27.1 C
Hubli
ಮೇ 2, 2024
eNews Land
ಸುದ್ದಿ

ರೈಲುಗಳ ಸೇವೆ ವಿಸ್ತರಣೆ

ಇಎನ್ಎಲ್ ಡೆಸ್ಕ್:
I. ರೈಲುಗಳ ಸೇವೆ ವಿಸ್ತರಣೆ

ಪ್ರಯಾಣಿಕರ ಹೆಚ್ಚುವರಿ ದಟ್ಟಣೆ ತೆರವುಗೊಳಿಸುವ ಸಲುವಾಗಿ ಈ ಕೆಳಗಿನ ರೈಲುಗಳ ಸೇವೆಯ ಸಮಯ, ನಿಲುಗಡೆ, ಬೋಗಿಗಳ ಸಂಯೋಜನೆ, ದರದಲ್ಲಿ ಯಾವುದೇ ಬದಲಾವಣೆ ಮಾಡದೆ ವಿಸ್ತರಣೆ ಮಾಡಲಾಗುತ್ತಿದೆ. ಅವುಗಳ ವಿವರ.

1. ಪ್ರತಿ ಸೋಮವಾರ ಹುಬ್ಬಳ್ಳಿಯಿಂದ ಪ್ರಾರಂಭವಾಗುವ ರೈಲು ಸಂಖ್ಯೆ 07325 ಎಸ್‌.ಎಸ್‌.ಎಸ್ ಹುಬ್ಬಳ್ಳಿ – ತಂಜಾವೂರು ಸಾಪ್ತಾಹಿಕ ಎಕ್ಸ್‌ಪ್ರೆಸ್ ರೈಲನ್ನು ಈ ಮೊದಲು ಜುಲೈ  31 ರವರೆಗೆ ಓಡಿಸಲು ಸೂಚಿಸಲಾಗಿತ್ತು. ಈ ರೈಲನ್ನು ಆಗಸ್ಟ್‌ 07 ರಿಂದ ಸೆಪ್ಟಂಬರ್‌ 25 ರವರೆಗೆ ವಿಸ್ತರಿಸಲಾಗುತ್ತಿದೆ.

2. ಪ್ರತಿ ಮಂಗಳವಾರ  ತಂಜಾವೂರಿನಿಂದ ಪ್ರಾರಂಭವಾಗುವ ರೈಲು ಸಂಖ್ಯೆ 07326 ತಂಜಾವೂರು – ಎಸ್‌.ಎಸ್‌.ಎಸ್ ಹುಬ್ಬಳ್ಳಿ ಸಾಪ್ತಾಹಿಕ ಎಕ್ಸ್‌ಪ್ರೆಸ್ ರೈಲನ್ನು ಈ ಮೊದಲು ಆಗಸ್ಟ್‌ 01 ರವರೆಗೆ ಓಡಿಸಲು ಸೂಚಿಸಲಾಗಿತ್ತು. ಈ ರೈಲನ್ನು ಆಗಸ್ಟ್ 08 ರಿಂದ ಸೆಪ್ಟಂಬರ್‌ 26 ರವರೆಗೆ ವಿಸ್ತರಿಸಲಾಗುತ್ತಿದೆ.

II. ರೈಲುಗಳ ಮಾರ್ಗ ಬದಲಾವಣೆ

ದೌಂಡ್ – ಮನ್ಮಾಡ್ ವಿಭಾಗಗಳ ವ್ಯಾಪ್ತಿಯ ಬೇಲಾಪುರ – ಪಧೆಗಾಂವ್ ನಿಲ್ದಾಣಗಳಲ್ಲಿ ಜೋಡಿ ಮಾರ್ಗದ ಕಾಮಗಾರಿ ಸಲುವಾಗಿ ಈ ಕೆಳಗಿನ ಕೆಲವು ರೈಲುಗಳ ಮಾರ್ಗ ಬದಲಾವಣೆ ಮತ್ತು ನಿಯಂತ್ರಿಸಲಾಗುತ್ತಿದೆ. ಅವುಗಳ ಮಾಹಿತಿ.

1. ಜುಲೈ 20 ಮತ್ತು 21 ರಂದು ಕೆ.ಎಸ್.ಆರ್‌ ಬೆಂಗಳೂರಿನಿಂದ ಪ್ರಾರಂಭವಾಗುವ ರೈಲು ಸಂಖ್ಯೆ 12627 ಕೆ.ಎಸ್.ಆರ್‌ ಬೆಂಗಳೂರು- ನವದೆಹಲಿ ಕರ್ನಾಟಕ ಎಕ್ಸ್‌ಪ್ರೆಸ್ ರೈಲು ವಾಡಿ, ದೌಂಡ್‌, ಪುಣೆ, ಲೋನಾವಾಲಾ, ಕರ್ಜತ್, ಪನ್ವೆಲ್, ಕಲ್ಯಾಣ್, ಇಗತ್‌ಪುರಿ ಮತ್ತು ಮನ್ಮಾಡ ನಿಲ್ದಾಣಗಳ ಮೂಲಕ ಸಂಚರಿಸಲಿದೆ.

2. ಜುಲೈ 20 ಮತ್ತು 21 ರಂದು ಹಜರತ್ ನಿಜಾಮುದ್ದೀನ್‌ನಿಂದ ಪ್ರಾರಂಭವಾಗುವ ರೈಲು ಸಂಖ್ಯೆ 12780 ಹಜರತ್ ನಿಜಾಮುದ್ದೀನ್ – ವಾಸ್ಕೋ ಡ- ಗಾಮಾ ಎಕ್ಸ್‌ಪ್ರೆಸ್ ರೈಲು ಮನ್ಮಾಡ, ಇಗತ್‌ಪುರಿ, ಕಲ್ಯಾಣ್, ಪನ್ವೆಲ್, ಕರ್ಜತ್, ಲೋನಾವಾಲಾ ಮತ್ತು ಪುಣೆ ನಿಲ್ದಾಣಗಳ ಮೂಲಕ ಸಂಚರಿಸಲಿದೆ.

3. ಜುಲೈ 20 ರಂದು ಯಶವಂತಪುರದಿಂದ ಪ್ರಾರಂಭವಾಗುವ ರೈಲು ಸಂಖ್ಯೆ 12629 ಯಶವಂತಪುರ- ಹಜರತ್ ನಿಜಾಮುದ್ದೀನ್‌ ಎಕ್ಸ್‌ಪ್ರೆಸ್ ರೈಲು ಲೋನಾವಾಲಾ, ಕರ್ಜತ್, ಪನ್ವೆಲ್, ಕಲ್ಯಾಣ್ ಮತ್ತು ಮನ್ಮಾಡ ನಿಲ್ದಾಣಗಳ ಮೂಲಕ ಸಂಚರಿಸಲಿದೆ.

4. ಜುಲೈ 21 ರಂದು ಹುಬ್ಬಳ್ಳಿಯಿಂದ ಪ್ರಾರಂಭವಾಗುವ ರೈಲು ಸಂಖ್ಯೆ 20657 ಹುಬ್ಬಳ್ಳಿ – ಹಜರತ್ ನಿಜಾಮುದ್ದೀನ್‌ ಎಕ್ಸ್‌ಪ್ರೆಸ್ ರೈಲು ಪುಣೆ, ಲೋನಾವಾಲಾ, ಕರ್ಜತ್, ಪನ್ವೆಲ್, ಕಲ್ಯಾಣ್, ಇಗತ್‌ಪುರಿ ಮತ್ತು ಮನ್ಮಾಡ ನಿಲ್ದಾಣಗಳ ಮೂಲಕ ಸಂಚರಿಸಲಿದೆ.

ರೈಲು ನಿಯಂತ್ರಣ

1. ಜುಲೈ 20 ಮತ್ತು 21 ರಂದು ನವ ದೆಹಲಿಯಿಂದ ಪ್ರಾರಂಭವಾಗುವ ರೈಲು ಸಂಖ್ಯೆ 12628 ನವ ದೆಹಲಿ – ಕೆ.ಎಸ್.ಆರ್‌ ಬೆಂಗಳೂರು ಎಕ್ಸ್‌ಪ್ರೆಸ್ ರೈಲನ್ನು ಕೇಂದ್ರ ರೈಲ್ವೆ ವ್ಯಾಪ್ತಿಯಲ್ಲಿ 55 ನಿಮಿಷ ಕಾಲ ನಿಯಂತ್ರಿಸಲಾಗುತ್ತಿದೆ.

III. ರೈಲುಗಳ ಸಮಯ ವಿಸ್ತರಣೆ

ಈ ಕೆಳಗಿನ ಕೆಲವು ರೈಲುಗಳ ನಿಲುಗಡೆಯ ಸಮಯವನ್ನು ಹೆಚ್ಚಿಸಲು ದಕ್ಷಿಣ ರೈಲ್ವೆಯು ನಿರ್ಧರಿಸಿದೆ.

1. ಜುಲೈ 20 ರಿಂದ ಕೊಯಿಮತ್ತೂರ ರೈಲು ಸಂಖ್ಯೆ 11014 ಕೊಯಿಮತ್ತೂರು – ಲೋಕಮಾನ್ಯ ತಿಲಕ್ ಟರ್ಮಿನಸ್ ಎಕ್ಸ್‌ಪ್ರೆಸ್‌ ರೈಲು ತಿರುಪ್ಪೂರ್‌ ನಿಲ್ದಾಣದ ನಿಲುಗಡೆ ಸಮಯವನ್ನು 3 ನಿಮಿಷ ಕಾಲ ಹೆಚ್ಚಿಸಲಾಗುತ್ತಿದೆ. ಈ ರೈಲು 09:33/09:35AM ಬದಲು 09:30/09:35AM ಗೆ ಆಗಮಿಸಿ/ನಿರ್ಗಮಿಸಲಿದೆ.

2. ಜುಲೈ 20 ರಿಂದ ತಿರುನೆಲ್ವೇಲಿ ನಿಲ್ದಾಣದಿಂದ ಪ್ರಾರಂಭಿಸುವ ರೈಲು ಸಂಖ್ಯೆ 11022 ತಿರುನೆಲ್ವೇಲಿ – ದಾದರ್ ಎಕ್ಸ್‌ಪ್ರೆಸ್‌ನ ರೈಲು ಕರೂರ್‌ ನಿಲ್ದಾಣದ ನಿಲುಗಡೆ ಸಮಯವನ್ನು 3 ನಿಮಿಷ ಕಾಲ ಹೆಚ್ಚಿಸಲಾಗುತ್ತಿದೆ. ಈ ರೈಲು 08:08/08:10PM ಬದಲು 08:05/08:10PMಗೆ ಆಗಮಿಸಿ/ನಿರ್ಗಮಿಸಲಿದೆ.

3. ಜುಲೈ 20 ರಿಂದ ಕನ್ಯಾಕುಮಾರಿ ನಿಲ್ದಾಣದಿಂದ ಪ್ರಾರಂಭಿಸುವ ರೈಲು ಸಂಖ್ಯೆ 16525 ಕನ್ಯಾಕುಮಾರಿ – ಕೆ.ಎಸ್‌.ಆರ್ ಬೆಂಗಳೂರು ಎಕ್ಸ್‌ಪ್ರೆಸ್‌ನ ರೈಲು ಕೊಟ್ಟಾಯಂ ನಿಲ್ದಾಣದ ನಿಲುಗಡೆ ಸಮಯವನ್ನು 2 ನಿಮಿಷ ಕಾಲ ಹೆಚ್ಚಿಸಲಾಗುತ್ತಿದೆ. ಈ ರೈಲು 04:20/04:23PM ಬದಲು 04:20/04:25PM ಗೆ ಆಗಮಿಸಿ/ನಿರ್ಗಮಿಸಲಿದೆ.

ನಿಲುಗಡೆ ಅವಧಿಯ ವಿಸ್ತರಣೆ

ರೈಲುಗಳ ಸಂಖ್ಯೆ 16209/16210 ಮೈಸೂರು – ಅಜ್ಮೀರ್ – ಮೈಸೂರು ಎಕ್ಸ್‌ಪ್ರೆಸ್‌ ರೈಲುಗಳನ್ನು ಪಾಲ್ಘರ್‌ ನಿಲ್ದಾಣದ ಪ್ರಾಯೋಗಿಕ ನಿಲುಗಡೆಯನ್ನು ಆರು ತಿಂಗಳವರೆಗೆ ಈ ಹಿಂದೆ ಮಾರ್ಚ್‌ 31 ರಿಂದ ಜಾರಿಗೆ ಬರುವಂತೆ ಸೂಚಿಸಲಾಗಿತ್ತು. ಈ ನಿಲುಗಡೆ ಅವಧಿಯನ್ನು ಮುಂದಿನ ಆದೇಶ ಬರುವರೆಗೂ ವಿಸ್ತರಿಸಲಾಗುತ್ತಿದೆ ಎಂದು ಹುಬ್ಬಳ್ಳಿ ನೈರುತ್ಯ ರೈಲ್ವೆ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಅನೀಶ್ ಹೆಗಡೆ ಪ್ರಕಟನೆ ತಿಳಿಸಿದ್ದಾರೆ.

I. EXTENSION OF SERVICE OF TRAINS

The service of following trains will be extended with existing timings, stoppages, coach composition, fare structure to clear extra rush of passengers as per details mentioned below: –

1. Train No. 07325 SSS Hubballi – Thanjavur Weekly Express which was notified earlier to run from SSS Hubballi up to 31.07.2023 on every Monday is further extended to run from 07.08.2023 to 25.09.2023.

2. Train No. 07326 Thanjavur – SSS Hubballi Weekly Express which was notified earlier to run from Thanjavur up to 01.08.2023 on every Tuesday is further extended to run from 08.08.2023 to 26.09.2023 with existing timings, stoppages, coach composition, fare structure.

II. DIVERSION /REGULATION OF TRAINS

The following trains will be diverted due to Pre-Non-Interlocking/ Non-Interlocking works at Belapur – Padhegaon stations for commissioning in connection with Daund – Manmad doubling as per details mentioned below: –

1. Train 12627 KSR Bengaluru – New Delhi Express commencing journey from KSR Bengaluru on 20.07.2023 and 21.07.2023 will be diverted to run via Wadi, Daund, Pune, Lonavala, Karjat, Panvel, Kalyan, Igatpuri and Manmad.

2. Train 12780 Hazrat Nizamuddin – Vasco Da Gama Express commencing journey from Hazrat Nizamuddin on 20.07.2023 and 21.07.2023 will be diverted to run via Manmad, Igatpuri, Kalyan, Panvel, Karjat, Lonavala, Pune.

3. Train 12629 Yesvantpur – Hazrat Nizamuddin Express commencing journey from Yesvantpur on 20.07.2023 will be diverted to run via Lonavala, Karjat, Panvel, Kalyan, and Manmad.

4. Train 20657 SSS Hubballi – Hazrat Nizamuddin Express commencing journey from SSS Hubballi on 21.07.2023 will be diverted to run via Pune, Lonavala, Karjat, Panvel, Kalyan, Igatpuri and Manmad.

REGULATION:

Train 12628 New Delhi – KSR Bengaluru Express commencing journey from Hazrat Nizamuddin on 20.07.2023 and 21.07.2023 will be regulated for 55 minutes enroute over Central Railway.

III. ENHANCEMENT OF STOPPAGE’S TIME

Southern Railway has decided to enhance the stoppage’s timings of following trains as per details mentioned below: –

1. Stoppage timings of Train No. 11014 Coimbatore – Lokmanya Tilak Terminus Express at Tiruppur will be enhanced for 3 minutes with effect commencing journey from Coimbatore from 20.07.2023. Accordingly, this train will arrive/depart Tiruppur – 09:30/09:35 AM instead of 09:33/09:35 AM.

2. Stoppage timings of Train No. 11022 Trunelveli – Dadar Express at Karur will be enhanced for 3 minutes with effect commencing journey from Trunelveli from 20.07.2023. Accordingly, this train will arrive/depart Karur – 08:05/08:10 PM instead of 08:08/08:10 PM.

3. Stoppage timings of Train No. 16525 Kanniyakuamri – KSR Bengaluru Express at Kottayam will be enhanced for 2 minutes with effect commencing journey from Kanniyakuamri from 20.07.2023. Accordingly, this train will arrive/depart Kottayam – 04:20/04:25 PM instead of 04:20/04:23 PM.

EXTENSION OF STOPPAGE’S PERIOD

The experimental stoppage at Palghar of Train No. 16209/16210 Mysuru – Ajmer – Mysuru Express which was notified earlier for six months with effect from 31.03.2023 will be continued until further advise.

Related posts

ಗೋಡೆಗೆ ಬಣ್ಣ ಬಳಿವಾಗ ಶಾಕ್: ಹುಬ್ಬಳ್ಳಿಯಲ್ಲಿ ಕಾರ್ಮಿಕ ಅಬ್ಬಾಸ್’ಅಲಿ ಸತ್ತಿದ್ದು, ಭಯಾನಕ!!

eNewsLand Team

ಅರಿದೊಡೆ ಶರಣ : ಮರೆದೊಡೆ ಮಾನವ

eNEWS LAND Team

ಉಕ್ರೇನ್’ನಲ್ಲಿ ಸಿಲುಕಿರುವ ರಾಜ್ಯದ ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ತಾಯ್ನಾಡಿಗೆ ಕರೆತರಲು ಸೂಕ್ತ ಕ್ರಮ : ಸಿಎಂ

eNewsLand Team