26 C
Hubli
ಮೇ 25, 2024
eNews Land
ಸುದ್ದಿ

ಪಠ್ಯದ ಜೊತೆಗೆ ಪಠ್ಯೇತರ ಚಟುವಟಕೆ ಅವಶ್ಯ: ಡಾ.ಮೋತಿಲಾಲ್ ರಾಠೋಡ

ಇಎನ್‌ಎಲ್ ಅಣ್ಣಿಗೇರಿ: ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಶೈಕ್ಷಣಿಕ ಅರ್ಹತೆ ಹೊಂದಿದ್ದರೆ ಮಾತ್ರ ಸಾಲುವುದಿಲ್ಲ. ಪಠ್ಯೇತರ ಜ್ಞಾನದ ಅವಶ್ಯಕತೆಯಿದೆ ಎಂದು ವಿದ್ಯಾರ್ಥಿಗಳಿಗೆ  ಪ್ರಾಚಾರ್ಯ ಡಾ.ಮೋತಿಲಾಲ್ ರಾಠೋಡ ಸಲಹೆ ನೀಡಿದರು.

ಪಟ್ಟಣದ ಎಂ.ಬಿ.ಹಳ್ಳಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನ    ಸಾಂಸ್ಕೃತಿಕ ವಿಭಾಗದಡಿಯಲ್ಲಿ ವಿವಿಧ ಸ್ಪರ್ಧೆಗಳು ಹಾಗೂ ಫನ್ ವೀಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ಎನ್.ಎಸ್.ಎಸ್.ಸಂಯೋಜಕಿ ಭಾರತಿ ಮಣ್ಣೂರ ಮಾತನಾಡಿ ವಿದ್ಯಾರ್ಥಿಗಳಲ್ಲಿ ಅಡಗಿರುವ ಪ್ರತಿಭೆ ಹೊರಹಾಕಲು ಇಂತಹ ವೇದಿಕೆಯ ಸದ್ಭಳಿಕೆ ಅವಶ್ಯವೆಂದು ಹೇಳಿದರು.

ಐ.ಕ್ಯೂ.ಎ.ಸಿ. ಸಂಚಾಲಕಿ ಡಾ.ವಿದ್ಯಾ ಹಡಗಲಿ ಮಾತನಾಡಿ, ಇಂದಿನ ಆಧುನಿಕ ತಂತ್ರಜ್ಞಾನ ಯುಗದಲ್ಲಿ ವಿದ್ಯಾರ್ಥಿಗಳಿಗೆ ಪಠ್ಯ ಮತ್ತು ಪಠ್ಯೇತರ ಚಟುವಟಕೆ ಜ್ಞಾನ ಅಗತ್ಯವೆಂದರು.

ಸಾಂಸ್ಕೃತಿಕ ವಿಭಾಗದ ಸಂಚಾಲಕ ಡಾ.ಅಣ್ಣಪ್ಪ ರೊಟ್ಟಿವಾಡ ಪ್ರಾಸ್ತವಿಕವಾಗಿ ಮಾತನಾಡಿ, ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಠ್ಯೇತರ ಚಟುವಟಕೆಗಳಲ್ಲಿ ತೊಡಗಿಸಿಕೊಳ್ಳುವುದು ಸೂಕ್ತ. ಒಂದು ವಾರ ಜರಗುವ ಎಲ್ಲಾ ಸ್ಪರ್ಧೆಗಳಲ್ಲಿ ಆಸಕ್ತಿಯಿಂದ ಭಾಗವಹಿಸಬೇಕೆಂದರು.

ಈ ವೇಳೆ ಕಾಲೇಜಿನ ಅಧ್ಯಾಪಕರು, ಸಿಬ್ಬಂದಿ ವರ್ಗ, ವಿದ್ಯಾರ್ಥಿ-ವಿದ್ಯಾರ್ಥಿನಿಯರು ವಿದ್ಯಾ ಹೊಸೂರ, ವಿಜಯಲಕ್ಷ್ಮಿ ಶಾನಭೋಗರ, ಭುವನೇಶ್ವರಿ ಹೈಗರ್, ನಿಂಗನಗೌಡ ಪಾಟೀಲ ಉಪಸ್ಥಿತರಿದ್ದರು.

ENL Annigeri: In today’s competitive era, academic qualification alone does not count. Principal Dr. Motilal Rathoda advised the students that there is a need for extracurricular knowledge.

He spoke by inaugurating various competitions and fun week program under the cultural department of MB Halli Government First Class College of the town.

NSS Coordinator Bharti Mannura said that such a forum is necessary to bring out the hidden talent among the students.

IQAC Moderator Dr.Vidya Hadagali said that in today’s modern technology era, students need knowledge of curricular and extracurricular activities.

Dr.Annappa Rottiwada, coordinator of cultural department, spoke in introduction, it is advisable for students to engage in extra-curricular activities in large numbers. He wanted to participate with interest in all the competitions held for a week.

College faculty, staff, male and female students Vidya Hosur, Vijayalakshmi Shanabhogara, Bhuvaneshwari Haigar, Ninganagowda Patila were present.

Related posts

ಬಿಸಿಗಾಳಿಗೆ ಐವತ್ತು ಸಾವು? ಘೋರ ದುರಂತ ಆಗಿರೋದೆಲ್ಲಿ? ರೆಡ್ ಅಲರ್ಟ್!!

eNewsLand Team

ಶಿಕ್ಷಕರ ಹಾಗೂ ಶಿಕ್ಷಕೇತರ ಸಮಸ್ಯೆಗಳನ್ನು ಬಗೆಹರಿಸದಿದ್ದಲ್ಲಿ ಉಗ್ರ ಹೋರಾಟ

eNEWS LAND Team

ಅಂಧರ ಬಾಳಿಗೆ ಬೆಳಕಾದ ಲೂಯಿಸ್ ಬ್ರೈಲ್

eNewsLand Team