26.4 C
Hubli
ಏಪ್ರಿಲ್ 18, 2024
eNews Land
ಸುದ್ದಿ

ಧರ್ಮದ  ಮಾನವೀಯ ಮೌಲ್ಯಗಳೇ ಸಮಾಜಕ್ಕೆ ಪೂರಕ: ಬಸವಲಿಂಗ ಶ್ರೀಗಳು

ಇಎನ್ಎಲ್ ಅಣ್ಣಿಗೇರಿ: ಧರ್ಮದ ತತ್ವ ತಳಹದಿ ಮೇಲೆ ಸಮಾಜಿಕ,ರಾಜಕೀಯ, ಧಾರ್ಮಿಕ, ಶೈಕ್ಷಣಿಕ ಕ್ಷೇತ್ರಗಳಲ್ಲಿ ಮಾನವೀಯ ಮೌಲ್ಯಗಳನ್ನು ಸಮಾಜದಲ್ಲಿ ಬಿತ್ತಿದರೇ ಮಾತ್ರ ಸುಶಕ್ತ ಸಂಘಟಿತ ಸಶಕ್ತ ಸಮಾಜ ನಿರ್ಮಾಣ ಮಾಡಲು ಸಾಧ್ಯ. ವ್ಯಕ್ತಿ ವಿಕಾಸ ಪ್ರೇರಣೆ ಸಮಾಜ ವಿಕಾಸಕ್ಕೆ ಪೂರಕವಾಗುತ್ತದೆ. ಆ ಹಿನ್ನಲೆಯಲ್ಲಿ ನಾಡಿನ ಬಸವಾದಿ ಶರಣರು, ಸಂತರು, ಸತ್ಪುರುಷರು, ಅವಧೂತರು, ತಪಸ್ವಿಗಳು, ಮಹಾತ್ಮರು ಸನಾತನ ಧರ್ಮದ ತಿರುಳನ್ನು ಅರುಹಿ ಆಚರಣೆ ತರುವ ಮೂಲಕ ಅಧೋಗತಿಯತ್ತ ಸಾಗುತ್ತಿರುವ ಸಮಾಜದಲ್ಲಿ ಅಂಕುಡೊoಕುಗಳನ್ನು ತಿದ್ದಿ, ಭಕ್ತಿ ಮಾರ್ಗದ ಮೂಲಕ ತತ್ವಸಿದ್ದಾಂತ ಪ್ರತಿಪಾದಿಸಿ, ಸಂಸ್ಕಾರ, ಸಂಸ್ಕೃತಿ, ಸಂಪ್ರದಾಯ, ಶಾoತಿ, ನೆಮ್ಮದಿಯ ಬದುಕು ಕಲ್ಪಿಸುವ ಮೂಲಕ ಅಮೂಲಾಗ್ರ ಬದಲಾವಣೆ ತಂದರುಎಂದು  ನವಲಗುಂದ ಗವಿಮಠದ ಬಸವಲಿಂಗ ಶ್ರೀಗಳು ಆರ್ಶೀವಚನದಲ್ಲಿ ನುಡಿದರು.ತಾಲೂಕಿನ ಮಣಕವಾಡ ಗ್ರಾಮದ ಅನ್ನದಾನೇಶ್ವರ ಮಠದ ತಪಸ್ವಿಗಳಾದ ಲಿಂ.ಮೃತ್ಯಂಜಯ ಶ್ರೀ ಅಜ್ಜನ ಸಂಭ್ರಮದ ಸಮಾರಂಭದಲ್ಲಿ ಮಾತನಾಡಿದರು. ಕಲಘಟಗಿ ಹನ್ನೆರಡುಮಠದ ರೇವಣಸಿದ್ದ ಶಿವಾಚಾರ್ಯ ಶ್ರೀಗಳು ಆರ್ಶೀವಚನದಲ್ಲಿ  ಮಾನವರ ನಡೆ-ನುಡಿ ಸಾಮರಸ್ಯ ಮಹತ್ವಪೂರ್ಣದಾಗಿದ್ದು, ಮಾತಿಗಿಂತ ಕೃತಿಗಿಳಿದಾಗ ಬೆಲೆ ಪಡೆಯಲು ಸಾಧ್ಯ. ಅಂತರoಗ ಶುದ್ಧಿ ಬಹಿರಂಗ ಶುದ್ಧಿ ಸಮನ್ವಯ ಸಿದ್ದಿಸುತ್ತದೆ. ಮನುಷ್ಯ ಶೋಧನೆ, ಸಾಧನೆ, ಪ್ರಯತ್ನ, ಪರಿಸರದಿಂದ ತನ್ನೆಲ್ಲಾ ವ್ಯವಹಾರ ಬದುಕಿಗೆ ಒಳಿತು-ಕೆಡಕು ಪ್ರೀತಿ-ವಿಶ್ವಾಸ ಸ್ನೇಹ- ಸೌಹಾರ್ಧತೆ ಹಗೆ-ನಗೆ ಎಲ್ಲದಕ್ಕೂ ನಡೆ ನುಡಿಗಳು ಪರಿಣಾಮ ಬಿರುತ್ತವೆ. ಆತ್ಮ ವಿಶ್ವಾಸದಿಂದ ಕೂಡಿದ ನಡೆ-ನುಡಿಯಿಂದ ಚಾರಿತ್ರ್ಯ ಶುದ್ಧಿಯನ್ನು, ನೈತಿಕ ನಿಷ್ಠೆಯನ್ನು ಇಂದಿನ ಎಷ್ಟು ಜನರಲ್ಲಿ ಕಾಣಲು ಸಾದ್ಯ? ನುಡಿದಂತೆ ನಡೆದು ಇದೇ ಜನ್ಮ ಕಡೆಯೆಂದು ಅರಿತು ಆಚರಿಸುವ ಸಮಾಜ ನಿರ್ಮಾಣ ವ್ಯವಸ್ಥೆಗೆ ಧರ್ಮದ ಮೌಲ್ಯಗಳು ಅವಶ್ಯಕವೆಂದು ನುಡಿದರು. ಸುಳ್ಳ ಪಂಚಗೃಹ ಹಿರೇಮಠದ ಶಿವಸಿದ್ಧರಾಮ ಶಿವಾಚಾರ್ಯ ಶ್ರೀಗಳು ಆರ್ಶೀವಚನದಲ್ಲಿ “ಇಂದಿoಗೆoತು ನಾಳಿಗೆಂತೆoದು ಚಿಂತಿಸಲೇಕೆ, ತಂದಿಕ್ಕುವ ಶಿವಂಗೆ ಬಡತನವೇ”ಎಂದು ನಂಬಿ ಭವದ ಲೌಕಿಕ ಚಿಂತೆಗಳನ್ನು ನೀಗಬೇಕು. ಕ್ಷಣಿಕವಾದ ಅಶಾಶ್ವತವಾದ ಚಿಂತೆಗಳಲ್ಲಿ ಮುಳುಗಿ, ತೊಳಲಿ, ಬಳಲುವುದಕ್ಕಿಂತ ಶಾಶ್ವತವಾದ ಶಿವಚಿಂತೆಯಲ್ಲಿ ತೊಡಗಿ, ಇಹಲೋಕದ ಬದುಕನ್ನು ಶಿವಬದುಕನ್ನಾಗಿ ಮಾಡಿಕೊಳ್ಳಬೇಕೆಂದು ಹೇಳಿದರು.

ಸಾನಿಧ್ಯವಹಿಸಿದ್ದ ಅಭಿನವ ಮೃತ್ಯಂಜಯ ಶ್ರೀಗಳು ಮಾತನಾಡಿ ಅಜ್ಜನ ಸಂಭ್ರಮದಲ್ಲಿ ತನು-ಮನ-ಧನ ಭಕ್ತಿಶೃದ್ದೆಯಿಂದ ಪಾಲ್ಗೊಂಡಿರುವುದು ನಿಷ್ಠೆಯುಳ್ಳ ತಮ್ಮಂಥ ಸದ್ಭಕ್ತರ ಸೇವೆಗೆ ಅರ್ಪಣೆ ಮಾಡುತಿದೆ .ಸ್ಥಾವರಕ್ಕೀಳುವುಂಟು ಜಂಗಮಕ್ಕೆ ಅಳವಿಲ್ಲ. ಎನ್ನುವ ಹಾಗೆ, ಸ್ಥಾವರದಿಂದ ವೈಭವೀಕರಿಸಿದ ಮಠಗಳಿಗಿಂತ ಸದ್ಗುರುವಿನ ಕರೆಗೆ ಒಗ್ಗೊಟ್ಟು ಜಾತಿ-ಮತ-ಪಂಧವೆನ್ನದೇ ಸರ್ವ ಜನಾಂಗದ ಸದ್ಭಕ್ತರು ಲಕ್ಷಾಂತರ ಭಕ್ತಸಮೂಹ ಕೂಡಿ ಅಜ್ಜನ ಸಂಭ್ರಮದಲ್ಲಿ ಆಚರಿಸುತ್ತಿರೋದು ವೈಶಿಷ್ಟಪೂರ್ಣವಾಗಿದೆ ಎಂದರು.
ಅಡ್ನೂರಿನ ಪಂಡಿತ .ಎಂ ಕಲ್ಲಿನಾಥ ಶಾಸ್ತ್ರಿಗಳು ಪ್ರವಚನ ಮಾಡಿದರು. ಪದ್ಮಶ್ರೀ ಪುರಸ್ಕೃತ ಎ.ಆಯ್. ನಡಕಟ್ಟಿನ ಪ್ರವಚನ ಪ್ರಾರಂಭೋತ್ಸವ ಉದ್ಘಾಟನೆ ನೇರವೆರಿಸಿದರು. ಮುಖ್ಯ ಅತಿಥಿ ಚಂಬಣ್ಣ ಹಾಳದೋಟರ ಮಾತನಾಡಿದರು. ಸಮಾಜ ಸೇವೆಗೈದ ಸಾಧಕರನ್ನು ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಎಸ್.ಎಸ್.ಶಿವಳ್ಳಿ, ಚಂಬಣ್ಣ ಹಾಳದೋಟರ, ಶಿವಯೋಗಿ ಸುರಕೋಡ, ಆನಂದ ನ್ಯಾವಳ್ಳಿ, ವಿರುಪಾಕ್ಷಪ್ಪ ಹರ್ಲಾಪೂರ, ಎ.ಸಿ.ಚಾಕಲಬ್ಬಿ, ಎ.ಸಿ.ಅಣ್ಣಿಗೇರಿ, ಸುನೀಲ ಗುಡಿ, ಸಿ,ಎಸ್.ಪೋಲಿಸ್‌ಪಾಟೀಲ, ಜಗದೀಶ ಪಾಟೀಲ ಜೆ.ಬಿ.ಸೊರಟೂರ ಉಪಸ್ಥಿತರಿದ್ದರು. ತಾಲೂಕಿನ ಸುತ್ತಮುತ್ತಲಿನ ಗ್ರಾಮಗಳ ಸದ್ಭಕ್ತರು ಭಾಗವಹಿಸಿದ್ದರು. 

 

Related posts

40 ವರ್ಷದಲ್ಲಿ ಇಂಥ ಮಾತು ಕೇಳಿರಲಿಲ್ಲ: ಸಭಾಪತಿ ಹೊರಟ್ಟಿ ನೋವಿನಿಂದ ಮಾತಾಡಿದ್ಯಾಕೆ? ನೋಡಿ!

eNewsLand Team

ಕಾಂಗ್ರೆಸ್’ನವರು ಸುಳ್ಳು ಸುದ್ದಿ ಹರಡಿ ಸಮಾಜದಲ್ಲಿ ದ್ವೇಷ ಹುಟ್ಟಿಸುತ್ತಿದ್ದಾರೆ: ಸಿಎಂ ಬೊಮ್ಮಾಯಿ

eNEWS LAND Team

ಹುಬ್ಬಳ್ಳಿ: ಪುನೀತ್ ರಾಜ್‍ಕುಮಾರಗೆ ಶ್ರದ್ಧಾಂಜಲಿ ಸಲ್ಲಿಸಲು 500ಕಿಮೀ ಓಡುತ್ತಿರುವ ದ್ರಾಕ್ಷಾಯಿಣಿ!

eNewsLand Team