26.9 C
Hubli
ಮೇ 19, 2024
eNews Land
ಸುದ್ದಿ

ಹುಬ್ಬಳ್ಳಿ ಎಫ್.ಎಂ.ಜಿ.ಸಿ. ಕ್ಲಸ್ಟರ್ ಸ್ಥಾಪನೆ ವಿಶೇಷ ಪ್ರೋತ್ಸಾಹ; ಬೊಮ್ಮಾಯಿ

ಇಎನ್ಎಲ್ ಹುಬ್ಬಳ್ಳಿ: ಸ್ಟಾರ್ಟ್‌ಅಪ್ ಉದ್ದಿಮೆಗಳ ಸ್ಥಾಪನೆಯಲ್ಲಿ ರಾಜ್ಯ ಮಂಚೂಣಿಯಲ್ಲಿದೆ. ಕೈಗಾರಿಕೆ ಹಾಗೂ ಉದ್ದಿಮೆ ಸ್ಥಾಪನೆ ಮಾಡಲು ಹೆಚ್ಚಿನ ಸವಲತ್ತು ಹಾಗೂ ಸಹಾಯಧನವನ್ನು ಪ್ರಸಕ್ತ ಸಾಲಿನ ಆಯವ್ಯಯದಲ್ಲಿ ನೀಡಲಾಗಿದೆ. ಮಹಿಳಾ ಉದ್ದಿಮೆದಾರರಿಗೆ ಆರ್ಥಿಕ ಸಹಾಯವನ್ನು ಘೋಷಿಸಲಾಗಿದೆ. ಹುಬ್ಬಳ್ಳಿ ನಗರದಲ್ಲಿ ಎಫ್.ಎಂ.ಜಿ.ಸಿ. ಕ್ಲಸ್ಟರ್ ಸ್ಥಾಪನೆಗೆ ವಿಶೇಷ ಪ್ರೋತ್ಸಾಹ ನೀಡಿದ್ದು. ಒಂದು ಲಕ್ಷ ಉದ್ಯೋಗ ಅವಕಾಶಗಳು ಸೃಷ್ಠಿಯಾಗಲಿವೆ ಎಂದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ಇದನ್ನೂ ಓದಿ:ಮುಸ್ಲಿಮರಿಗೆ ಅಂಗಡಿ ವ್ಯಾಪಾರಕ್ಕೆ ಅವಕಾಶವಿಲ್ಲ; ಬೊಮ್ಮಾಯಿ ಹೇಳಿದ್ದೇನು ಗೊತ್ತಾ?

ಹುಬ್ಬಳ್ಳಿ ನವೀನ್ ಹೋಟೆಲ್‌ನಲ್ಲಿ ಟೈ ಯುವ ಉದ್ದಿಮೆದಾರರ ಸಮಾವೇಶದಲ್ಲಿ ಆಯೋಜಿಸಲಾಗಿದ್ದ ಆನ್ ಇವನಿಂಗ್ ವಿಥ್ ಲೆಜೆಂಡ್ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ಇದನ್ನೂ ಓದಿ:ಸೈನಿಕನ ಹೆಸರಲ್ಲಿ ನಡೆಯಿತು ಸೈಬರ್ ಕ್ರೈಂ!! ನಿಮಗೂ ಪಂಗನಾಮ ಹಾಕಬಹುದು ಹುಷಾರ್

ಬಿಯಾಂಡ್ ಬೆಂಗಳೂರು ಆಲೋಚನೆಗೆ ಒತ್ತು ನೀಡಿದ್ದು, ಬೆಂಗಳೂರು ಹೊರತಾಗಿ ರಾಜ್ಯದ ವಿವಿಧ ನಗರಗಳಲ್ಲಿ ಕೈಗಾರಿಕೆಗಳನ್ನು ಸ್ಥಾಪಿಸಲು ಯೋಜನೆ ರೂಪಿಸಲಾಗಿದೆ. ಗುಜರಾತ್ ಮಾದರಿಯಲ್ಲಿ ವಿಶೇಷ ಹೂಡಿಕೆ ವಲಯವನ್ನು ಸ್ಥಾಪಿಸಿ, ರಿಯಾಯಿತಿಗಳನ್ನು ಸಹ ನೀಡಲಾಗಿದೆ. ಚೆನ್ನೈ ಬೆಂಗಳೂರು ಹಾಗೂ ಚಿತ್ರದುರ್ಗ ಹಾಗೂ ಬೆಳಗಾವಿ ನಡುವಿನ ರಾಷ್ಟ್ರೀಯ ಹೆದ್ದಾರಿಯ ಅಕ್ಕಪಕ್ಕದಲ್ಲಿ ಕೈಗಾರಿಕಾ ಟೌನ್‌ಶಿಪ್ ನಿರ್ಮಿಸಲಾಗುವುದು ಎಂದರು.

ಇದನ್ನೂ ಓದಿ:2023ರ ಚುನಾವಣೆಲಿ ಬಿಜೆಪಿ ಗೆಲುವು ನಿಶ್ಚಿತ: ಸಿಎಂ ಬೊಮ್ಮಾಯಿ

ಟೈ ಉತ್ತಮ ಕೆಲಸ ಮಾಡುತ್ತಿದೆ. ಯುವ ಉದ್ದಿಮೆದಾರರಿಗೆ ಮಾರ್ಗದರ್ಶನ ನೀಡಿ ಪ್ರೋತ್ಸಾಹಿಸುತ್ತದೆ. ಯುವಜನರು ಭವಿಷ್ಯದ ಬಗ್ಗೆ ಆಶಾದಾಯಕಾಗಿರಬೇಕು. ಆತ್ಮ ಸ್ಥೈರ್ಯ ಹೊಂದಬೇಕು. ಉದ್ದಿಮೆ ಸ್ಥಾಪಿಸಿ ತಮ್ಮ ಅಸ್ಮಿತೆಯನ್ನು ಕಂಡುಕೊಳ್ಳಬೇಕು. ವೈಯಕ್ತಿಕವಾಗಿ ಭಗವದ್ಗೀತೆಯನ್ನು ನಾನು ಓದುತ್ತೇನೆ. ನಮ್ಮ ಜೀವನದ ಎಲ್ಲಾ ಪ್ರಶ್ನೆಗಳಿಗೆ ಭಗವದ್ಗೀತೆ ಉತ್ತರ ನೀಡುತ್ತದೆ. ಅನುಭವ ಎಲ್ಲದಕ್ಕಿಂತ ದೊಡ್ಡದು. ನಮ್ಮ ಪ್ರಜ್ಞೆಗೆ ವಿರುದ್ಧ ಕೆಲಸ ಮಾಡಬಾರದು.
ಪ್ರತಿ ಕೆಲಸ ಮಾಡುವಾಗ ಅಂತಃಸಾಕ್ಷಿ ಮಾತನ್ನು ಕೇಳಿ. ವಿಮರ್ಶೆ ಹಾಗೂ ವಿರೋಧಗಳಿಗೆ ಹೆದರದಿರಿ ಎಂದು ಯುವ ಉದ್ದಿಮೆದಾರರಿಗೆ ಕಿವಿಮಾತು ಹೇಳಿದರು.

ಇದನ್ನೂ ಓದಿ:ಕಡಿಮೆ ವೆಚ್ಚ, ತ್ವರಿತ ಗತಿಯಲ್ಲಿ ನ್ಯಾಯದಾನವಾಗಬೇಕು: ರಾಜ್ಯಪಾಲ ಗೆಹ್ಲೋತ್

ರಾಜಕೀಯಕ್ಕೆ ದೇಶ ಜನರ ಜೀವನದಲ್ಲಿ ಬದಲಾವಣೆ ತರುವ ಶಕ್ತಿಯಿದೆ. ಇಚ್ಛಾಶಕ್ತಿ ಉಳ್ಳನಾಯಕರು‌ ಉತ್ತಮ ಬದಲಾವಣೆ ತರಬಲ್ಲರು. ಪ್ರತಿಯೊಬ್ಬರು ನಾಯತ್ವದ ಗುಣ ಬೆಳೆಸಿಕೊಳ್ಳಬೇಕು. ರಾಜಕೀಯಕ್ಕೆ ರಂಗಮುಕ್ತ ಅವಕಾಶಗಳಿವೆ. ಯಾವುದೇ ನಿರ್ಬಂಧಗಳಿಲ್ಲ. ಕಪಿಲ್‌ದೇವ್ ವಿಶ್ವಕಪ್ ಗೆಲ್ಲುವುದರ ಮೂಲಕ ದೇಶದ ಜನರ ಮನಗಳನ್ನು ಗೆದ್ದರು. ಹುಬ್ಬಳ್ಳಿಯ ಉದ್ದಿಮೆದಾರರು ಸಣ್ಣನಗರದ ಮನಸ್ಥಿತಿಯನ್ನು ತೊರೆದು, ಮುಕ್ತ ಹಾಗೂ ಜಾಗತಿಕ ಮಾರುಕಟ್ಟೆಯಲ್ಲಿ ಸ್ಪರ್ಧಿಸಬೇಕು. ಹೊಸರೀತಿ ಉದ್ದಿಮೆ ಹಾಗೂ ಕೈಗಾರಿಕೆಗಳಲ್ಲಿ ತೊಡಗಿಕೊಳ್ಳಬೇಕು. ಇಂದು ವಿಶ್ವವೇ ಒಂದು ಹಳ್ಳಿಯಾಗಿದೆ. ವ್ಯಾಪಾರಸ್ಥರು ವಾರದ ಮಧ್ಯದಿನವಾದ ಬುಧವಾರದಂದು ತಮ್ಮ ವ್ಯಾಪಾರ ವಹಿವಾಟುಗಳಿಗೆ ರಜೆ ಘೋಷಿಸುತ್ತಾರೆ. ಇದರಿಂದ ಹಲವು ಕೈಗಾರಿಕೆಗಳಲ್ಲಿ ನಷ್ಟ ಉಂಟಾಗುತ್ತದೆ. ಇದು ಸಂಪ್ರದಾಯ ತಪ್ಪಬೇಕು ಎಂದು ಅಭಿಪ್ರಾಯಪಟ್ಟರು.

ಇದನ್ನೂ ಓದಿ:ಕಾನೂನು ವಿವಿ ಘಟಿಕೋತ್ಸವ; 5188 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ

ಈ ಸಂದರ್ಭದಲ್ಲಿ ಶಾಸಕ ಅರವಿಂದ ಬೆಲ್ಲದ್, ಭಾರತೀಯ ಕ್ರಿಕೆಟ್ ತಂಡದ ಮಾಜಿ ನಾಯಕ ಕಪಿಲ್‌ದೇವ್,ಹುಬ್ಬಳ್ಳಿ ಕೆ.ಎಲ್.ಇ. ಸಂಸ್ಥೆಯ ಶಂಕರಣ್ಣ ಮುನವಳ್ಳಿ, ಹುಬ್ಬಳ್ಳಿ ಟೈ ಪ್ರೆಸಿಡೆಂಟ್ ವಿಜೇಶ್ ಸೈಗಲ್, ಇಸ್ಕಾನ್ ಸಂಸ್ಥೆಯ
ಗೋವರ್ಧನ್ ಪ್ರಭುದಾಸ್ ಸೇರಿದಂತೆ ಮತ್ತಿತರು ಉಪಸ್ಥಿತರಿದ್ದರು.

ಇದನ್ನೂ ಓದಿ:ಬೇಕಾಬಿಟ್ಟಿ ನ್ಯೂಸ್ ಪ್ರಿಂಟ್ ಬಳಸೊ ಪತ್ರಿಕಾ ಸಂಸ್ಥೆಗಳ ಕಥೆ… ಮಾಧ್ಯಮದಲ್ಲಿ ಕೆಲಸ ಮಾಡ್ತಾ ಇದೀರಾ ಇದನ್ನು ತಪ್ಪದೆ ಓದಿ

Related posts

ರೈಲುಗಳಿಗೆ ವಿಸ್ಟಾಡೋಮ್ ಬೋಗಿ ತಾತ್ಕಾಲಿಕವಾಗಿ ಜೋಡಣೆ

eNEWS LAND Team

ಪೂರಕ ಕಾನೂನು ಸುಗಮಕಾರರ ತರಬೇತಿ ಮಹಿಳೆಯರ ಸಬಲೀಕರಣಕ್ಕೆ ಶಿಕ್ಷಣ ಅಗತ್ಯ : ನ್ಯಾ.ಹುಲ್ಲೂರ

eNEWS LAND Team

ರೈತರ ಆರ್ಥಿಕ ಶಕ್ತಿ ಹೆಚ್ಚಳಕ್ಕೆ ಪ್ರತ್ಯೇಕ ನಿರ್ದೇಶನಾಲಯ ಸ್ಥಾಪನೆ: ಸಿಎಂ

eNewsLand Team