35 C
Hubli
ಮಾರ್ಚ್ 29, 2024
eNews Land
ಸುದ್ದಿ

ಮುಂಬೈಗೆ ಓಡಿಹೋಗಿದ್ದ ಹುಬ್ಬಳ್ಳಿ ಗಲಭೆಕೋರ ವಾಸೀಂ ಅಂದರ್! ಕಾರ್ಯಾಚರಣೆ ಹೇಗಿತ್ತು ಗೊತ್ತಾ?

 ಇಎನ್ಎಲ್ ಹುಬ್ಬಳ್ಳಿ

ಹಳೇ ಹುಬ್ಬಳ್ಳಿ ಗಲಭೆ ಪ್ರಕರಣಕ್ಕೆ ಸಂಬಂಧಿಸಿ ಪ್ರಕರಣದ ಮಾಸ್ಟರ್ ಮೈಂಡ್ ಎಂದೇ ಬಿಂಬಿತವಾಗಿರುವ ಪ್ರಮುಖ ಆರೋಪಿ  ವಾಸಿಮ್ ಪಠಾಣ್‌ನನ್ನು ಗುರುವಾರ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.

ಮುಂಬೈನಲ್ಲಿ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿರುವ ಪೊಲೀಸರು, ಆತನನ್ನು ಹುಬ್ಬಳ್ಳಿಗೆ ಕರೆ ತಂದಿದ್ದಾರೆ. ಶೀಘ್ರದಲ್ಲೇ ಆರೋಪಿಯನ್ನು ಕೋರ್ಟ್‌ಗೆ ಹಾಜರುಪಡಿಸುವ ಸಾಧ್ಯತೆ ಇದೆ. ಆರೋಪಿಯ ಪತ್ತೆಗಾಗಿ ಅಂತಾರಾಜ್ಯ ಮಟ್ಟದಲ್ಲಿ ಬಲೆ ಬೀಸಿದ್ದ ಪೊಲೀಸರು, ವಾಸಿಮ್ ಬಂಧನಕ್ಕೆ ಮುಂಬೈಗೆ ತಂಡವೊಂದನ್ನ ಕಳಿಸಿದ್ದರು.

ಈ ವಿಡಿಯೋ ಬಿಡುಗಡೆಯಾದ 3 ಗಂಟೆಗಳಲ್ಲೇ ಆರೋಪಿಯನ್ನು ಪೊಲೀಸರು ಬಂಧಿಸಿದ್ದು, ಇದೀಗ ಮುಂಬೈನಿಂದ ಹುಬ್ಬಳ್ಳಿಗೆ ಕರೆತಂದಿದ್ದಾರೆ. ಮೌಲ್ವಿಯ ವಿಚಾರಣೆ ಬಳಿಕ ಕೋರ್ಟ್‌ಗೆ ಹಾಜರುಪಡಿಸಬೇಕೋ, ಬಂಧಿಸಬೇಕೋ ಎಂಬುದರ ಕುರಿತಾಗಿ ಪೊಲೀಸರು ತೀರ್ಮಾನ ಕೈಗೊಳ್ಳಲಿದ್ದಾರೆ.

ಕಾರ್ಯಾಚರಣೆ ಹೇಗಿತ್ತು?
ಕಳೆದ ಮಂಗಳವಾರದಿಂದಲೇ ಪರಾರಿಯಾಗಿದ್ದ ವಾಸಿಂ ಪಠಾಣ್, ಗುರುವಾರ ಬೆಳಗ್ಗೆ ಅಜ್ಞಾತ ಸ್ಥಳದಲ್ಲಿ ಕುಳಿತು 4 ನಿಮಿಷಗಳ ವಿಡಿಯೋ ಬಿಡುಗಡೆ ಮಾಡಿದ್ದ. ಈ ಘಟನೆಗೂ ತನಗೂ ಯಾವುದೇ ಸಂಬಂಧವಿಲ್ಲ ಎಂದಿದ್ದ ಮೌಲ್ವಿ, ತಾನು ನಿರಪರಾಧಿ ಎಂದು ಹೇಳಿಕೊಂಡಿದ್ದ.

ಈತನ ಪತ್ತೆಗಾಗಿಯೇ ಮಹಾನಗರ ಪೊಲೀಸ್ ಆಯುಕ್ತ ಲಾಬೂರಾಮ್ ವಿಶೇಷ ತಂಡ ತನ್ನ ರಚನೆ ಮಾಡಿದ್ದರು. ಕೇಶ್ವಾಪುರ ಪೊಲೀಸ್ ಇನ್ಸ್ಪೆಕ್ಟರ್ ಜಗದೀಶ್ ಹಂಚಿನಾಳ ನೇತೃತ್ವದಲ್ಲಿ ತಂಡ ಈತನಿಗಾಗಿ ಬಲೆ ಬೀಸಿತ್ತು. ಡಿಜಿಟಲ್ ಸಾಕ್ಷ್ಯ, ಘಟನೆ ನಡೆದ ಬಳಿಕ ಈತನ ಚಲನವಲನ, ಹೆಜ್ಜೆ ಜಾಡನ್ನು ಹಿಡಿದು ಹೋದ ಪೊಲೀಸರು ಈತನನ್ನು ಅಡಗಿದ್ದ ಸ್ಥಳದಲ್ಲೇ ಬಂಧಿಸಿದ್ದಾರೆ. ಬಳಿಕ ರಸ್ತೆ ಮಾರ್ಗವಾಗಿ ಕರೆತರಲಾಗಿದೆ ಎಂದು ಮೂಲಗಳು ತಿಳಿಸಿವೆ.

Related posts

ಹುಬ್ಬಳ್ಳಿಲಿ ಡಿ.ಕೆ.ಶಿ, ಸಿದ್ದರಾಮಯ್ಯ ಸುಟ್ಟಿದ್ದು ಯಾಕೆ ಗೊತ್ತಾ?

eNEWS LAND Team

ಸಿಬ್ಬಂದಿ ನೇಮಕಾತಿ ಆಯೋಗದ ಕನ್ನಡ ವಿರೋಧಿ ನೀತಿ ವಿರುದ್ಧ ನ್ಯಾಯಾಂಗ ಹೋರಾಟಕ್ಕೆ ಚಿಂತನೆ: ಕಸಾಪ

eNewsLand Team

ಮೆಕ್ಕೆಜೋಳ ಬೆಳೆಯುವ ರೈತರು ತಪ್ಪದೇ ನೋಡಿ, ಗಂಗಾ ಕಾವೇರಿ ಸೀಡ್ಸ್ ಕಂಪನಿಗೆ ದಂಡ!

eNEWS LAND Team