28.6 C
Hubli
ಏಪ್ರಿಲ್ 20, 2024
eNews Land
ಅಪರಾಧ ಸುದ್ದಿ

ರೈತರಿಗೆ ‘ಗಂಧ’ ಹಚ್ಚಿ ‘ನಾಮ’ ಹಾಕಿದ ವಂಚಕರು ! 

(ಗಂಧದ ಸಸಿಗಳ ಮಾರಾಟಗಾರರಿಂದ ಮೋಸ ಹೋದ ರೈತರ ಚಿತ್ರ)
ಇಎನ್ಎಲ್ ಹುಬ್ಬಳ್ಳಿ :
ಎಂಎಸ್‌ಪಿ ಅಗ್ರೋಟೆಕ್ ಕಂಪನಿ ಹೆಸರು ಬಳಸಿ ವಂಚಿಸಿದ ಪ್ರಕರಣ.ಗಂಧದ ಸಸಿಯನ್ನು ಹೆಚ್ಚಿನ ದರಕ್ಕೆ ಮಾರಾಟ ಮಾಡಿದ್ದಾರೆ . ರೈತರಿಗೆ ನೀಡಿದ್ದ ಭರವಸೆಯನ್ನು ಈಡೇರಿಸದೆ ನಾಪತ್ತೆಯಾಗಿದ್ದಾರೆ. ಮೇಲ್ನೋಟಕ್ಕೆ ನೂರಾರು ರೈತರು, ಆದರೆ ಕಳೆದುಕೊಂಡಿದ್ದು  ಲಕ್ಷಾಂತರ ರೂಪಾಯಿಗಳು. ಪೊಲೀಸ್ ಠಾಣೆ ಮೆಟ್ಟಿಲೇರಲು ಮುಂದಾಗಿದ್ದಾರೆ.
ಹುಬ್ಬಳ್ಳಿಯ ಛಬ್ಬಿ ಹೋಬಳಿಯ ರಾಮಾಪೂರ, ಬೆಳಗಲಿ, ಇನಾಂ ವೀರಾಪೂರ, ಕರಡಿಕೊಪ್ಪ, ಕುರಡಿಕೇರಿ ಹಾಗೂ ಕಲಘಟಗಿ ತಾಲೂಕಿನ ತಿರುಮಲಕೊಪ್ಪ,  ಬೀರವಳ್ಳಿ ಗ್ರಾಮದ ರೈತರು ಮೋಸ ಹೋಗಿದ್ದಾರೆ . ಪ್ರತಿ ರೈತರು ಕನಿಷ್ಠ 500 ಸಸಿಗಳನ್ನು ಪಡೆದಿದ್ದು , ಮುಂದೇನು ಮಾಡಬೇಕೆಂದು ಯಕ್ಷ ಪ್ರಶ್ನೆಯಾಗಿ ತಲೆ ಮೇಲೆ ಕೈ ಹೊತ್ತಿದ್ದಾರೆ,  ಕೃಷಿಯಲ್ಲಿ ಆಸಕ್ತಿ ಹೊಂದಿದ್ದ ಇಬ್ಬರು ವೈದ್ಯರು ಕೂಡಾ ವಂಚನೆಗೆ ಒಳಗಾಗಿದ್ದಾರೆ.
ವಂಚನೆ :  ಡಾ.ಚನ್ನಬಸಪ್ಪ ಅಂಗಡಿ, ‘ ಮೈಸೂರು ಮೂಲದ ವಿಳಾಸ ತೋರಿಸಿದ ಶ್ರೀನಿವಾಸ ಹಾಗೂ ರುದ್ರೇಶ ಎಂಬುವವರು ಎಂಎಸ್‌ಪಿ ಅಗ್ರೋಟೆಕ್ ಕಂಪನಿ ಪ್ರತಿನಿಧಿ ಎಂದು ಹೇಳಿಕೊಂಡು ರೈತರಿಗೆ ತಮ್ಮನ್ನು ಪರಿಚಯ ಮಾಡಿಕೊಂಡಿದ್ದರು . ಕಾಸರಗೂಡಿನಿಂದ ಉತ್ಕೃಷ್ಟ ಗಂಧದ ಸಸಿಯನ್ನು ನೀಡುತ್ತೇವೆ. ನರೇಗಾ ಯೋಜನೆಯಡಿ ಸಸಿ ನೆಡಿಸಿಕೊಡುತ್ತೇವೆ . ಅದಕ್ಕೆ ಸುತ್ತಲೂ ಬೇಲಿ, ಸೋಲಾರ್ ಸೆಕ್ಯೂರಿಟಿ, ಸಿಸಿ ಕ್ಯಾಮೆರಾ ಅಳವಡಿಸುತ್ತೇವೆ . ಜತೆಗೆ ಪ್ರತಿ ಮರಕ್ಕೂ ಜಿಪಿಎಸ್ ಚಿಪ್ ಅಳವಡಿಸಿ ಕಳವಾಗದಂತೆ ನೋಡಿಕೊಳ್ಳುತ್ತೇವೆ, ಅಲ್ಲದೆ , ಮೂರು ತಿಂಗಳಲ್ಲಿ ಪ್ರತಿ ಮರಕ್ಕೆ 120 ಸಬ್ಸಿಡಿ ನೀಡುತ್ತೇವೆ . 12 ವರ್ಷದ ಬಳಿಕ ಮರಗಳನ್ನು ರೈತರಿಂದ ನಾವೇ ಖರೀದಿ ಮಾಡುತ್ತೇವೆ.  ಆದರೆ ಕನಿಷ್ಠ 500 ಸಸಿ ಪಡೆದರೆ ಮಾತ್ರ ಈ ಸೌಲಭ್ಯ ನೀಡುವುದಾಗಿ ಎಂದು ನಂಬಿಸಿದ್ದರು. ಎಂದರು .
‘ ಹೀಗೆ ಹೇಳಿ ಕಳೆದ ಆಗಸ್ಟ್ ತಿಂಗಳಲ್ಲಿ ಒಂದು ಗಂಧದ ಸಸಿಗೆ ರೂ.54 ರಿಂದ  ರೂ.75 ವರೆಗೂ ಒಂದೊಂದು ಹಳ್ಳಿಯಲ್ಲಿ ಒಂದೊಂದು ಬೆಲೆಗೆ ಮಾರಾಟ ಮಾಡಿದ್ದಾರೆ. ಇವರ ಮಾತು ನಂಬಿದ ರೈತರು 500 ಸಸಿಯಿಂದ 2 ಸಾವಿರ ಸಸಿ ವರೆಗೂ ಪಡೆದಿದ್ದಾರೆ . ಹಲವಾರು ರೈತರು ಸಸಿಗಳನ್ನು ಹೊಲಗಳಲ್ಲಿ  ಹಚ್ಚಿದ್ದಾರೆ. ಇನ್ನೂ ಕೆಲವರು ಗೋವಿನಜೋಳ ಸೇರಿ ಇತರೆ ಬೆಳೆ ತೆಗೆದ ಬಳಿಕ ಸಸಿಗಳನ್ನು ಹಚ್ಚಲು ನಿರ್ಧರಿಸಿದ್ದರು.
     ಆದರೆ ಕಳೆದ ಹದಿನೈದು ದಿನಗಳಿಂದ ಕಂಪನಿಯ ಸ್ಥಳೀಯ ಪ್ರತಿನಿಧಿಗಳು, ರಸೀದಿಯಲ್ಲಿ ನಮೂದಾಗಿದ್ದ ಕಂಪನಿ ದೂರವಾಣಿ ಮೊಬೈಲ್ ಗಳೆಲ್ಲ ಸ್ವಿಚ್ ಆಫ್ ಆಗಿವೆ ‘ ಎಂದರು.
ಡಾ.ರವಿ ಸೋಲಾರಗೊಪ್ಪ ಮಾತನಾಡಿ ‘ ನಾನು. 2 ಸಾವಿರ ಸಸಿ ಖರೀದಿ ಮಾಡಿ ನಾಲ್ಕು ಎಕರೆಯಲ್ಲಿ ನೆಟ್ಟಿದ್ದೇನೆ. ಅಂದು ಕಂಪನಿಯ ಚಾಲಕನೊಬ್ಬ ಕರೆ ಮಾಡಿ ಇದು ವಂಚಕ ಕಂಪನಿ , ಹಣ ನೀಡಬೇಡಿ ಎಂದು ಮಾಹಿತಿ ನೀಡಿದ್ದ . ಆದರೆ ಅಷ್ಟರಲ್ಲಾಗಲೆ ನಾನು ಹಣವನ್ನು ಅವರು ನೀಡಿದ್ದ ಖಾತೆಗೆ ಜಮಾ ಮಾಡಿದ್ದೆ . ಅನುಮಾನಗೊಂಡು ಕಂಪನಿಯ ಜಿಎಸ್‌ಟಿ ನಂ. ಪರೀಕ್ಷಿಸಿದಾಗ ಮೂರು ತಿಂಗಳ ಹಿಂದೆಯ ಅದರ ಅವಧಿ ಮುಗಿದಿದ್ದು , ನವೀಕರಣ ಆಗದಿರುವುದು ತಿಳಿಯಿತು .ಅರಣ್ಯ ಇಲಾಖೆಗೆ ಹೋಗಿ ವಿಚಾರಿಸಿದಾಗ ಒಂದು ಸಸಿಗೆ ರೈತರಿಗೆ ಕೇವಲ ರೂ.2 ರಿಂದ ರೂ.3ಗೆ ನೀಡುವುದನ್ನು ಹಾಗೂ ವರ್ಷಕ್ಕೆ ಸಸಿಗೆ 145 ಸಬ್ಸಿಡಿ ನೀಡುವುದನ್ನು ಅಧಿಕಾರಿಗಳು ತಿಳಿಸಿದರು ಎಂದರು .
ಪ್ರತಿನಿಧಿಕರೆತರಲು ಪ್ರಯತ್ನ : ಮೋಸಹೋಗಿದ್ದೇವೆ ಎಂದು ತಿಳಿದ ಬಳಿಕ ಕಂಪನಿ ಪ್ರತಿನಿಧಿಗಳನ್ನು ಕರೆಸಲು ರೈತರು ಹರಸಾಹಸ ಮಾಡಿದ್ದಾರೆ. ಹೆಚ್ಚಿನ ಸಸಿ ಬೇಕು. ಇನ್ನು ಕೆಲವರು ಸಸಿ ಬೇಕು ಎನ್ನುತ್ತಿದ್ದಾರೆ ಎಂದು ಸಂಪರ್ಕಕ್ಕೆ ಬಂದವರಿಗೆ ಹೇಳಿದ್ದಾರೆ. ವಿಷಯ ಬಹಿರಂಗ ಆಗಿದ್ದು ತಿಳಿಯುತ್ತಿದ್ದಂತೆ ಕಂಪನಿಯವರು ಎಲ್ಲ ಮೊಬೈಲ್, ದೂರವಾಣಿ ಸ್ಥಗಿತಗೊಳಿಸಿದ್ದಾರೆ.
ರೈತರು ಗಂಧದ ಸಸಿ ಬೆಳೆಸುವುದಿದ್ದರೆ ಅರಣ್ಯ ಇಲಾಖೆಯ ನರ್ಸರಿಯಿಂದ ಪಡೆಯಿರಿ.ಇಲಾಖೆ ರೂ.3 ಗೆ ಒಂದು ಸಸಿ ಕೊಡುತ್ತದೆ. ಮೂರು ವರ್ಷ ಚೆನ್ನಾಗಿ ನಿರ್ವಹಣೆ ಮಾಡಿದರೆ  ರೂ.145 ಸಬ್ಸಿಡಿ ನೀಡುತ್ತದೆ. ಮರವಾದಾಗ ಮಾರಾಟ ಮಾಡಿದರೆ ಶೇ.90 ರಷ್ಟು ರೈತರಿಗೆ ಹಾಗೂ ಶೇ.10 ರಷ್ಟು ಇಲಾಖೆಗೆ ಆದಾಯ ಹೋಗುತ್ತದೆ. ಆಮಿಷಕ್ಕೆ ಒಳಗಾಗಿ ಗಂಧ ಸಸಿ ಖರೀದಿಮಾಡಬೇಡಿ.
● ಯಶಪಾಲ್ ಕ್ಷೀರಸಾಗರ 
   ಡಿಎಫ್‌ಓ ಧಾರವಾಡ
ಸಾಲ ಮಾಡಿಕೊಂಡು ಸಸಿ ಖರೀದಿ ಮಾಡಿದವರು ಇದ್ದಾರೆ.ಅದರಲ್ಲಿ ನಾನು ಒಬ್ಬ ರೈತ.
ಶಿವಾನಂದ ಎಸ್
ರಾಮಾಪೂರ
 
 
ಪಡೆದ ಸಸಿಗಳನ್ನು ನಾವು ಬೆಳೆಸುತ್ತೇವೆ . ಆದರೆ , ಬಳಿಕ ಮುಂದೇನು ? ಬೇರೆ ರೈತರಿಗೆ ಈ ರೀತಿ ಮೋಸ ಆಗಬಾರದು.
● ಪ್ರಮೋದ ಹುಬ್ಬಳ್ಳಿ
ರಾಮಾಪೂರ
 
ಮೂರು ತಿಂಗಳಾದರೂ ಕಂಪನಿಯವರು ಬಂದಿಲ್ಲ .
ಈಗ ಸಂಪರ್ಕಕ್ಕೆ ಸಿಗುತ್ತಿಲ್ಲ .
● ಫಕ್ಕೀರಪ್ಪ ವಾಲೀಕಾರ 
ಇನಾಂ ವೀರಾಪುರ
ರೈತರು ಸಸಿಗಳನ್ನು ಮನೆ ಮುಂದೆ ಇಟ್ಟುಕೊಂಡು ಕುಳಿತಿದ್ದೇವೆ . ಈ ಬಗ್ಗೆ ಪೊಲೀಸರಿಗೆ ದೂರು ನೀಡಲು ಮುಂದಾಗಿದ್ದೇವೆ
● ಹುಲಿಯಪ್ಪ ಕರತಂಗಿ
 ಬೀರವಳ್ಳಿ ರೈತರು

Related posts

ಅಕ್ಕ ತಂಗ್ಯಾರ ಅಪರಿಚಿತ ಗಂಡಸ್ರ ಫ್ರೆಂಡ್ ರಿಕ್ವೆಸ್ಟ್ ಅಕ್ಸೆಪ್ಟ್ ಮಾಡೋಕು ಮೊದ್ಲು ಹುಬ್ಬಳ್ಯಾಗ ಏನಾಗೈತಿ ನೋಡ್ರಿ

eNewsLand Team

ಅಳಗವಾಡಿಯಲ್ಲಿ ಸಂಕ್ಷಿಪ್ತ ದೊಡ್ಡಾಟ

eNEWS LAND Team

ಅಪಘಾತಕ್ಕೊಳಗಾದ ಹುಧಾ ಚಿಗರಿ!! ಎಲ್ಲಿ? ಯಾವಾಗ ನೋಡಿ?

eNEWS LAND Team