26 C
Hubli
ಮೇ 25, 2024
eNews Land
ಸುದ್ದಿ

ಗುರುವಂದನಾ ಕಾರ್ಯಕ್ರಮ ಹಾಗೂ ಸ್ನೇಹ ಸಮ್ಮಿಲನ

ಇಎನ್‌ಎಲ್ ಅಣ್ಣಿಗೇರಿ: ಗುರುಗಳ ಮೇಲಿನ ಪ್ರೀತಿ ವಿಶ್ವಾಸ ಭಕ್ತಿ ಶ್ರದ್ಧೆ ನಿಷ್ಠೆವುಳ್ಳ ಗುರುಪರಂಪರೆಯ ವಿದ್ಯಾರ್ಥಿಗಳ  ಶಿಷ್ಯಬಳಗ  ಹೂಮಳೆಗರೆದು, ಸ್ವಾಗತ ಕೋರಿ, ಆಮಂತ್ರಿಸಿ, ಸನ್ಮಾನಿಸಿ, ಗೌರವಿಸಿ, ನೆನಪಿನ ಕಾಣಿಕೆ ನೀಡಿ ಗುರುವಂದನೆ ಸಲ್ಲಿಸಿದ ಶಿಷ್ಯವೃಂದಕ್ಕೆ ಶಿಕ್ಷಣ ಭೋದನೆ, ಸಂಸ್ಕಾರ, ಶಿಸ್ತು, ನೈತಿಕಶಿಕ್ಷಣ, ಬದುಕಿನ ಮೌಲ್ಯಗಳನ್ನು  ಕಲಿಸಿದ್ದಕ್ಕೆ ಸಾರ್ಥಕವಾಯಿತು ಎಂದು ಉದ್ಘಾಟನೆ ನೆರವೇರಿಸಿ ನಿವೃತ್ತ ಶಿಕ್ಷಕಿ ಎಸ್.ಎಸ್.ಬೆಂತೂರ ಹೇಳಿದರು.

ಪಟ್ಟಣದ ಪಂಪ ಸ್ಮಾರಕ ಭವನದಲ್ಲಿ ಅಣ್ಣಿಗೇರಿ ಶಿಕ್ಷಣ ಸಂಸ್ಥೆಯ ಶ್ರೀ ಅಮೃತೇಶ್ವರ ಸಂಯುಕ್ತ ಪದವಿ ಪೂವ್ ಕಾಲೇಜ ಹಾಗೂ ಎನ್.ಎಸ್.ಹುಬ್ಬಳ್ಳಿ ಬಾಲಕಿಯರ ಪ್ರೌಢಶಾಲೆಯ 1993 ನೇ ಸಾಲಿನ ಎಸ್.ಎಸ್.ಎಲ್.ಸಿ. ವಿದ್ಯಾರ್ಥಿ-ವಿದ್ಯಾರ್ಥಿನಿಯರು 30 ವರ್ಷದ ನಂತರ ಹಮ್ಮಿಕೊಂಡ ಗುರುವಂದನಾ ಹಾಗೂ ವಾರ್ಷಿಕ ಸ್ನೇಹ ಸಮ್ಮೇಳನ ಕಾರ್ಯಕ್ರಮದಲ್ಲಿ ಮಾತನಾಡಿದರು.
ಅಧ್ಯಕ್ಷತೆಯನ್ನು ಅಣ್ಣಿಗೇರಿ ಶಿಕ್ಷಣ ಸಂಸ್ಥೆಯ  ಚೇರಮನ್ ಆರ್.ಎ.ದೇಸಾಯಿ ವಹಿಸಿದ್ದರು.
ಶ್ರೀಮತಿ ಎನ್.ಎಸ್.ಹೂಗಾರ ಮಹಾವಿದ್ಯಾಲಯದ ಪ್ರಾಚಾರ್ಯ ಎಸ್.ಎಸ್.ಹರ್ಲಾಪೂರ ಮಾತನಾಡಿ, ತಾಲೂಕಿನ 25 ಗ್ರಾಮಗಳ ವಿದ್ಯಾರ್ಥಿಗಳಿಗೆ ಶಿಕ್ಷಣ ಕಲ್ಪಿಸಿಕೊಟ್ಟ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಗಳು, ಶಿಕ್ಷಕವೃತ್ತಿ ನೀಡಿ ಅನ್ನಕ್ಕೆ ದಾರಿ ತೋರಿದ ಶ್ರೀ ಅಮೃತೇಶ್ವರ ಶಿಕ್ಷಣ ಸಂಸ್ಥೆಯ ಗುರುಶಿಷ್ಯರಿಗೆ ದಾರಿದೀಪವಾಗಿದೆ. ಈ ಶಿಕ್ಷಣ ಸಂಸ್ಥೆಯಲ್ಲಿ ಕಲಿತ ವಿದ್ಯಾರ್ಥಿಗಳು ರಾಜ್ಯ ರಾಷ್ಟ್ರಮಟ್ಟದಲ್ಲಿ ಸಂಸ್ಥೆಯ ಕೀರ್ತಿಪತಾಕೆಯನ್ನು ಹೆಚ್ಚಿಸಿದ್ದಾರೆ. ಕೆ.ಎ.ಎಸ್ ಅಧಿಕಾರಿ ಗಿರೀಶ ಪಾಟೀಲ, ಪದ್ಮಶ್ರೀ ಪುರಸ್ಕೃತ ಕೃಷಿ ವಿಜ್ಞಾನಿ ಡಾ.
ಎ.ಆಯ್.ನಡಕಟ್ಟಿನ, ಯುಪಿಎಸ್ಸಿ ರ‍್ಯಾಂಕ ಸಾಧಕ ಸಿದ್ಧಲಿಂಗಪ್ಪ ಪೂಜಾರ. ಶಿಷ್ಯಸಾಧಕರನ್ನು ಸ್ಮರಿಸಿಕೊಂಡರು. ಈಗಾಗಲೇ ವಿದ್ಯಾರ್ಥಿಗಳು ಸಶಕ್ತ ಬದುಕಿನೊಂದಿಗೆ ಕುಟುಂಬ ನಿರ್ವಹಣೆ ಮಾಡುವ ಮೂಲಕ ಗುರುವಂದನಾ ಕಾರ್ಯಕ್ರಮ ಆಯೋಜಿಸಿ ವಿದ್ಯಾಜ್ಞಾನ ಕಲ್ಪಿಸಿದ ಗುರುಸ್ಮರಣೆ ಮಾಡುತ್ತಿರೋದು ಶ್ಲಾಘನೀಯವೆಂದರು.
ಸಾನಿಧ್ಯವಹಿಸಿದ್ದ ದಾಸೋಹಮಠದ ಶಿವಕುಮಾರ ಶ್ರೀಗಳು ಮಾತನಾಡಿ, ಇಂದಿನ ಆದುನಿಕ ತಂತ್ರಜ್ಞಾನದ ಯುಗದಲ್ಲಿ  ಗುರುಪರಂಪರೆ ಮರಿಚಿಕೆಯಾದರೂ ಉಳಿಸಿ ಬೆಳೆಸಿಕೊಂಡು ಗುರುವಂದನಾ ಕಾರ್ಯಕ್ರಮ ಆಯೋಜಿಸಿದ್ದು ಸಂತಸ ತಂದಿದೆ. ತಂದೆ ತಾಯಿ ಗುರು ಎಂದಿಗೂ ಮರೆಯಬಾರದು. ನಿಮ್ಮ ಉಜ್ವಲ ಭವಿಷ್ಯಕ್ಕೆ ಬಾಳಿನುದ್ದಕ್ಕೂ ಹಗಲಿರಳು ಶ್ರಮಿಸಿದ ಜೀವನ ಮಾರ್ಗ ದಾರಿ ತೋರಿದ ಮಹಾತ್ಮರು. ಗುರುಗಳು  ಕಲಿಸಿದ ಜ್ಞಾನ, ಸನ್ಮಾರ್ಗದಲ್ಲಿ ಮುನ್ನಡೆದು ಗುರುವಂದನಾ ಕಾರ್ಯಕ್ರಮ ಆಯೋಜಿಸಿದ್ದು ಶ್ಲಾಘನೀಯ.
ಸಕಲಕ್ಕೆಲ್ಲಾ ಅಖಳಂಕ ಗುರುವೆಂದು ನಿಖಳಶಾಸ್ತçವು ಪೇಳುತಿರಲು. ಗುರು ಇಲ್ಲದೇ ಗುರಿಮುಟ್ಟಲು ಅಸಾಧ್ಯ.ಶಿವಪಥನರಿವೋಡೆ ಗುರುಪಥವ ಮೊದಲು, ಗುರುಭಕ್ತಿಬಾರದೇ ಶಿವಭಕ್ತಿಬಾರದು. ಅಂತಹ ಗುರುವೃಂದವನ್ನು  ೩೦ ವರ್ಷದ ಹಳೆಯ ವಿದ್ಯಾರ್ಥಿ-ವಿದ್ಯಾರ್ಥಿನಿಯರ  ಬಳಗ ಗೌರವಿಸಿ ಸನ್ಮಾನಿಸಿ ಗುರುಕೃಪೆಗೆ ಪಾತ್ರರಾಗಿದ್ದಿರಿ. ವೃದ್ದ ತಂದೆ ತಾಯಿ ಗುರುಗಳು, ಜನ್ಮಭೂಮಿ, ಸ್ನೇಹಬಳಗ, ಮರೆಯದೇ ಬದುಕಿನುದ್ದಕ್ಕೂ ಕಾಪಾಡಿಕೊಂಡು ಸಾಗಬೇಕಿದೆ.ಉತ್ತಮ ಶಿಕ್ಷಣ, ಸಂಸ್ಕಾರ, ಶಿಸ್ತು, ಜ್ಞಾನ ಕಲ್ಪಿಸಿದ ಗುರುವೃಂದ ಆಮಂತ್ರಿಸಿ,ಗುರ್ತಿಸಿ, ಸನ್ಮಾನಿಸಿ,ಗೌರವಿಸಿದ್ದಿರಿ. ತಮ್ಮೆಲ್ಲಾ ಶಿಷ್ಯಬಳಗಕ್ಕೆ ಸದ್ಗುರುವಿನ ಕೃಪಾಕಟಾಕ್ಷವಿರಲಿ. ತಮ್ಮೆಲ್ಲರಿಗೆ ಆರೋಗ್ಯ, ಸಂಪತ್ತು, ಕರುಣಿಸಲೆಂದು ಹಾರೈಸಿದರು.
ಪ್ರಾಥಮಿಕ, ಪ್ರೌಢಶಾಲೆ ಶಿಕ್ಷಕರು, ಸಿಬ್ಬಂದಿ ವರ್ಗಕ್ಕೆ ನೆನೆಪಿನ ಕಾಣಿಕೆ ನೀಡುವ ಸನ್ಮಾನಿಸಿದರು. ಕಾರ್ಯನಿರತ ಪತ್ರಿಕಾ ಬಳಗದ ಪತ್ರಕರ್ತರನ್ನು ಸನ್ಮಾನಿಸಿದರು. ಅಗಲಿದ ಶಿಕ್ಷಕರ ವೃಂದ ಹಾಗೂ ವಿದ್ಯಾರ್ಥಿವೃಂದದ  ಆತ್ಮಕ್ಕೆ ಶಾಂತಿಕೋರಲು ಮೌನಾಚರಣೆ ಮಾಡಿದರು. ಹಳೆಯ ವಿದ್ಯಾರ್ಥಿ ಬಳಗದ ವಿದ್ಯಾರ್ಥಿಗಳು ಶಾಲಾ ದಿನಗಳಲ್ಲಿ ಕಳೆದ ನೆನೆಪುಗಳು, ಶಿಕ್ಷಕರು ಕೊಟ್ಟ ಜ್ಞಾನದ ಕುರಿತು ಪ್ರಾಸ್ತವಿಕವಾಗಿ ಮಾತನಾಡಿದರು.
ಈ ಸಂದರ್ಭದಲ್ಲಿ ಪಟ್ಟಣದ ಪ್ರಾಥಮಿಕ ನಿವೃತ್ತ ಶಾಲಾ ಶಿಕ್ಷಕರು. ಪ್ರೌಢಶಾಲಾ ನಿವೃತ್ತ ಶಿಕ್ಷಕರು. ೩೦ ವರ್ಷದ ೧೯೯೩ ನೇ ಸಾಲಿನ ವಿದ್ಯಾರ್ಥಿ-ವಿದ್ಯಾರ್ಥಿನಿಯರ ಬಳಗ ಕುಟುಂಬ ಸಮೇತ ಮಕ್ಕಳೊಂದಿಗೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

Related posts

ತಾಲೂಕಾದರೂ ಬದಲಾಗದ ಅಣ್ಣಿಗೇರಿ ಹಣೆಬರಹ

eNEWS LAND Team

ಗೃಹಲಕ್ಷ್ಮೀ ನೊಂದಣಿ ಮಹಿಳೆಯರ ಬ್ಯಾಂಕ್ ಖಾತೆಗೆ 2000 ರೂಗಳು ಹಣ ಜಮಾ ನೀಡಿ, ಪಿಂಕ್ ಕಾರ್ಡ ವಿತರಣೆ: ಶಾಸಕ ಎನ್.ಎಚ್.ಕೋನರಡ್ಡಿ

eNewsLand Team

ಇ-ಶ್ರಮ್ ತಂತ್ರಾಂಶದ ಮೂಲಕ ಅಸಂಘಟಿತ ಕಾರ್ಮಿಕರ‌ ಮಾಹಿತಿ ಸಂಗ್ರಹಿಸಿ: ಅಪರ ಜಿಲ್ಲಾಧಿಕಾರಿ ಶಿವಾನಂದ ಕರಾಳೆ

eNEWS LAND Team