24.8 C
Hubli
ಏಪ್ರಿಲ್ 25, 2024
eNews Land
ಸುದ್ದಿ

ಅಣ್ಣಿಗೇರಿ ರುದ್ರಮುನಿ ಶ್ರೀಗಳ ಪುಣ್ಯಾರಾಧನೆ

ವಚನ ಹೂಗಾರ
ಇಎನ್ಎಲ್ ಅಣ್ಣಿಗೇರಿ: ಐತಿಹಾಸಿಕ, ಸಾಹಿತ್ಯಿಕ, ಪೌರಾಣಿಕ ಹಿನ್ನಲೆಯ ಆದಿಕವಿ ಪಂಪನ ಜನ್ಮಸ್ಥಳ ಅಣ್ಣಿಗೇರಿ. ಬಾದಾಮಿ, ಚಾಲುಕ್ಯರು, ಹೊಯ್ಸಳರು, ಮಾದವರು, ಕದಂಬರು, ವಿಜಯನಗರದ ಅರಸರು, ಆದಿಲ್ ಶಾಹಿ ಸುಲ್ತಾನರು, ಮರಾಠರು, ಬ್ರಿಟಿಷರು, ಆದಿಪತ್ಯಕ್ಕೆ ಒಳಪಟ್ಟ ಚಾರಿತ್ರಿಕ  ನಗರದಲ್ಲಿ ಬಸವಲಿಂಗ ಶ್ರೀಗಳು, ಗುದ್ನೆಪ್ಪಜ್ಜ , ನಾಗಲಿಂಗಜ್ಜ, ಮಡಿವಾಳಜ್ಜ, ಶಿಶುನಾಳ ಶರೀಫರು, ದತ್ತಾವಧೂತರು, ನಡೆದಾಡಿದ ತಪೋಭೂಮಿ.
ರಾಜಯೋಗಿ ತೋಟಪ್ಪ ದೇಸಾಯಿ ಸಿದ್ಧಾರೂಡರ ಆದೇಶದ ಮೇರೆಗೆ ಅದ್ವೈತ ಪರಂಪರೆಗೆ ಭದ್ರ ಬುನಾದಿ ಹಾಕಲು ಜಮೀನು ಮಾರಾಟ ಮಾಡಿ 1906 ರಲ್ಲಿ ದಾಸೋಹಮಠ ಕಟ್ಟಿದರು. ಫಕ್ಕೀರಗೌಡ ದೇಸಾಯಿ ಅವರ 3ನೇ ಮಗ ತೋಟಪ್ಪ ದೇಸಾಯಿ. ಮದುವೆ ಬಂಧನಕ್ಕೆ ಒಳಗಾಗಿ ಕೆಲವೇ ದಿನಗಳಲ್ಲಿ ಪತ್ನಿ ಹಾಗೂ ಪುತ್ರ ವಿಯೋಗ ಹೊಂದಿದರು. ಪ್ರಪoಚದ ವ್ಯಾಮೋಹ ತೊರೆದು ಸಂಗಡಿಗರೊoದಿಗೆ  ತಮ್ಮ ಬಳಿಯಿದ್ದ ಬಂಗಾರ ಆಭರಣಗಳನ್ನೂ ಕೂಡಾ ಮಾರಾಟ ಮಾಡಿ ಉಳವಿ ಹಾಗೂ ಗೋಕರ್ಣ ಕಡೆಗೆ ಯಾತ್ರೆ ಕೈಗೊಂಡು ಅನ್ನದಾಸೋಹ ಮಾಡುತ್ತಾ ಸಾಗಿದರು. ನಂದ್ಯಾಲದ ಶಂಕರೆಂದ್ರ ಶ್ರೀಗಳ ಉಪದೇಶ ಕೇಳಿದ ನಂತರ ಲೌಕಿಕ ಇಚ್ಛೆಗಳನ್ನು ತೊರೆದು ಪುಣ್ಯಕ್ಷೇತ್ರಗಳನ್ನು ಸಂಚರಿಸಿ ಸೇವಾನುಸಕ್ತರಾಗಿ ಕೈವಲ್ಯ ಪಡಯಲು ಬಂದಿರುವ ವಿರಕ್ತಶೀಲರಾದ ತೋಟಪ್ಪ ಗುರುಸೇವೆಯಲ್ಲಿ ತೊಡಗಿದರು.

ಪೋತನಾಳದಲ್ಲಿ ಶಂಕರೆಂದ್ರ ಶ್ರೀಗಳ ದಿವ್ಯದೃಷ್ಠಿಯ ಫಲವಾಗಿ ರುದ್ರಮುನಿ ಶ್ರೀಗಳು ವಿರತಿಗೆ ಅನುಗುಣವಾಗಿ ಪರಿಚಯವಾಯಿತುಶಂಕರೇoದ್ರ ಶ್ರೀಗಳ ಸಾನಿಧ್ಯದಲ್ಲಿ ಪುಣ್ಯಕ್ಷೇತ್ರಗಳ ಯಾತ್ರೆ ಮುಗಿಸಿ, ಒಂದು ವರ್ಷ ಸಿದ್ದಾರೂಢರ ಒಡನಾಟದಲ್ಲಿ ಕಳೆದರು. ಅವರ ಆಜ್ಞೆಯಂತೆ ರುದ್ರಮುನಿ ಶ್ರೀಗಳೇ ನಿನ್ನ ಗುರು ಎಂದು ತಿಳಿಸಿ ಅವರನ್ನು ಕರೆದುಕೊಂಡು ಹೋಗಿ ಧಾರ್ಮಿಕ ಸತ್ಕಾರ್ಯಗಳನ್ನು ಮಾಡಿರಿ ಎಂದು ಅಪ್ಪಣೆ ನೀಡಿದರು.

ಅಣ್ಣಿಗೇರಿಯ ಸ್ವಂತ ಸ್ಥಳದಲ್ಲಿ ಶಂಕರೆಂದ್ರ ಶ್ರೀಗಳ ಅಮೃತ ಹಸ್ತದಿಂದ ಅನ್ನಪೂರ್ಣೆಯನ್ನು ಪ್ರತಿಷ್ಠಾಪನೆ ಮಾಡುವ ಮೂಲಕ ದಾಸೋಹಮಠ ಜನ್ಮತಾಳಿತು.ರುದ್ರಮುನಿಗಳೇ ನಿನ್ನ ಸದ್ಗುರು. ಮಠದಲ್ಲಿ ಧಾರ್ಮಿಕ ಪ್ರಕ್ರಿಯೆ ಮಾಡುತ್ತಾ ಅವರ ಸೇವೆಯಲ್ಲಿ ತೊಡುಗುವುದೇ ನಿನಗೆ ಮುಕ್ತಿ ಮಾರ್ಗವೆಂದು ತೋಟಪ್ಪ ದೇಸಾಯಿ ಅವರಿಗೆ ಶಂಕರೆಂದ್ರ ಶ್ರೀಗಳು ಹೇಳಿದರು. ಮಠಕ್ಕೆ ಜಮೀನು ನೀಡಿದರು. ಭೂ ಸುಧಾರಣೆ ಕಾಯ್ದೆಯಂತೆ ಭೂಮಿ ಇಲ್ಲದಾಯಿತು. ಗುರುವಿಗಾಗಿ ತಮ್ಮ ಬಾವಿ ಬಳಿ ಪೂಜಾಗ್ರಹ, ವಿಶ್ರಾಂತಿ ಗ್ರಹ, ನಿರ್ಮಿಸಿದರು. ಗಡ್ಡಿತೇರನ್ನು ತಯಾರಿಸಿಕೊಟ್ಟರು. ತೋಟಪ್ಪ ದೇಸಾಯಿ ತಮ್ಮ ಕರ್ತವ್ಯ ನಿರ್ವಹಿಸಿ 1953 ಮಾ.3ರಂದು ಲಿಂಗೈಕ್ಯರಾದರು.

2ನೇ ಪೀಠಾಧಿಪತಿ ಶಂಕರೆಂದ್ರ ಶ್ರೀಗಳು ತ್ಯಾಗ ಪರಿಶ್ರಮದಿಂದ ನಿರ್ಮಿಸಲ್ಪಟ್ಟ ಅದ್ವೈತ ಪರಂಪರೆಯ ದಾಸೋಹಮಠ ಸದ್ಭಕ್ತರಿಗೆ ಅನ್ನದಾಸೋಹ, ಜ್ಞಾನದಾಸೋಹ, ಧ್ಯಾನದಾಸೋಹ, ನೀಡುತ್ತಾ, ಭವ್ಯಪರಂಪರೆಯಲ್ಲಿ ಸಾಗಿ ಬಂದಿದೆ. ಛಬ್ಬಿ ಗ್ರಾಮಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಆಟವಾಡುತ್ತಿದ್ದ ಶಿವಮೂರ್ತಯ್ಯ ಎಂಬ ಬಾಲಕನ ಮೇಲೆ ಶ್ರೀಗಳ ದಿವ್ಯದೃಷ್ಠ ಬೀರಿತು. ದೊಡ್ಡವನಾದ ಮೇಲೆ ಪಾಲಕರನ್ನು ಒಪ್ಪಿಸಿ ಅಣ್ಣಿಗೇರಿ ದಾಸೋಹಮಠಕ್ಕೆ ಕರೆದು ಕೊಂಡು ಬಂದರು. 1963 ಡಿ.23 ರಂದು ತಮ್ಮ ಜೀವಿತಾವಧಿಯಲ್ಲಿಯೇ ಶಿವಮೂರ್ತಿಗೆ ತಮ್ಮ ಗುರುವಿನ ಹೆಸರನ್ನೇ ನಾಮಕರಣ ಮಾಡಿದರು. ಮಠದ 2ನೇ ಪೀಠಾಧಿಪತಿಯಾಗಿ ಆಧಿಕಾರ ನೀಡಿದರು. ಶಂಕರೇoದ್ರ ಶ್ರೀಗಳು ವಾಕ್ ಸಿದ್ಧಿ ಪುರುಷರು, 4ನೇ ತರಗತಿ ಓದಿದ್ದರೂ ಸಂಸ್ಕೃತ , ಹಿಂದಿ, ಕನ್ನಡ, ಪಾಂಡಿತ್ಯದಿoದ ನಾಡಿನ ಅಸಂಖ್ಯಾತ ಭಕ್ತ ಸಮೂಹವನ್ನು ಸೃಷ್ಠಿಸಿದರು. ಅವರು ನುಡಿದಂತೆ ನಡೆಯತ್ತದೆ ಎಂಬ ಧೃಢ ಭಕ್ತಿ ಸದ್ಭಕ್ತರಲ್ಲಿತ್ತು. ಎಷ್ಟೇ ಕಷ್ಟ ಬಂದರೂ ವರ್ಷವಿಡಿ 32 ಕಾರ್ಯಕ್ರಮಗಳನ್ನು ಅವಿರತವಾಗಿ ನಿರಂತರ  ನಡೆಸಿಕೊಂಡು ಬಂದಿದ್ದರು. ತಮ್ಮ ಗುರುವಿನ ಹೆಸರಲ್ಲಿ ವಸತಿಧಾಮ ನಿರ್ಮಿಸಿದ್ದಾರೆ. 2008 ಜು.29 ರಂದು ಬ್ರಹ್ಮಕ್ಯರಾದರು.

ಸದ್ಯದ 3ನೇ ಪೀಠಾಧಿಪತಿ ಶಿವಕುಮಾರ ಶ್ರೀಗಳು-ಸಮಾಜದ ಆಭಿವೃದ್ಧಿಗಾಗಿ ಹಲವಾರು ಪ್ರಗತಿಪರ ಚಿಂತನೆ ಮಾಡಿ ಸಕಲರಿಗೂ ಲೇಸು ಬಯಸುವ ಹಿನ್ನಲೆಯಲ್ಲಿ ಎಲ್ಲಾ ಸಂಪ್ರದಾಯಕ್ಕೆ ಅನ್ವಯವಾಗುವಂತೆ ಶಾಸ್ತçಬೋಧನೆ ವೈಧಿಕ ಜ್ಯೋತಿಷ್ಯದ ಕೊರತೆ ನಿಗಿಸಿ, ಜಂಗಮ ಪಟುಗಳಿಗೆ ವೈದಿಕ ಪಾಠಶಾಲೆ ನಿರ್ಮಾಣ, ಮಠದಲ್ಲಿ  ಬಡ ವಿದ್ಯಾರ್ಥಿಗಳಿಗೆ ಸೌಲಭ್ಯ ಕಲ್ಪಸಿ, ಶೈಕ್ಷಣಿಕ ಪ್ರಗತಿ ಸಾಧಿಸುವತ್ತಾ ಗಮನಹರಿಸಿದ್ದಾರೆ. ಮನೆ ಮನೆ ತೆರಳಿ ಶಾಸ್ತç ಬೋಧನೆ ಗುರಿಯನ್ನು ಹೊಂದಿದ್ದಾರೆ. 109 ವರ್ಷಗಳ ಇತಿಹಾಸ ಹೊಂದಿರುವ ದಾಸೋಹಮಠ ಶಿವಕುಮಾರ  ಶ್ರೀಗಳ ಸಾನಿಧ್ಯದಲ್ಲಿ ಧಾರ್ಮಿಕ ತತ್ವ ತಳಹದಿ ಮೇಲೆ ಸಾಮಾಜಿಕ,ಶೈಕ್ಷಣಿಕ, ವಿವಿಧ  ಕ್ಷೇತ್ರದಲ್ಲಿ ಆಭಿವೃದ್ದಿ ಪಥದತ್ತ ಸಾಗುತಿದೆ.
ಸರ್ಕಾರ ಹಾಗೂ ಆರೋಗ್ಯ ಇಲಾಖೆ ಕೋವಿಡ್ 3ನೇ ಅಲೆ ರಾಷ್ಟ್ರವ್ಯಾಪಿ ಹರಡಿದ  ಹಿನ್ನಲೆಯಲ್ಲಿ ಜನತೆಯ ಆರೋಗ್ಯ ಕಾಪಾಡಲು ಜ.8.9 ರಂದು ವಿಕೆಂಡ್ ಕರ್ಪ್ಯೂ ಜಾರಿಗೆ ತಂದ ಕಾರಣ ಜ.8.9 ರಂದು ಜರಗಬೇಕಾದ ಲಿಂಗೈಕ್ಯ  ರುದ್ರಮುನಿ ಶ್ರೀಗಳ 58ನೇ ಪುಣ್ಯಾರಾಧನೆ ಜಾತ್ರಾಮಹೋತ್ಸವ ನಿಮಿತ್ಯ ವಾರ್ಷಿಕ ಪುಣ್ಯಾಸ್ಮರಣೋತ್ಸವ, ಪಲ್ಲಕ್ಕಿ ಉತ್ಸವ, ಹಾಗೂ ರಥೋತ್ಸವ ರದ್ದುಗೊಳಿಸಲಾಗಿದೆ ಎಂದು ಪೀಠಾಧಿಪತಿ ಶಿವಕುಮಾರ ಶ್ರೀಗಳು ಪ್ರಕಟಣೆಗೆ ತಿಳಿಸಿದ್ದಾರೆ.

Related posts

ರಾಷ್ಟ್ರಪತಿ ದ್ರೌಪದಿ ಮುರ್ಮು ಆಡಳಿತದಲ್ಲಿ ದೇಶದ ಅಭಿವೃದ್ಧಿ ಉತ್ತುಂಗಕ್ಕೆ ಏರಲಿ: ಸಿಎಂ ಬೊಮ್ಮಾಯಿ

eNEWS LAND Team

ಪ್ಲೈ ಓವರ್ ನಿರ್ಮಾಣದ ಅಗತ್ಯತೆ ಒಪ್ಪಿದ ತಜ್ಞರ ಸಮಿತಿ

eNEWS LAND Team

ಲಸಿಕೆ ತಗೊಳದಿದ್ರೆ ಇವ್ಯಾವ್ದೂ ಸಿಗಲ್ಲ! ಹುಷಾರ್.!

eNewsLand Team