22.3 C
Hubli
ಜೂನ್ 13, 2024
eNews Land
ಸುದ್ದಿ

ಕಲಘಟಗಿ-ಅಳ್ನಾವರ ಶೀಘ್ರ ಬರಗಾಲ ಪ್ರದೇಶ!!!: ಎಸ್.ಆರ್.ಪಾಟೀಲ್

ಇಎನ್ಎಲ್ ಕಲಘಟಗಿ: ಇತ್ತೀಚೆಗೆ ಬರಪೀಡಿತ ತಾಲೂಕುಗಳ ಪಟ್ಟಿ ಬಿಡುಗಡೆಯಾಗಿದ್ದು, ಅದರಲ್ಲಿ ಸುತ್ತಮುತ್ತಲಿನ ತಾಲೂಕು ಸೇರ್ಪಡೆಯಾಗಿದ್ದು ಕಲಘಟಗಿ ಮತ್ತು ಅಳ್ನಾವರ ತಾಲೂಕನ್ನು ಕೈಬಿಟ್ಟಿರುವುದರಿಂದ ತಾಲೂಕಿನಲ್ಲಿ ನಡೆಯುತ್ತಿರುವ ಪ್ರತಿಭಟನೆಗೆ ವಿರೋಧ ವ್ಯಕ್ತಪಡಿಸಿ ಪಟ್ಟಣದ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನು ಹಮ್ಮಿಕೊಳ್ಳಲಾಗಿತ್ತು.

ಸಚಿವ ಸಂತೋಷ್ ಲಾಡ್ ಈ ವಿಷಯಕ್ಕೆ ಸಂಬಂಧಿಸಿದಂತೆ ನಿರಂತರ ಪ್ರಯತ್ನ ಪಡುತ್ತಿದ್ದೂ ಕೆಲವೇ ದಿನಗಳಲ್ಲಿ ಘೋಷಣೆಯಾಗುವ 2ನೇ ಪಟ್ಟಿಯಲ್ಲಿ ತಾಲೂಕಿನ ಹೆಸರು ಸೇರ್ಪಡೆಯಾಗಲಿದೆ ಎಂದು ಎಸ್.ಆರ್.ಪಾಟೀಲ್ ತಿಳಿಸಿದರು.

ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಂಜುನಾಥ ಮುರಳ್ಳಿ ಮಾತನಾಡಿ ಬಿಜೆಪಿಯಿಂದ ನಡೆದ ಪ್ರತಿಭಟನೆಗೆ ಪ್ರತ್ಯುತ್ತರವಾಗಿ ಸಚಿವ ಸಂತೋಷ್ ಲಾಡ್ ಮಾಡಿರುವ ವಿವಿಧ ಸಾಮಾಜಿಕ ಕಾರ್ಯಗಳ ಬಗ್ಗೆ ಮಾಹಿತಿ ನೀಡಿದರು.
ಈ ವೇಳೆ ನರೇಶ ಮಲೆನಾಡು, ಶೇಖನಗೌಡ, ಹರಿಶಂಕರ ಮಠದ, ಸೋಮಶೇಖರ್ ಬೆನ್ನೂರು, ಶ್ರೀಕಾಂತ್ ಗಾಯಕವಾಡ್, ಬಸವರಾಜ ದಾಸನಕೊಪ್ಪ, ಬಾಳು ಖಾನಾಪುರ, ವೃಷಭೇಂದ್ರ ಪಟ್ಟಣಶೆಟ್ಟಿ ಸೇರಿದಂತೆ ಉಪಸ್ಥಿತರಿದ್ದರು.

ENL Kalaghatagi: The list of drought-affected taluks was recently released by the government, in which the surrounding taluks were included, Kalaghatagi and Alnavar taluks were left out.

On this time S.R.Patil said that although Minister Santosh Lad is making continuous efforts in this matter, the name of the taluk will be included in the 2nd list which will be announced in a few days.

This time Block Congress President Manjunath Muralli spoke and gave information about the various social works done by Minister Santosh Lad in response to the protest by BJP.

Naresha Malenadu, Shekhan Gowda, Harishankar Mathad, Somashekar Bennur, Srikanth Gaikwad, Basavaraj Dasanakoppa, Balu Khanapur, Vrishabendra Pattanashetty and others were present.

 

Related posts

ಆಯುಷ್ ಪದ್ದತಿಯನ್ನು ಅಳವಡಿಸಿಕೊಳ್ಳಿ : ಸಂಸದ ಗದ್ದಿಗೌಡರ

eNEWS LAND Team

ಪರಿಸರ ರಕ್ಷಿಸೋಣ : ಟಿಎಂಸಿ ಮುಖ್ಯಾಧಿಕಾರಿ ಗದ್ದಿಗೌಡ್ರ

eNEWS LAND Team

ಸುರಕ್ಷಿತವಾಗಿರಿ ಎನ್ನತ್ತಲೇ 2ಲಕ್ಷ ದೋಚಿದ್ರು! ಹುಬ್ಬಳ್ಳಿಲಿ ಯಾರನ್ನ ನಂಬೇಕು? ಯಾರನ್ನ ಬಿಡಬೇಕು?

eNewsLand Team