಗಳಲ್ಲಿ ಬಿಹಾರ, ಉತ್ತರ ಪ್ರದೇಶ ರಾಜ್ಯಗಳಲ್ಲಿ 50 ಜನ ಬಿಸಿಗಾಳಿಯಿಂದಾಗಿ ಮೃತಪಟ್ಟಿದ್ದಾರೆ ಎಂದು ರಾಷ್ಟ್ರೀಯ ವಾಹಿನಿಯೊಂದು ವರದಿ ಮಾಡಿದೆ. ಈ ಘಟನೆ ಅಕ್ಷರಶಃ ಬೆಚ್ಚಿ ಬೀಳಿಸುವಂತಿದೆ‌.

ಹವಾಮಾನ ಇಲಾಖೆಯು ಬಿಹಾರ ರಾಜ್ಯದ ನೈಋತ್ಯ ಭಾಗದ 6 ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಘೋಷಣೆ ಮಾಡಿದೆ. ಜೊತೆಗೆ ದಕ್ಷಿಣ ಭಾಗದ 12 ಜಿಲ್ಲೆಗಳಲ್ಲಿ ಆರೆಂಜ್ ಅಲರ್ಟ್ ಘೋಷಣೆ ಮಾಡಿದೆ. ಅಲ್ಲದೇ ಪ್ರತ್ಯೇಕ ಒಂಭತ್ತು ಸ್ಥಳಗಳಲ್ಲಿ ಭಾನುವಾರದವರೆಗೆ ಯಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದೆ.

ರಾಜ್ಯದ ಶೇಖಾಪುರ ಪ್ರದೇಶ ಅತೀ ಗರಿಷ್ಠ ಪ್ರಮಾಣದ ಅಂದರೆ 44 ಡಿಗ್ರಿ ಸೆಲ್ಸಿಯಸ್, ಪಾಟ್ನಾ 43.6 ಡಿ.ಸೆ. ಗಳಷ್ಟು ತಾಪಮಾನವನ್ನು ಎದುರಿಸಿದೆ.

ರೆಡ್ ಅಲರ್ಟ್:
ಔರಂಗಾಬಾದ್, ರೋಥಾಸ್, ಭೋಜಪುರ, ಬಕ್ಸಾರ್, ಕೈಮೂರ್ ಹಾಗೂ ಅರ್ವಾಲ್ ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಇದೆ.
ಆರೆಂಜ್ ಅಲರ್ಟ್:
ಪಾಟ್ನಾ, ಬೆಗುಸಾರಾಯೈ, ಖಗಾರಿಯಾ, ನಳಂದಾ, ಬಂಕಾ, ಶೇಖಾಪುರ, ಜುಮೈ ಹಾಗೂ ಲಕ್ಷಿಸಾರಾಯೈ ಪ್ರದೇಶಗಳು ಆರೆಂಜ್ ಅಲರ್ಟ್ ಘೋಷಿಸಿವೆ.
ಯಲ್ಲೋ ಅಲರ್ಟ್:
ಪೂರ್ವ ಚಂಪಾರಣ್,‌ ಗಯಾ, ಬಗ್ಲಾಪುರ,‌ ಜೆಹಾನಾಬಾದ್ ಪ್ರಮುಖ ಪ್ರದೇಶದಲ್ಲಿ ‌ಯಲ್ಲೋ ಅಲರ್ಟ್ ಇದೆ.

ಉತ್ತರ ಪ್ರದೇಶ: ಇನ್ನು, ಉತ್ತರ ಪ್ರದೇಶದಲ್ಲಿ ಎರಡು ದಿನದಿಂದ ತೀವ್ರ ಬಿಸಿ ಗಾಳಿಯ ವಾತಾವರಣವಿದ್ದು 34 ಮಂದಿ ಮೃತಪಟ್ಟಿದ್ದಾರೆ. ಈ ಎಲ್ಲರೂ ಬಿಸಿಗಾಳಿ ವಾತಾವರಣದ ಕಾರಣದಿಂದಲೇ ಅಸ್ವಸ್ಥಗೊಂಡು ಬಲಿಯಾ ಜಿಲ್ಲಾ ಆಸ್ಪತ್ರೆಗೆ ದಾಖಲಾಗಿದ್ದರು ಎನ್ನಲಾಗಿದೆ.

ಗುರುವಾರ 23 ಜನರು ಮತ್ತು ಶುಕ್ರವಾರ 11 ಜನ ಮೃತಪಟ್ಟಿದ್ದಾರೆ. ಈ ಎಲ್ಲರೂ 50 ರಿಂದ 60 ವರ್ಷ ವಯೋಮಾನದವರು.

ಬಲಿಯಾ ಜಿಲ್ಲಾ ಮುಖ್ಯ ವೈದ್ಯಾಧಿಕಾರಿ ಡಾ. ಜಯಂತ್‌ ಕುಮಾರ್‌ ಅವರು, ಬಿಸಿಗಾಳಿಯಿಂದಲೇ ಈ ಸಾವುಗಳು ಸಂಭವಿಸಿವೆ ಎಂಬ ವರದಿ ನಿರಾಕರಿಸಿದ್ದಾರೆ. 50–60 ವರ್ಷ ವಯಸ್ಸಿನ ಈ ಎಲ್ಲರಿಗೂ ಭಿನ್ನ ಅನಾರೋಗ್ಯ ಸಮಸ್ಯೆಗಳಿದ್ದವು. ಅವರಿಗೆ ಉತ್ತಮ ಚಿಕಿತ್ಸೆ ಒದಗಿಸಿದ್ದರೂ, ಚಿಕಿತ್ಸೆಗೆ ಸ್ಪಂದಿಸಲಿಲ್ಲ ಎಂದು ಹೇಳಿದರು.

ಆಸ್ಪತ್ರೆ ಸೂಪರಿಂಟೆಂಡೆಂಟ್ ಡಾ.ದಿವಾಕರ್ ಸಿಂಗ್, ‘ಎಲ್ಲರೂ ಅನಾರೋಗ್ಯದಿಂದ ಬಳಲುತ್ತಿದ್ದರು. ಬಿಸಿಗಾಳಿಯಿಂದ ಆರೋಗ್ಯ ಇನ್ನಷ್ಟು ಹದಗೆಟ್ಟಿತು. ರೋಗಿಗಳಿಗೆ ನೆರವಾಗುವಂತೆ ಆಸ್ಪತ್ರೆಯಲ್ಲಿ ಹವಾನಿಯಂತ್ರಿತ ವ್ಯವಸ್ಥೆ, ಫ್ಯಾನ್‌, ಕೂಲರ್‌ ಒದಗಿಸಲಾಗಿತ್ತು ಎಂದರು.

ಉತ್ತರಪ್ರದೇಶದ ಹಲವು ಜಿಲ್ಲೆಗಳಲ್ಲಿ ಕಳೆದ ಕೆಲ ದಿನಗಳಿಂದ ಬಿಸಿಗಾಳಿಯ ವಾತಾವರಣವಿದೆ. ದಿನದ ಗರಿಷ್ಠ ಉಷ್ಟಾಂಶ 42–43 ಡಿಗ್ರಿ ಸೆಲ್ಸಿಯಸ್‌ವರೆಗೂ ತಲುಪಿದೆ. ವಿದ್ಯುತ್‌ ಕಡಿತದ ಕಾರಣ ಗ್ರಾಮೀಣ ಭಾಗದಲ್ಲಿ ಪರಿಸ್ಥಿತಿ ಬಿಗಡಾಯಿಸಿದೆ.

Related posts

ಕನಕದಾಸರ ತತ್ವಪದ ಪ್ರಸ್ತುತ ಸಮಾಜಕ್ಕೆ ಮಾದರಿ:ಬಸವರಾಜ ಕುಬಸದ

eNEWS LAND Team

ಹುಬ್ಬಳ್ಳಿ ವಿಮಾನ ನಿಲ್ದಾಣದ ಟರ್ಮಿನಲ್ ವಿಸ್ತರಣೆಗೆ ರೂ. 273 ಕೋಟಿ ಬಿಡುಗಡೆ : ಸಚಿವ ಜೋಶಿ

eNEWS LAND Team

ಥಾಲಾ ಇಸ್ ಬ್ಯಾಕ್!! ಅರ್ಧಶತಕ ಭಾರಿಸಿ ಧೋನಿ ಮ್ಯಾಜಿಕ್..ವಿಸಿಲ್ ಪೋಡು!

eNewsLand Team