22 C
Hubli
ಅಕ್ಟೋಬರ್ 1, 2023
eNews Land
ಸುದ್ದಿ

ಅಲ್ಪಸಂಖ್ಯಾತರ ಕಾಲೇಜಿನ ಡಾರ್ಮೆಟರಿ ಕಟ್ಟಡ ನಿರ್ಮಾಣ ಕಾಮಗಾರಿಗೆ ಶಾಸಕ ಚರಂತಿಮಠ ಚಾಲನೆ

ಇಎನ್ಎಲ್ ಬಾಗಲಕೋಟೆ: ನವನಗರದ ಸೆಕ್ಟರ್ ನಂ.46 ರಲ್ಲಿರುವ ಅಲ್ಪಸಂಖ್ಯಾತರ ಮೊರಾರ್ಜಿ ದೇಸಾಯಿ ಪದವಿ ಪೂರ್ವ ಕಾಲೇಜಿನ 2.50 ಕೋಟಿ ರೂ.ಗಳ ವೆಚ್ಚದ ಡಾರ್ಮೆಟರಿ ಕಟ್ಟಡ ಕಾಮಗಾರಿಗೆ ಬುಧವಾರ ಶಾಸಕ ವೀರಣ್ಣ ಚರಂತಿಮಠ ಭೂಮಿ ಪೂಜೆ ನೆರವೇರಿಸಿ ಚಾಲನೆ ನೀಡಿದರು.
ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ವತಿಯಿಂದ ಹಮ್ಮಿಕೊಂಡ ಡಾರ್ಮೆಟರಿ ಕಟ್ಟಡ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದ ಅವರು ಅಲ್ಪಸಂಖ್ಯಾತರ ಕಲ್ಯಾಣ ಹಾಗೂ ಶೈಕ್ಷಣಿಕವಾಗಿ ಮುಂದೆ ಬರಲಿ ಎಂಬ ಉದ್ದೇಶದಿಂದ ಕಾಲೇಜಿನಲ್ಲಿ ವಿಶಾಲವಾದ ಡಾರ್ಮೆಟರಿ ಕಟ್ಟಡ ನಿರ್ಮಾಣ ಕಾಮಗಾರಿ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.
ಪ್ರಸಕ್ತ ಸಾಲಿನ ಪ್ರಧಾನಮಂತ್ರಿ ಜನವಿಕಾಸ ಯೋಜನೆಯಡಿಯಲ್ಲಿ ಡಾರ್ಮೆಟರಿ ಕಟ್ಟಡ ನಿರ್ಮಿಸಲಾಗುತ್ತಿದ್ದು, ಈ ಕಟ್ಟಡವು 7500 ಚರದ ಅಡಿ ನೆಲಮಹಡಿ, 7500 ಚದರ ಅಡಿ ಮೊದಲನೇ ಮಹಡಿ ಒಳಗೊಂಡಿದ್ದು, ಒಟ್ಟು 150 ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ.

ನೆಲಮಹಡಿಯಲ್ಲಿ ಅಡುಗೆ ಕೋಣೆ, ಉಗ್ರಾಣ, ಊಟ ಕೋಣೆ ಹೊಂದಿದ್ದು, ವಿದ್ಯಾರ್ಥಿಗಳಿಗಾಗಿ 8 ಕೋಣೆಗೆ ಹೊಂದಿಕೊಂಡು ಶೌಚಾಲಯಗಳು ಹೊಂದಿದ್ದು, ಪ್ರತಿ ಕೊಠಡಿಗಳಲ್ಲಿ ಕಂಪ್ಯೂಟರ ಹಾಗೂ ಸ್ಟಾರಿಟೇಬಲ್‍ಗಳ ವ್ಯವಸ್ಥೆ, ಇದರಲ್ಲಿ ಪ್ರತ್ಯೇಕ ಓದು ಕೋಣೆ ಹೊಂದಿದೆ ಎಂದರು.

ಮೊದಲನೇ ಮಹಡಿಯಲ್ಲಿ ವಿದ್ಯಾರ್ಥಿಗಳಿಗಾಗಿ 8 ಅಟ್ಯಾಚ್ ಶೌಚಾಲಯಗಳು, ಪ್ರತಿ ಕೊಠಡಿಗಳಲ್ಲಿ ಕಂಪ್ಯೂಟರ ಹಾಗೂ ಸ್ಟಡಿ ಟೇಬಲ್ ವ್ಯವಸ್ಥೆ ಹಾಗೂ ಪ್ರತ್ಯೇಕ ಓದುವ ಕೋಣೆಯುಳ್ಳ ವಿಶಾಲವಾದ ಡಾರ್ಮೆಟರಿ ಹೊಂದಿದೆ ಎಂದರು. ಈ ಎಲ್ಲ ಕಾಮಗಾರಿಗಳನ್ನು ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸುವಂತೆ ನಿರ್ಮಿತಿ ಕೇಂದ್ರದ ಯೋಜನಾ ನಿರ್ದೇಶಕ ಶಂಕರಲಿಂಗ ಗೋಗಿ ಅವರಿಗೆ ಸೂಚಿಸಿದರು. ಇಲ್ಲಿಯವರೆ ಒಟ್ಟು 30.40 ಕೋಟಿ ರೂ.ಗಳ ವೆಚ್ಚದಲ್ಲಿ 7 ಕಾಮಗಾರಿಗಳನ್ನು ಪ್ರಾರಂಭಿಸಲಾಗಿದ್ದು, ಅದರಲ್ಲಿ 5 ಕಾಮಗಾರಿಗಳು ಪೂರ್ಣಗೊಂಡಿವೆ. ಉಳಿದ ಎರಡು ಕಾಮಗಾರಿಗಳು ಪ್ರಗತಿಯಲ್ಲಿವೆ ಎಂದು ತಿಳಿಸಿದರು.
ಈಗಾಗಲೇ ಕೈಗೊಂಡ 50 ಲಕ್ಷ ವೆಚ್ಚದ ಮೌಲಾನಾ ಆಜಾದ್ ಮಾದರಿ ಶಾಲೆ, ಸೆಕ್ಟರ್ ನಂ.13 ರ ಉರ್ದು ಶಾಲೆ ಆವರಣದಲ್ಲಿ 2.35 ಕೋಟಿ ವೆಚ್ಚದ ಮೌಲಾನಾ ಆಜಾದ್ ಮಾದರಿ ಶಾಲೆ, ಸೆಕ್ಟರ ನಂ.38ರ ಆದರ್ಶ ವಿದ್ಯಾಲಯದ ಆವರಣದಲ್ಲಿ 2.35 ಕೋಟಿ ರೂ.ಗಳ ವೆಚ್ಚದಲ್ಲಿ ಮೌಲಾನಾ ಆಜಾದ್ ಮಾದರಿ ಶಾಲೆ, ನವನಗರದ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ 1.18 ಕೋಟಿ ರೂ.ಗಳ ವೆಚ್ಚದ ನವೀಕರಣ ಕಾಮಗಾರಿ, ಅಲ್ಪಸಂಖ್ಯಾತರ ಮೊರಾರ್ಜಿ ದೇಸಾಯಿ ವಸತಿ ಶಾಲೆ ಆವರಣದಲ್ಲಿ 2.49 ಕೋಟಿ ರೂ. ವೆಚ್ಚದ ಅಲ್ಪಸಂಖ್ಯಾತರ ಉದ್ಯೋಗಸ್ಥ ಮಹಿಳಾ ವಸತಿ ನಿಲಯ, ಯುನಿಟ್-1 ರಲ್ಲಿ 19 ಕೋಟಿ ರೂ.ಗಳ ವೆಚ್ಚದಲ್ಲಿ ಅಲ್ಪಸಂಖ್ಯಾತರ ನವೋದಯ ಮಾದರಿ ಶಾಲೆ ನಿರ್ಮಾಣ ಕಾಮಗಾರಿ ಪೂರ್ಣಗೊಳ್ಳುವ ಹಂತದಲ್ಲಿವೆ ಎಂದರು.
ಕಾರ್ಯಕ್ರಮದಲ್ಲಿ ನಗರಸಭೆ ಅಧ್ಯಕ್ಷೆ ಜ್ಯೋತಿ ಭಜಂತ್ರಿ, ಉಪಾದ್ಯಕ್ಷ ಬಸವರಾಜ ಅವರಾದಿ, ನಗರಸಭೆ ಸದಸ್ಯೆ, ಸೀಮಾ ಕೌಸರ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಎಂ.ಎನ್.ಮೇಲಿನಮನಿ, ನಿರ್ಮಿತಿ ಕೇಂದ್ರದ ಯೋಜನಾ ನಿರ್ದೇಶಕ ಶಂಕರಲಿಂಗ ಗೋಗಿ ಸೇರಿದಂತೆ ರಾಜು ನಾಯ್ಕರ, ಗಣೇಶ ಲಗಳಿ, ರಾಜಾಬಕ್ಷ ಬದಾಮಿ, ಶ್ಯಾಮ ಅಂಬಿಗೇರ, ಬಂದೆನವಾಜ ವಿಜಾಪೂರ, ಹಾಜಿ ಮಸ್ತಾನ್, ಅಬ್ದುಲ್ ಸತ್ತಾರ ಮನಿಯಾರ ಹಾಗೂ ಇತರರು ಉಪಸ್ಥಿತರಿದ್ದರು.

Related posts

ಬೆಂಗಳೂರು ಕಂಟೋನ್ಮೆಂಟ್ ರೈಲು ನಿಲ್ದಾಣದ ಪುನರಾಭಿವೃದ್ಧಿಗೆ ಸಂಬಂಧಿಸಿದಂತೆ ನವೀಕರಿಸಿ

eNEWS LAND Team

ಕೃಷಿ ವಿವಿ ವಿದೇಶಿ ವಿದ್ಯಾರ್ಥಿಗಳೊಂದಿಗೆ ರಾಜ್ಯಪಾಲರ ಸಂವಾದ

eNEWS LAND Team

ಟ್ವಿಟರ್ ಹೊಸ ಸಿಇಒ ಪರಾಗ್ ಸಂಬ್ಳ ಗೊತ್ತಾದ್ರೆ ದಂಗಾಗ್ತೀರಿ!!

eNewsLand Team