27 C
Hubli
ಡಿಸೆಂಬರ್ 7, 2023
eNews Land
ಸುದ್ದಿ

ಹುಬ್ಬಳ್ಳಿಯಲ್ಲಿ ರಾಜ್ಯಮಟ್ಟದ ಮ್ಯಾಟ್‌ ಕಬಡ್ಡಿ ಟೂರ್ನಿ ನಾಳೆಯಿಂದ

ಇಎನ್ಎಲ್ ಧಾರವಾಡ: ನಟ ದಿ. ಪುನೀತ್‌ ರಾಜಕುಮಾರ್ ಸ್ಮರಣಾರ್ಥ ಡಿ. 4 ಹಾಗೂ 5ರಂದು ಜೈ ಹನುಮಾನ್‌ ಸ್ಪೋರ್ಟ್ಸ್‌ ಕ್ಲಬ್‌ ಹಾಗೂ ವಿಷ್ಣುಸೇನಾ ಸ್ಪೋರ್ಟ್ಸ್‌ ಕ್ಲಬ್‌ ಜಂಟಿಯಾಗಿ ಹುಬ್ಬಳ್ಳಿ ಗ್ರಾಮೀಣ ತಾಲ್ಲೂಕಿನ ಹೆಬಸೂರಿನ ಗ್ರಾಮ ಪಂಚಾಯ್ತಿ ಆವರಣದಲ್ಲಿ ರಾಜ್ಯಮಟ್ಟದ ಮ್ಯಾಟ್‌ ಕಬಡ್ಡಿ ಟೂರ್ನಿ ಆಯೋಜಿಸಿವೆ.

ಪ್ರತಿ ತಂಡದಲ್ಲಿ 60 ಕೆ.ಜಿ. ಒಳಗಿನ ಐದು ಮತ್ತು 65 ಕೆ.ಜಿ. ಒಳಗಿನ ಇಬ್ಬರು ಆಟಗಾರರು ಇರಬೇಕು. ಚಾಂಪಿಯನ್‌ ತಂಡಕ್ಕೆ ₹15,001, ರನ್ನರ್ಸ್‌ ಅಪ್‌ ತಂಡಕ್ಕೆ ₹10,001, ತೃತೀಯ ಸ್ಥಾನದ ತಂಡಕ್ಕೆ ₹5,001 ಮತ್ತು ನಾಲ್ಕನೇ ಸ್ಥಾನದ ತಂಡಕ್ಕೆ ₹3,001 ಬಹುಮಾನ ನಿಗದಿ ಮಾಡಲಾಗಿದೆ. ಉತ್ತಮ ದಾಳಿಗಾರ, ಹಿಡಿತಗಾರ, ಸರ್ವೋತ್ತಮ ಆಟಗಾರ ಮತ್ತು ಟೂರ್ನಿಯ ಆಕರ್ಷಕ ಆಟಗಾರರಿಗೆ ವೈಯಕ್ತಿಕ ಪ್ರಶಸ್ತಿಗಳು ಲಭಿಸಲಿವೆ. ಪ್ರವೇಶ ಶುಲ್ಕ ₹351 ಇರಲಿದೆ ಎಂದು ಸಂಘಟಕರು ತಿಳಿಸಿದ್ದಾರೆ.

ಸಕ್ಕರೆ ಖಾತೆ ಸಚಿವ ಶಂಕರಪಾಟೀಲ ಮುನೇನಕೊಪ್ಪ ಮುಖ್ಯ ಅತಿಥಿಯಾಗಿ ಬರಲಿದ್ದಾರೆ. ದೈಹಿಕ ಶಿಕ್ಷಣ ಶಿಕ್ಷಕರಾದ ರವಿ ಕೊಣ್ಣೂರು ಹಾಗೂ ಮಲ್ಲಿಕಾರ್ಜುನ ಹುಬ್ಬಳ್ಳಿ ಟೂರ್ನಿ ಉದ್ಘಾಟಿಸುವರು. ಇನ್ನಷ್ಟು ಮಾಹಿತಿಗೆ 8861275385 ಅಥವಾ 9620932818 ಸಂಪರ್ಕಿಸಿ.

Related posts

ಅಣ್ಣಿಗೇರಿ ತಾ.ಪಂ ಕಚೇರಿಯಲ್ಲಿ ಖಾಲಿ ಕುರ್ಚಿಗಳ ಆಡಳಿತ!!

eNEWS LAND Team

ಫೆ.1 ರಿಂದ 15 ರ ವರೆಗೆ ಹೊಸಯಲ್ಲಾಪೂರ ಕೋಳಿಕೆರೆ ಹೂಳೆತ್ತುವ ಕಾರ್ಯ

eNewsLand Team

ಗುಡಗೇರಿಗೆ ಭೇಟಿ ನೀಡಿದ ಶಾಸಕಿ ಕುಸುಮಾವತಿ

eNEWS LAND Team