27 C
Hubli
ಡಿಸೆಂಬರ್ 7, 2023
eNews Land
ಸುದ್ದಿ

ಉರುಸು ಪ್ರಯುಕ್ತ ಸಾಮೂಹಿಕ ಪ್ರಸಾದ ಸೇವನೆ :ಗ್ರಾಮಸ್ಥರು ಅಸ್ವಸ್ಥ

ಜಿಲ್ಲಾ ಆಸ್ಪತ್ರೆಗೆ ಡಿಸಿ ರಾಜೇಂದ್ರ ಭೇಟಿ ಆರೋಗ್ಯ ವಿಚಾರಣೆ

ಇಎನ್ಎಲ್ ಬಾಗಲಕೋಟೆ : ಬಾಗಲಕೋಟೆ ತಾಲೂಕಿನ ಡೋಮನಾಳ ಗ್ರಾಮದಲ್ಲಿ ಉರುಸು ಪ್ರಯುಕ್ತ ಸಾಮೂಹಿಕವಾಗಿ ಪ್ರಸಾದ ಸೇವನೆಯಿಂದ ಅಸ್ವಸ್ಥಗೊಂಡು ಜಿಲ್ಲಾ ಆಸ್ಪತ್ರೆಗೆ ಚಿಕಿತ್ಸೆ ಪಡೆಯುತ್ತಿದ್ದ ಗ್ರಾಮಸ್ಥರನ್ನು ಜಿಲ್ಲಾಧಿಕಾರಿ ಕ್ಯಾಪ್ಟನ್ ಡಾ.ಕೆ.ರಾಜೇಂದ್ರ ಬುಧವಾರ ಭೇಟಿ ಮಾಡಿ ಆರೋಗ್ಯ ವಿಚಾರಿಸಿದರು.

ಇದನ್ನೂ ಓದಿ:ರಂಗಿನಾಟದಲ್ಲಿ ಮಿಂದೆದ್ದ ವಾಣಿಜ್ಯ ನಗರಿ ಹುಬ್ಬಳ್ಳಿ ಸಂಭ್ರಮ ಹೇಗಿತ್ತು ಗೊತ್ತಾ? ಇಲ್ಲಿದೆ ಕಂಪ್ಲೀಟ್ ಗ್ರೌಂಡ್ ರಿಪೋರ್ಟ್

ಇದೇ ಸಂದರ್ಭದಲ್ಲಿ ಮಾತನಾಡಿದ ಅವರು ಡೋಮನಾಳ ಗ್ರಾಮದಲ್ಲಿ ಮಂಗಳವಾರ ನಡೆದ ಉರುಸು ನಿಮಿತ್ಯ ಸಾಮೂಹಿಕವಾಗಿ ಪ್ರಸಾದ ಸೇವೆ ಮಾಡಿದ್ದರು. ಸಂಜೆ ವೇಳೆ ಗ್ರಾಮಸ್ಥರಲ್ಲಿ ವಾಂತಿ ಭೇದಿ ಉಂಟಾದ ಹಿನ್ನಲೆಯಲ್ಲಿ ಜಿಲ್ಲಾ ಆಸ್ಪತ್ರೆಯಿಂದ 5 ಅಂಬುಲೆನ್ಸ್ ಕಳುಹಿಸಿ ಅಸ್ವಸ್ಥಗೊಂಡ 80 ಜನರಲ್ಲಿ 48 ಜನರನ್ನು ಜಿಲ್ಲಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದ್ದು, ಅದರಲ್ಲಿ 22 ಜನ ಮಕ್ಕಳಿದ್ದಾರೆ. ಯಾವುದೇ ರೀತಿಯ ಜೀವ ಭಯ ಇರುವುದಿಲ್ಲ. ಜಿಲ್ಲಾ ಆಸ್ಪತ್ರೆಯ ವೈದ್ಯಾಧಿಕಾರಿಗಳು ಹಾಗೂ ನರ್ಸ ಸಿಬ್ಬಂದಿಗಳು ಚೆನ್ನಾಗಿ ನೋಡಿಕೊಳ್ಳುತ್ತಿದ್ದಾರೆಂದರು.

ಇದನ್ನೂ ಓದಿ:ಶೇ.90 ರಷ್ಟು ಷೇರು ಬಂಡವಾಳದೊಂದಿಗೆ ವಿವಿಧೋದ್ದೇಶಗಳ ಮಹಿಳಾ ಸಹಕಾರಿ ಸಂಘಗಳ ಪ್ರಾರಂಭ : ಸಿಎಂ ಬೊಮ್ಮಾಯಿ

  ಡೋಮನಾಳ ಗ್ರಾಮಸ್ಥರು ಅಸ್ವಸ್ಥರಾದ ಬಗ್ಗೆ ನಿಖರವಾದ ಕಾರಣ ತಿಳಿದು ಬಂದಿರುವದಿಲ್ಲ. ಸ್ಯಾಂಪಲ್ ಪರೀಕ್ಷೆಗೆ ಕಳುಹಿಸಲಾಗಿದ್ದು, ವರದಿ ಬಂದ ಮೇಲೆ ಕಾರಣ ತಿಳಿಯಲಿದೆ ಎಂದರು. ಭೇಟಿ ಸಂದರ್ಭದಲ್ಲಿ ಜಿಲ್ಲಾ ಆಸ್ಪತ್ರೆಯ ಶಸ್ತ್ರ ಚಿಕಿತ್ಸಕ ಡಾ.ಪ್ರಕಾಶ ಬಿರಾದಾರ, ತಹಶೀಲ್ದಾರ ಗುರುಸಿದ್ದಯ್ಯ ಹಿರೇಮಠ ಸೇರಿದಂತೆ ಇತರರು ಉಪಸ್ಥಿತರಿದ್ದರು.

ಇದನ್ನೂ ಓದಿ:ಅನ್ಯಜಾತೀಯ ಹುಡುಗರನ್ನು ಪ್ರೀತಿಸಿ ಮದುವೆಯಾಗುವ ಹುಡುಗಿಯರೇ ಹುಷಾರ್!!!

Related posts

‘ಲಾಲ್‌ ಸಲಾಮ್‌’ ಮೂಲಕ ಲೇಖಕಿಯಾದ ಕೇಂದ್ರ ಸಚಿವೆ ಸ್ಮೃತಿ ಇರಾನಿ

eNEWS LAND Team

ಪಾಕಿಸ್ತಾನದ ಈ ನಗರಕ್ಕೀಗ ಜಗತ್ತಿನ ‘ಅತ್ಯಂತ ಮಾಲಿನ್ಯ ನಗರಿ’ ಹಣೆಪಟ್ಟಿ!

eNewsLand Team

ಜನತೆಗೆ ಕಿರುಕುಳ ನೀಡದಂತೆ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ :ಸಚಿವ ಅಶೋಕ

eNewsLand Team