ಇಎನ್ಎಲ್ ಧಾರವಾಡ: ಹುಬ್ಬಳ್ಳಿ ತಾಲೂಕಿನ ಸುಳ್ಳ ಗ್ರಾಮದಲ್ಲಿ ಕಲ್ಲಪ್ಪ ಐಹೊಳೆ ಎಂಬ ರೈತರೊಬ್ಬರು ತಮ್ಮ ಮನೆಯ ಜೋಡೆತ್ತುಗಳ ಜನ್ಮದಿನವನ್ನು ಕೇಕ್ ಕತ್ತರಿಸಿ ಆಚರಿಸಿದ್ದಾರೆ.
ಹಿರೇಮಠದ ಶಿವ ಸಿದ್ದ ರಾಮೇಶ್ವರ ಶ್ರೀಗಳಿಂದ ಕೇಕ್ ಕಟ್ ಮಾಡಿಸಿ ರಾಸುಗಳ ಬರ್ತಡೇ ಮಾಡಿದರು.
ಈಡಿ ಗ್ರಾಮವೇ ನೆರೆದು ರೈತ ಕಲ್ಲಪ್ಪ ಅವರ ಜಾನುವಾರು ಪ್ರೀತಿಯನ್ನು ಕೊಂಡಾಡಿದ್ದಾರೆ .
ತಮಗಾಗಿ ತಮ್ಮ ಕುಟುಂಬಕ್ಕಾಗಿ ಜೀವತೇಯುವ ಪ್ರಾಣಿಗಳನ್ನು ಮನೆಯ ಸದಸ್ಯರ ಹಾಗೆ ಕಾಣಬೇಕು. ಅವಕ್ಕೆ ಗೌರವ ನೀಡಬೇಕು ಎಂದು ರೈತ ಕಲ್ಲಪ್ಪ ಹೇಳುತ್ತಾರೆ