29.9 C
Hubli
ಮಾರ್ಚ್ 29, 2024
eNews Land
ಸುದ್ದಿ

ಅಣ್ಣಿಗೇರಿ ಪುರಸಭೆ; ಬಿರುಸಿನ ಮತದಾನ

ಇಎನ್ಎಲ್ ಅಣ್ಣಿಗೇರಿ: ಅಣ್ಣಿಗೇರಿ ಪುರಸಭೆ‌ ಸೇರಿದಂತೆ ಧಾರವಾಡ ಜಿಲ್ಲೆಯ ಅವಧಿ ಮುಕ್ತಾಯ ಆಗಿರುವ 6 ಗ್ರಾಮ ಪಂಚಾಯತಿಗಳ 76 ಸ್ಥಾನಗಳಿಗೆ‌ ಹಾಗೂ ಖಾಲಿ ಉಳಿದ 7 ಸ್ಥಾನಗಳಿಗೆ‌ ಮತದಾನ ಬಿರುಸಿನಿಂದ ಸಾಗಿದೆ.

ಅಣ್ಣಿಗೇರಿ 23 ವಾರ್ಡುಗಳಿಗೆ ಚುನಾವಣೆ ಮತಗಟ್ಟೆಗಳ ಎದುರು ಸರದಿ ಸಾಲಿನಲ್ಲಿ ನಿಂತು ಮತ ಚಲಾಯಿಸುತ್ತಿದ್ದಾರೆ.

ಪಟ್ಟಣದ ತಹಸೀಲ್ದಾರ ಕಾರ್ಯಾಲಯ, ಸರ್ಕಾರಿ ಮಾದರಿಯ ಕನ್ನಡ ಗಂಡುಮಕ್ಕಳ ಹಿಪ್ರಾ ಶಾಲೆ, ಅಮೃತೇಶ್ವರ ಸಂಯುಕ್ತ ಪದವಿ ಪೂರ್ವ ಕಾಲೇಜು‌, ಉರ್ದು ಶಾಲೆ, ಕೃಷಿ ಪತ್ತಿನ ಸಹಕಾರ ಸಂಘ, 5ನೇ ಹಾಗು 8ನೇ ನಂಬರ್ ಶಾಲೆ ಸೇರಿ 23 ಮತಗಟ್ಟೆಯಲ್ಲಿ ಮತದಾನ ನಡೆಯುತ್ತಿದೆ.

ಕೋವಿಡ್ ನಿಯಮಗಳನ್ನು ಪಾಲಿಸಿ ಮತದಾರರನ್ನು ಸಾಮಾಜಿಕ ಅಂತರದಲ್ಲಿ ನಿಲ್ಲಿಸಲಾಗಿದೆ. ಸ್ಯಾನಿಟೈಸರ್ ನೀಡಿ ಮತದಾನ ಮಾಡಲು ‌ಅವಕಾಶ ನೀಡಲಾಗುತ್ತಿದೆ.

ಅಲ್ಲದೆ ಅಣ್ಣಿಗೇರಿ ತಾಲೂಕಿನ ಶೆಲವಡಿ 1, ಸಾಸ್ವಿಹಳ್ಳಿ2 ಕೊಂಡಿಕೊಪ್ಪ 1, ಇಬ್ರಾಹಿಂಪುರ1 ಗ್ರಾಮ ಪಂಚಾಯತಿ ಕ್ಷೇತ್ರಗಳಿಗೆ ಚುನಾವಣೆ ನಡೆಯುತ್ತಿದೆ.

ಕುಂದಗೋಳ ತಾಲೂಕಿನ 9 ಮತಗಟ್ಟೆಗಳು ಸೇರಿ ಒಟ್ಟು ಗ್ರಾಮ ಪಂಚಾಯತಿಗಳ ಒಟ್ಟು 32 ಮತಗಟ್ಟೆಗಳಲ್ಲಿ ಗಂಡು 15088 ಹೆಣ್ಣು 13989 ಸೇರಿ ಒಟ್ಟು 29091 ಮತದಾರರು ಮತದಾನ ಮಾಡುವರು. ಗ್ರಾಮ ಪಂಚಾಯತಿ ಚುನಾವಣೆಗೆ ಒಟ್ಟು 140 ಮತಗಟ್ಟೆ ಸಿಬ್ಬಂದಿ ನೇಮಿಸಲಾಗಿದೆ.

Related posts

ಅಣ್ಣಿಗೇರಿ ಪುರಸಭೆ 23 ವಾರ್ಡಗಳ  ಚುನಾವಣೆ. ಟಿಕೇಟ್‌ಗಾಗಿ ಕೈ-ಕಮಲ ಪಕ್ಷಗಳಲ್ಲಿ ಪೈಪೋಟಿ ಅಭ್ಯರ್ಥಿಗಳ ಇರುಸು- ಮುರುಸಿನ ತಿಕ್ಕಾಟ!!

eNEWS LAND Team

ಶ್ರೀ ಕ್ಷೇತ್ರ ಧರ್ಮಸ್ಥಳದ ಲಕ್ಷದೀಪೋತ್ಸದ ಚಿತ್ರಾವಳಿ

eNewsLand Team

ಕೋವಿಡ್ ಸೋಂಕಿತರ ಟೆಲಿಮೆಡಿಸಿನ್ ಸೇವೆಗಾಗಿ ಈ ನಂಬರ್ ಸಂಪರ್ಕಿಸಿ…

eNewsLand Team