24 C
Hubli
ಮಾರ್ಚ್ 21, 2023
eNews Land
ಸುದ್ದಿ

ಮಲ್ಲೇಶ ಗುರುಸ್ವಾಮಿ ನೇತೃತ್ವದಲ್ಲಿ ಶಬರಿಮಲೆ ಯಾತ್ರೆ

Listen to this article

ಇಎನ್ಎಲ್ ಹುಬ್ಬಳ್ಳಿ: ಇಲ್ಲಿನ ಗೋಕುಲ ರಸ್ತೆಯ ಇಂಡಸ್ಟ್ರಿಯಲ್ ಫಸ್ಟ್ ಗೇಟಿನ ಗಣೇಶ ದೇವಸ್ಥಾನದಲ್ಲಿ 15ಕ್ಕೂ ಹೆಚ್ಚು ಅಯ್ಯಪ್ಪ ಸ್ವಾಮಿ ಮಾಲಾಧಾರಿಗಳು ಇಂದು ಪೂಜಾ ಕಾರ್ಯಕ್ರಮ ಹಾಗೂ ಇರ್ಮುಡಿ ಕಟ್ಟಿದರು. ಹೆಚ್ಚು ಅಯ್ಯಪ್ಪ ಸ್ವಾಮಿಯ ಭಕ್ತಾದಿಗಳನ್ನು ಒಗ್ಗೂಡಿಸದೆ, ಪೂಜಾ ಕಾರ್ಯಕ್ರಮಗಳು ನೆರವೇರಿಸಲಾಯಿತು ಎಂದು ಸತತ 26ವರ್ಷಗಳ ಮಾಲಾಧಾರಿ ಗುರುಸ್ವಾಮಿಗಳಾದ ಮಲ್ಲೇಶ ಬೆಟಗೇರಿ ತಿಳಿಸಿದರು, ಮತ್ತು ಕೋವಿಡ್ ನಿಯಮ ಪಾಲನೆ ಮಾಡಿ, ಶಬರಿಮಲೆ ಯಾತ್ರೆಗೆ ಪ್ರಯಾಣ ಬೆಳೆಸಿದರು.

ಈ ಸಂದರ್ಭದಲ್ಲಿ ಗುರುಸ್ವಾಮಿಗಳಾದ ಮಲ್ಲೇಶ ಬೆಟಗೇರಿ, ಗಂಗಾಧರ ಭೂರೆ, ಶಶಿಕಾಂತ ಬಿಜವಾಡ, ಯಾದವ ಈಟಿ, ಶಿವಾನಂದ ಸಣ್ಣಕುಂಬಾರ, ಮಲ್ಲಯ್ಯ ಪೂಜಾರ, ಯಲ್ಲಪ್ಪ ಹಂಜಗಿ, ರಂಗನಾಥ ಪೂಜಾರಿ, ನಾಗರಾಜ ಹೊಸಮನಿ,    ಸಿದ್ದು ಪೂಜಾರಿ, ಈಶ್ವರ ಹೊಸಮನಿ, ಈರಣ್ಣ ಪತ್ತಾರ, ಅನಿಲ ಬಾಬ್ಜಿ, ಮಂಜುನಾಥ, ಮುರಳಿ ಸ್ವಾಮಿ ಇದ್ದರು.

Related posts

ಯುನೆಸ್ಕೋ ಪಟ್ಟಿಗೆ ಕೋಲ್ಕತ್ತಾ ದುರ್ಗಾಪೂಜೆ!!

eNewsLand Team

ಹುಬ್ಬಳ್ಳಿ ಶ್ರೀ ಸಿದ್ಧಾರೂಢ ಮಠದಲ್ಲಿ ಗುರು ಪೂರ್ಣಿಮಾ ಅದ್ಧೂರಿ ಆಚರಣೆ

eNEWS LAND Team

40 ವರ್ಷದಲ್ಲಿ ಇಂಥ ಮಾತು ಕೇಳಿರಲಿಲ್ಲ: ಸಭಾಪತಿ ಹೊರಟ್ಟಿ ನೋವಿನಿಂದ ಮಾತಾಡಿದ್ಯಾಕೆ? ನೋಡಿ!

eNewsLand Team