ಇಎನ್ಎಲ್ ಧಾರವಾಡ: ಕಳೆದ ಎರಡು ವರ್ಷಗಳ ಕೋವಿಡ್ ಕರಿನೆರಳಲ್ಲಿ ಕಳೆಗುಂದಿದ್ದ ಕ್ರಿಸ್‌ಮಸ್ ಹಬ್ಬವನ್ನು ಈ ಬಾರಿ ಅದ್ಧೂರಿಯಾಗಿ ಆಚರಣೆ ಮಾಡಲಾಗುತ್ತಿದೆ.
ಶುಕ್ರವಾರ ರಾತ್ರಿ ಹುಬ್ಬಳ್ಳಿ ಹಾಗೂ ಧಾರವಾಡದ ನಗರದ ಚರ್ಚ್‌ಗಳಲ್ಲಿ ಸಂಭ್ರಮದ ಕ್ರಿಸ್‌ಮಸ್ ಆಚರಿಸಲಾಯಿತು.
ಹುಬ್ಬಳ್ಳಿ ನಗರದಲ್ಲಿರುವ ಬಾಸೆಲ್ ಮಿಷನ್ ಚರ್ಚ್, ಸೇಂಟ್ ಜೋಸೆಫ್ ಚರ್ಚ್, ಘಂಟಿಕೇರಿ ಯೇಸುನಾಮ ಮಹಾದೇವಾಲಯ, ಬಾಲಯೇಸು ದೇವಾಲಯ, ಸೇಂಟ್ ಪೀಟರ್ ಚರ್ಚ್, ಸೇಂಟ್ ಜಾನ್ ಲಿಬರಲ್, ಸ್ವರ್ಗಾರೋಹಣ ದೇವಾಲಯ ಸೇರಿ 10ಕ್ಕೂ ಹೆಚ್ಚಿನ ಚರ್ಚ್‌ಗಳಲ್ಲಿ ಶುಕ್ರವಾರ ರಾತ್ರಿ ಮಕ್ಕಳ ಕ್ರಿಸ್‌ಮಸ್ ನಡೆಯಿತು.
ಗೋದಲಿ, ಕ್ರಿಸ್‌ಮಸ್ ಟ್ರೀ ಕಂಡು ಮಕ್ಕಳು ಸಂಭ್ರಮಿಸಿದರು. ಸಾಂಟಾ ಕ್ಲಾಸ್ ವೇಷ ತೊಟ್ಟು ಖುಷಿ ಪಟ್ಟರು. ಮಕ್ಕಳ ಸಂಗೀತ, ರೂಪಕ ಕಾರ್ಯಕ್ರಮ ನಡೆಯಿತು.ಪಾದ್ರಿಗಳು ಬೈಬಲ್ ಪ್ರಾರ್ಥನೆ ಬೋಧಿಸಿದರು. ಶನಿವಾರ ಅಂದರೆ ಡಿ. 25ರಂದು ಬೆಳಗ್ಗೆ ಆರಾಧನೆ ನಡೆಯಲಿದೆ.
ಈ ಬಾರಿ ಹಬ್ಬದೊಂದಿಗೆ ಕರ್ನಾಟಕ ಉತ್ತರ ಸಭಾ ಪ್ರಾಂತಕ್ಕೆ 2-3 ದಿನಗಳ ಹಿಂದಷ್ಟೇ ನೂತನ ಬಿಶಪ್ ರಾದ ರೈಟ್ ಮಾರ್ಟಿನ್ ಸಿ ಬೋರ್ಗಾಯಿ ಅವರು ಅಧಿಕಾರ ಸ್ವೀಕರಿಸಿದ್ದು ಹಬ್ಬಕ್ಕೆ ಮತ್ತಷ್ಟು ಮೆರಗು ಬ೦ದಿದೆ.
ಹು-ಧಾ ಅವಳಿ ನಗರದಲ್ಲಿ ಕ್ರಿಸ್‌ಮಸ್ ವಿಶೇಷವಾಗಿ ಆಚರಿಸಲ್ಪಡುತ್ತದೆ. ಡಿ. 24ರಂದು ಚರ್ಚ್‌ಗಳಲ್ಲಿ ಮಕ್ಕಳ ಕ್ರಿಸ್‌ಮಸ್ ನಡೆಯಲಿದ್ದರೆ, ಡಿ. 25ರಂದು ವಿಶೇಷ ಪ್ರಾರ್ಥನೆ ಮತ್ತು ಬಿಶಪ್ ಅವರಿ೦ದ ಕ್ರಿಸ್‌ಮಸ್ ಸಂದೇಶವಿರುತ್ತದೆ. ಈ ಬಾರಿ ಹಬ್ಬದೊಂದಿಗೆ ಕರ್ನಾಟಕ ಉತ್ತರ ಸಭಾ ಪ್ರಾಂತಕ್ಕೆ 2-3 ದಿನಗಳ ಹಿಂದಷ್ಟೇ ನೂತನ ಬಿಶಪ್ ರಾದ ರೈಟ್ ಮಾರ್ಟಿನ್ ಸಿ ಬೋರ್ಗಾಯಿ ಅವರು ಅಧಿಕಾರ ಸ್ವೀಕರಿಸಿದ್ದು ಹಬ್ಬಕ್ಕೆ ಮತ್ತಷ್ಟು ಮೆರಗು ಬಂದಿದೆ.
ರೀತಿ ಹಳಿಯಾಳ ರಸ್ತೆಯಲ್ಲಿ 1888ರಲ್ಲಿ ಆಲಸೇಂಟ್ ಚರ್ಚ್ ಸಹ ಪ್ರಸಿದ್ದಿ ಪಡೆದಿದೆ. ಈ ಚರ್ಚ್ ಅಡಿ ಸುಮಾರು150 ಕುಟುಂಬಗಳಿದ್ದು ಯುರೋಪಿಯನ್ ಶೈಲಿಯಲ್ಲಿ ಕಟ್ಟಡ ಅಂದವಾಗಿದೆ. ಈ ಚರ್ಚ್‌ಗಳು ಪ್ರೋಟೆಸ್ಟಂಟ್ ಅನುಯಾಯಿಗಳಾಗಿದ್ದರೆ, ಕ್ಯಾಥೋ ಲಿಕ್ ಅನುಯಾಯಿಗಳಿಗೆ ಹೂಲಿ ಕ್ರಾಸ್ ಹಾಗೂ ನಿರ್ಮಲ ನಗರದಲ್ಲಿ ಚರ್ಚ್‌ಗಳಿವೆ. ಈ ಎಲ್ಲ ಚರ್ಚ್ ಅಡಿಯಲ್ಲಿ ಬಾಸೆಲ್ ಮಿಶನ್ ಶಿಕ್ಷಣಸಂಸ್ಥೆಗಳು, ಕಿಟೆಲ್ ಸಂಸ್ಥೆ ಪ್ರಜೆಂಟೇಶನ್, ಸೇಂಟ್ ಜೋಸೆಫ್ ಶಾಲೆ,ಶಾಂತಿಸದನ ಹಾಗೂ ಜರ್ಮನ್ ಆಸ್ಪತ್ರೆಗಳು ಸೇವೆ ಸಲ್ಲಿಸುತ್ತಿರುವುದು ಕ್ರೈಸ್ತ ಸಮುದಾಯ ಧಾರವಾಡಕ್ಕೆ ನೀಡಿದ ಕೊಡುಗೆ.
ಒಟ್ಟಾರೆ ಧಾರವಾಡದಲ್ಲಿ 7 ಸಾವಿರಕ್ಕೂ ಹೆಚ್ಚು ಕ್ರೈಸ್ತ ಸಮುದಾಯದವರಿದ್ದಾರೆ. ಈ ಪೈಕಿ ಶೇ. 70 ರಷ್ಟು ಪ್ರೊಟೆಂಸ್ಟೆಂಟ್ ಹಾಗೂ ಉಳಿದವರು ಕ್ಯಾಥೋಲಿಕ್ ಕ್ರೈಸ್ತರು. ಇವರೆಲ್ಲರೂ ಕ್ರಿಸ್‌ಮಸ್ ಸಮಯದಲ್ಲಿ ತಮ್ಮ ತಮ್ಮ ಪದ್ಧತಿಗಳಂತೆ ಹಬ್ಬ ಪ್ರಾರ್ಥನೆ ಮಾಡುತ್ತಾರೆ. ಈಗಾಗಲೇ ಕ್ರೈಸ್ತರ ಮನೆಗಳಲ್ಲಿ ಏಸುವಿನ ಜನ್ಮಸ್ಥಳ ಕೊಟ್ಟಿಗೆ, ಕ್ರಿಸ್‌ಮಸ್ ಟ್ರೀಗಳು ಸಿದ್ಧವಾಗಿವೆ. ಎಲ್ಲಚರ್ಚ್‌ಗಳಲ್ಲೂವಿದ್ಯುತ್ ದೀಪಗಳಿಂದ ಅಲಂಕಾರ ಮಾಡಲಾಗಿದೆ. ಹಬ್ಬದ ನಿಮಿತ್ತಮನೆಗಳಲ್ಲಿ ಕೇಕ್ ಸೇರಿದಂತೆಸಿಹಿತಿಂಡಿಗಳನ್ನು ತಯಾರಿಸಲಾಗಿದೆ.
ಧಾರವಾಡದಲ್ಲಿ ಅತೀ ಹಳೆಯದಾದ ಮೂರು ಚರ್ಚ್‌ಗಳಿದ್ದು ಈ ಪೈಕಿ 1845ರಲ್ಲಿ ಆರಂಭವಾದ ಬಾಸೆಲ್ ಮಿಶನ್ ಹೆಬಿಕ್ ಚರ್ಚ್ ಪ್ರಮುಖವಾ ದುದು. ರೆವರೆಂಡ್ ಲೆಹರ್ ತಮ್ಮ ಸಹೋದ್ಯೋಗಿ ಗಳೊಂದಿಗೆ ಈ ಚರ್ಚ್ ನಿರ್ಮಿಸಿದ್ದು ಆರಂಭದಲ್ಲಿ 25 ಜನರಆರಾಧನೆಯಿಂದ ಪ್ರಾರಂಭವಾದ ಈ ಸಭೆ ಇದೀಗ 1500 ಕುಟುಂಬಗಳ ಸುಮಾರು 4 ಸಾವಿರ ಸದಸ್ಯರನ್ನು ತನ್ನ ಒಡಲಿನಲ್ಲಿಟ್ಟುಕೊಂಡಿದೆ.
ರೀತಿ ಹಳಿಯಾಳ ರಸ್ತೆಯಲ್ಲಿ 1888ರಲ್ಲಿ ಆಲಸೇಂಟ್ ಚರ್ಚ್ ಸಹ ಪ್ರಸಿದ್ದಿ ಪಡೆದಿದೆ. ಈ ಚರ್ಚ್ ಅಡಿ ಸುಮಾರು150 ಕುಟುಂಬಗಳಿದ್ದು ಯುರೋಪಿಯನ್ ಶೈಲಿಯಲ್ಲಿ ಕಟ್ಟಡ ಅಂದವಾಗಿದೆ. ಈ ಚರ್ಚ್‌ಗಳು ಪ್ರೋಟೆಸ್ಟಂಟ್ ಅನುಯಾಯಿಗಳಾಗಿದ್ದರೆ, ಕ್ಯಾಥೋ ಲಿಕ್ ಅನುಯಾಯಿಗಳಿಗೆ ಹೋಲಿ ಕ್ರಾಸ್ ಹಾಗೂ ನಿರ್ಮಲ ನಗರದಲ್ಲಿ ಚರ್ಚ್‌ಗಳಿವೆ. ಈ ಎಲ್ಲ ಚಚ್ ೯ಗಳ ಅಡಿಯಲ್ಲಿ ಬಾಸೆಲ್ ಮಿಶನ್ ಶಿಕ್ಷಣಸಂಸ್ಥೆಗಳು, ಕಿಟೆಲ್ ಸಂಸ್ಥೆ ಪ್ರಜೆಂಟೇಶನ್, ಸೇಂಟ್ ಜೋಸೆಫ್ ಶಾಲೆ,ಶಾಂತಿಸದನ ಹಾಗೂ ಜರ್ಮನ್ ಆಸ್ಪತ್ರೆಗಳು ಸೇವೆ ಸಲ್ಲಿಸುತ್ತಿರುವುದು ಕ್ರೈಸ್ತ ಸಮುದಾಯ ಧಾರವಾಡಕ್ಕೆ ನೀಡಿದ ಕೊಡುಗೆ.
ಒಟ್ಟಾರೆ ಧಾರವಾಡದಲ್ಲಿ 7 ಸಾವಿರಕ್ಕೂ ಹೆಚ್ಚು ಕ್ರೈಸ್ತ ಸಮುದಾಯದವರಿದ್ದಾರೆ. ಈ ಪೈಕಿ ಶೇ. 70 ರಷ್ಟು ಪ್ರೊಟೆಂಸ್ಟೆಂಟ್ ಹಾಗೂ ಉಳಿದವರು ಕ್ಯಾಥೋಲಿಕ್ ಕ್ರೈಸ್ತರು. ಇವರೆಲ್ಲರೂ ಕ್ರಿಸ್‌ಮಸ್ ಸಮಯದಲ್ಲಿ ತಮ್ಮ ತಮ್ಮ ಪದ್ಧತಿಗಳಂತೆ ಹಬ್ಬ ಪ್ರಾರ್ಥನೆ ಮಾಡುತ್ತಾರೆ. ಈಗಾಗಲೇ ಕ್ರೈಸ್ತರ ಮನೆಗಳಲ್ಲಿ ಏಸುವಿನ ಜನ್ಮಸ್ಥಳ ಕೊಟ್ಟಿಗೆ, ಕ್ರಿಸ್‌ಮಸ್ ಟ್ರಗಳುಸಿದ್ಧವಾಗಿವೆ. ಎಲ್ಲಚರ್ಚ್‌ಗಳಲ್ಲೂವಿದ್ಯುತ್ ದೀಪಗಳಿಂದ ಅಲಂಕಾರ ಮಾಡಲಾಗಿದೆ.