26 C
Hubli
ಏಪ್ರಿಲ್ 20, 2024
eNews Land
ಜಿಲ್ಲೆ ದೇಶ

ದಕ್ಷಿಣ ನೌಕಾನೆಲೆ ಕಮಾಂಡರ್ ಆಗಿ ಧಾರವಾಡದ ಅರವಿಂದ್

ಇಎನ್ಎಲ್ ಧಾರವಾಡ: ಜಲಾಂತರ್ಗಾಮಿ ಯುದ್ಧ ಮತ್ತು ಕಾರ್ಯಾಚರಣೆಯಲ್ಲಿ ಪರಿಣಿತ ಎಂದು ಹೆಸರು ಮಾಡಿರುವ ಮೂಲತಃ ಧಾರವಾಡದ ನಿವಾಸಿ ವೈಸ್ ಅಡ್ಮಿರಲ್ ಅರವಿಂದ ಹಂಪಿಹೊಳಿ ಅವರು ದಕ್ಷಿಣ ನೌಕಾ ಕಮಾಂಡ್‌ನ ಫ್ಲಾಗ್ ಆಫೀಸರ್ ಕಮಾಂಡಿಂಗ್-ಇನ್-ಚೀಫ್ ಆಗಿ ನ. 30ರಂದು ಮಂಗಳವಾರ ಕೊಚ್ಚಿಯಲ್ಲಿರುವ ಕೇಂದ್ರ ಕಚೇರಿಯಲ್ಲಿ ಅಧಿಕಾರ ವಹಿಸಿಕೊಂಡರು.

ಸುಮಾರು ನಾಲ್ಕು ದಶಕಗಳ ಸೇವೆಯ ನಂತರ ನೌಕಾಪಡೆಯಿಂದ ನಿವೃತ್ತರಾದ ನಿರ್ಗಮಿತ ವೈಸ್ ಅಡ್ಮಿರಲ್ ಅನಿಲ್ ಕೆ. ಚಾವ್ಲಾ ಅವರು ವೈಸ್ ಅಡ್ಮಿರಲ್ ಹಂಪಿಹೊಳಿ ಅವರಿಗೆ ಅಧಿಕಾರ ಹಸ್ತಾಾಂತರಿಸಿದರು.
ವೈಸ್ ಅಡ್ಮಿರಲ್ ಹಂಪಿಹೊಳಿ ಅವರು ಹೊಸ ನೇಮಕಾತಿಗೆ ಮುನ್ನ ಕಣ್ಣೂರಿನ ಎಜಿಮಲದಲ್ಲಿರುವ ಭಾರತೀಯ ನೌಕಾ ಅಕಾಡೆಮಿಯ ಕಮಾಂಡೆಂಟ್ ಆಗಿದ್ದರು. ನೌಕಾನೆಲೆಯಲ್ಲಿ ನಾಲ್ಕು ಸಶಸ್ತ್ರ ತುಕಡಿಗಳು ಮತ್ತು ೫೦ ಜನರ ‘ಗಾರ್ಡ್ ಆಫ್ ಹಾನರ್’ ಸೇರಿದಂತೆ ೧೬ ತುಕಡಿಗಳನ್ನು ಒಳಗೊಂಡ ವಿದ್ಯುಕ್ತ ಮೆರವಣಿಗೆ ನಡೆಸಲಾಯಿತು, ಇದರಲ್ಲಿ ಇಬ್ಬರೂ ವೈಸ್ ಅಡ್ಮಿರಲ್ಗಳಿಗೆ ಸಾಮಾನ್ಯ ಗೌರವ ವಂದನೆ ಸಲ್ಲಿಸಲಾಯಿತು.

Related posts

ನವೀನ್ ಪಾರ್ಥಿವ ಶರೀರ ಸೋಮವಾರ ಬೆಂಗಳೂರಿಗೆ: ಸಿಎಂ ಬೊಮ್ಮಾಯಿ

eNEWS LAND Team

ಚುನಾವಣೆ: ಒಟ್ಟು 47 ನಾಮಪತ್ರ ಸಲ್ಲಿಕೆ: ಜಿಲ್ಲಾ ಚುನಾವಣಾಧಿಕಾರಿ ಗುರುದತ್ತ ಹೆಗಡೆ

eNEWS LAND Team

ಯಾವ ಯಾವ ಕ್ಷೇತ್ರದಲ್ಲಿ ಎಷ್ಟು ಮತದಾನ ನೋಡಿ? ಮತ ಎಣಿಕೆ ಸ್ಥಳ: ಧಾರವಾಡ ಕೃಷಿ ವಿಶ್ವವಿದ್ಯಾಲಯ

eNEWS LAND Team