ಇಎನ್ಎಲ್ ಕಲಘಟಗಿ: ಪಟ್ಟಣದ ಹೊರವಲಯದಲ್ಲಿರುವ ಮಾಜಿ ಸಚಿವ ಸಂತೋಷ ಲಾಡ್ ಅಮೃತ ನಿವಾಸದಲ್ಲಿ ಬುಧವಾರ ಸಂಜೆ ಅಯ್ಯಪ್ಪ ಸ್ವಾಮಿಯ ಗೋಧೂಳಿ ಮುಹೂರ್ತದಲ್ಲಿ ಮಹಾಪೂಜೆ ಜರುಗಿತು.
ಮಹಾಪೂಜೆಗೆ ಕಲಘಟಗಿ ಮತಕ್ಷೇತ್ರದ ಅಳ್ನಾವರ ಭಾಗದ ಅಯ್ಯಪ್ಪ ಸ್ವಾಮಿ ಎಲ್ಲ ಸನ್ನಿದಾನಗಳ ಗುರುಸ್ವಾಮಿಗಳು, ಮಾಲಾದಾರಿಗಳು, ಅಯ್ಯಪ್ಪ ಸ್ವಾಮಿಯ ಪೂಜಾ ಕಾರ್ಯಕ್ರಮದಲ್ಲಿ ಭಕ್ತವೃಂದದವರು ಭಾಗಿಯಾಗಿದ್ದರು.
ಈ ಸಂದರ್ಭದಲ್ಲಿ ಮಾಜಿ ಸಚಿವ ಸಂತೋಷ್ ಲಾಡ್, ಮಂಜುನಾಥ ಮುರಳ್ಳಿ, ಎಸ್.ಆರ್.ಪಾಟೀಲ, ನರೇಶ ಮಲೆನಾಡು, ಆನಂದ ಕಲಾಲ, ಸೋಮಶೇಖರ ಬೆನ್ನೂರು ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.