ಇಎನ್ಎಲ್ ಧಾರವಾಡ
ಫ್ಲಿಪ್ ಕಾರ್ಟ್ ಕಂಪನಿಯ ಪ್ರಾಜೆಕ್ಟ್ ನಲ್ಲಿ ಹೂಡಿಕೆ ಮಾಡಿದರೆ ಹೆಚ್ಚಿನ ಕೋಟಿಗಟ್ಟಲೇ ಲಾಭ ಗಳಿಸಬಹುದು ಎಂದು ಆಮಿಷವೊಡ್ಡಿ ಬರೋಬ್ಬರಿ 32 ಲಕ್ಷ ರುಪಾಯಿ ಪಡೆದು ವಂಚನೆ ಮಾಡಿರುವ ಪ್ರಕರಣ ಇಲ್ಲಿನ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.
ಹಳೆ ಹುಬ್ಬಳ್ಳಿ ಹೆಗ್ಗೇರಿ ಕಾಲನಿಯ ನಿವಾಸಿ ಗುರುಮೂರ್ತಿ ನಾಣ್ಯದ ವಂಚನೆಗೆ ಒಳಗಾದವರು. ಅವರಿಗೆ ವಾಟ್ಸಾಪ್ ಮೂಲಕ ಸಂಪರ್ಕ ಮಾಡಿದ ಅಪರಿಚಿತ ವ್ಯಕ್ತಿ ವಿವಿಧ ಬ್ಯಾಂಕ್ ಖಾತೆ ಮೂಲಕ ಹಣ ಹಾರಿಸಿಕೊಂಡು ವಂಚನೆ ಮಾಡಿದ್ದಾನೆ ಎಂದು ದೂರು ನೀಡಿದ್ದಾರೆ.