29 C
Hubli
ಮೇ 2, 2024
eNews Land
ಸುದ್ದಿ

ನಲವಡಿ ಭದ್ರಪೂರ ಗ್ರಾಮಕ್ಕೆ ಪ್ಲೈಓವರ್ ಬ್ರೀಜ್ ಮಾಡಲು ಆಗ್ರಹ

ಇಎನ್‌ಎಲ್ ಅಣ್ಣಿಗೇರಿ: ಹುಬ್ಬಳ್ಳಿ ಗದಗ ರಸ್ತೆಯ NH-63 ರಸ್ತೆಯಲ್ಲಿ ಬರುವ ನಲವಡಿ ಭದ್ರಪೂರ ಗ್ರಾಮಕ್ಕೆ ಮೇಲಸೇತುವೆ ಹಾಗೂ ಪ್ಲೈಓವರ ಬ್ರೀಜ್ ಮಾಡಲು ಕಾಂಗ್ರೆಸ ಯುವ ಮುಖಂಡ ಪ್ರದೀಪ ಲೆಂಕಿನಗೌಡ್ರ ಆಗ್ರಹಿಸಿದ್ದಾರೆ.

ಈ ಎರಡು ಗ್ರಾಮಕ್ಕೆ ಸರ್ವಿಸ್ ರಸ್ತೆಗಳಿಲ್ಲ. ನಲವಡಿ ಗ್ರಾಮ ಅನೇಕ ಗ್ರಾಮಗಳಿಗೆ ತೆರಳಲು ಸಂಪರ್ಕ ಕೇಂದ್ರ ಸ್ಥಾನವಾಗಿದ್ದರಿಂದ ಜನರು ಪ್ರಯಾಣ ಮಾಡುತ್ತಾರೆ. ವಾಹನಗಳು ಬೇರೆ ಗ್ರಾಮಗಳಿಗೆ ತೆರಳಲು ರಸ್ತೆ ಬದಲಾವಣೆ ಮಾಡಬೇಕಾಗುತ್ತದೆ. 

ಮಣಕವಾಡ ಮೂಲಕ ನವಲಗುಂದ, ಉಮಚಗಿ ಇಂದ ಲಕ್ಷ್ಮೇಶ್ವರ, ಯರಗುಪ್ಪಿ ಇಂದ ಕುಂದಗೋಳ, ಕೋಳಿವಾಡ ಇಂದ ಶಿರಹಟ್ಟಿ ಹೀಗೆ ಪ್ರಯಾಣಿಕರು ಬಸ್ ಸಂಚಾರಕ್ಕೆ ಮಾರ್ಗ ಬದಲಾವಣೆ ಮಾಡಬೇಕಾಗಿದ್ದರಿಂದ ಹೆದ್ದಾರಿ ರಸ್ತೆ ದಾಟಿ ಹೋಗಲು ಜೀವ ಕೈಯಲ್ಲಿ ಹಿಡಿದು ಹೋಗುವಂಥ ಪರಿಸ್ಥಿತಿ ಇದ್ದರಿಂದ ಅನೇಕ ಅಪಘಾತಗಳು ಸಂಭವಿಸಿ ಜನರು ಪ್ರಾಣ ಕಳೆದುಕೊಂಡಿದ್ದಾರೆ. ಅದೆಷ್ಟೋ ಪ್ರಯಾಣಿಕರು ಕೈಕಾಲು ಮುರಿದುಕೊಂಡು ಅಂಗವಿಕಲರಾಗಿದ್ದಾರೆ,ನಿತ್ಯದ ಅಪಘಾತಗಳನ್ನು ತಡೆಗಟ್ಟಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಹಾಗೂ ಜಿಲ್ಲಾಧಿಕಾರಿ ತಕ್ಷಣವೇ ಕ್ರಮಕೈಗೊಳ್ಳಬೇಕು. ಮತ್ತು ವಾಹನ ವೇಗ ನಿಯಂತ್ರಣಗೊಳಿಸಲು ಬ್ಯಾರಿಕೇಡ್‌ಗಳನ್ನು ಹಾಕಿ ಅಪಘಾತಗಳು ಸಂಭವಿಸದOತೆ ಮುಂಜಾಗ್ರತೆ ಕೈಗೊಳ್ಳಬೇಕೆಂದು ರೈತ ಮುಖಂಡ ಪ್ರದೀಪ್ ಲೆಂಕಿನಗೌಡ್ರ ಒತ್ತಾಯಿಸಿದ್ದಾರೆ.

Related posts

ಅಮೃತ ಯೋಜನೆ ಅಡಿಯ ಕಾಮಗಾರಿ ಶೀಘ್ರ ಇತ್ಯರ್ಥಗೊಳಿಸುವಂತೆ ಹುಡಾ ಅಧ್ಯಕ್ಷ ನಾಗೇಶ ಕಲ್ಬುರ್ಗಿ ಸೂಚನೆ

eNEWS LAND Team

ಶಲವಡಿ ಗ್ರಾಪಂ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆ

eNewsLand Team

ಕಂದಾಯ ಗ್ರಾಮವಾಗಿ ಲಂಬಾಣಿ ತಾಂಡಾ: ಸರ್ವೇ ಚುರುಕಿಗೆ ಕ್ರಮ- ಸಿಎಂ ಬೊಮ್ಮಾಯಿ

eNewsLand Team