39 C
Hubli
ಏಪ್ರಿಲ್ 29, 2024
eNews Land
ಸುದ್ದಿ

ಅಣ್ಣಿಗೇರಿಯಲ್ಲಿ ಮೇರಿ ಮಾಟಿ ಮೇರಿ ದೇಶ ಅಭಿಯಾನ

ಇಎನ್‌ಎಲ್ ಅಣ್ಣಿಗೇರಿ: ತಾಲೂಕಿನ ಎಲ್ಲಾ ಗ್ರಾಮಗಳ ಪಂಚಾಯತಿಯಿoದ ಸಂಗ್ರಹಿಸಲಾದ ಮೇರಿ ಮಾಟಿ ಮೇರಿ ದೇಶ ಅಭಿಯಾನದ ಮಣ್ಣಿನ ಅಮೃತ ಕಳಸವನ್ನು ಹೊತ್ತ ಮಹಿಳೆಯರು ಕಲಾವಿದರ ವಿವಿಧ ವಾದ್ಯ ಕಲಾ ತಂಡಗಳ ಪ್ರದರ್ಶನ ಮೂಲಕ ಪಟ್ಟಣದ ಪುರಸಭೆಯಿಂದ  ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಮೆರವಣಿಗೆ ಮುಖಾಂತರ ಅರಿವು ಮೂಡಿಸಿ ತಾಲೂಕ ಪಂಚಾಯತ ಕಾರ್ಯಾಲಯದಲ್ಲಿ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ಸಮಾವೇಶಗೊಂಡರು.

ತಾಪo ಸಹಾಯಕ ನಿರ್ದೇಶಕ ಸುರೇಶ ಸಿಂಗನಹಳ್ಳಿ ಪ್ರತಿಜ್ಞಾವಿಧಿ ಭೋದಿಸಿದರು.
ಅಧ್ಯಕ್ಷತೆ ವಹಿಸಿದ ಶಾಸಕ ಎನ್.ಎಚ್.ಕೋನರಡ್ಡಿ ಮಾತನಾಡಿ ನಮ್ಮ ಮಣ್ಣು ನಮ್ಮ ದೇಶ ಅಭಿಯಾನ ದೇಶದ ರಾಜದಾನಿ ತಲುಪಲಿದೆ. ಶಾಸಕರು ಮಣ್ಣಿನ ಮಡಿಕೆಗಳನ್ನು ಧಾರವಾಡ ನೆಹರು ಯುವ ಕೇಂದ್ರಕ್ಕೆ ಹಸ್ತಾಂತರಿಸಿದರು. ಮೇರಿ ಮಾಟಿ ಮೇರಿ ದೇಶ ಅಭಿಯಾನ ಯಶಸ್ವಿಗೊಳಿಸಬೇಕೆಂದು ಹೇಳಿದರು.
ಈ ಸಂದರ್ಭದಲ್ಲಿ ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿ ಭಾಗ್ಯಶ್ರೀ ಜಾಗಿರದಾರ, ಪಾಂಡುರoಗ ಅಕ್ಕಿ, ಪೊಲೀಸ್ ಠಾಣಾಧಿಕಾರಿ ಸಿದ್ದಾರೂಢ ಆಲದಕಟ್ಟಿ  ಗ್ರಾಪಂ ಯೋಜನಾಧಿಕಾರಿಗಳು, ಉಮೇಶ ಸರ್ವಿ ಸಹಾಯಕ ಲೆಕ್ಕಾಧಿಕಾರಿಗಳು, ಎನ್.ಆರ್.ಎಲ್.ಎಂ ಸಿಬ್ಬಂದಿಗಳು, ಗ್ರಾಪಂ ಅಭಿವೃದ್ಧಿ ಅಧಿಕಾರಿಗಳು, ಸಿಬ್ಬಂದಿಗಳು, ಎಂಬಿಕೆಗಳು, ಎಲ್ಲಾ ಗ್ರಾಪಂ ಪಿಡಿಓಗಳು, ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು, ಉಪಸ್ಥಿತರಿದ್ದರು.

Related posts

ನೈಋತ್ಯ ರೈಲ್ವೆಯ ಆವರಣದಲ್ಲಿ ಅಂತರಾಷ್ಟ್ರೀಯ ಯೋಗ ದಿನ ಆಚರಣೆ 

eNEWS LAND Team

ರೈತರಿಗೆ ‘ಗಂಧ’ ಹಚ್ಚಿ ‘ನಾಮ’ ಹಾಕಿದ ವಂಚಕರು ! 

eNEWS LAND Team

ಹುಬ್ಬಳ್ಳಿಯಲ್ಲಿ ಜೋಡೆತ್ತುಗಳ ಜನ್ಮದಿನ: ಕೇಕ್ ಕತ್ತರಿಸಿದ ಶ್ರೀಗಳು

eNewsLand Team