24 C
Hubli
ಡಿಸೆಂಬರ್ 7, 2023
eNews Land
ಕ್ರೀಡೆ ಸುದ್ದಿ

ಚೊಚ್ಚಲ ಪ್ರವೇಶದಲ್ಲೇ ಗುಜರಾತ್ ಟೈಟನ್ಸ್’ಗೆ ಚಾಂಪಿಯನ್ ಪಟ್ಟ!!

ಹದಿನಾಲ್ಕು ವರ್ಷಗಳ ರಾಜಸ್ಥಾನ ರಾಯಲ್ಸ್ ಕನಸು ಭಗ್ನ

ಇಎನ್ಎಲ್ ಸ್ಪೋರ್ಟ್ಸ್ ಕ್ಲಬ್ : ಐಪಿಎಲ್ ಚೊಚ್ಚಲ ಪ್ರವೇಶದಲ್ಲೇ ಗುಜರಾತ್ ಟೈಟನ್ಸ್ ಚಾಂಪಿಯನ್ ಪಟ್ಟ‌ ಅಲಂಕರಿಸಿದೆ. ಮೊದಲ ಆವೃತ್ತಿಯ ಚಾಂಪಿಯನ್ ರಾಜಸ್ಥಾನ ರಾಯಲ್ಸ್’ನ್ನು 7 ವಿಕೆಟ್‌ ಅಂತರದಲ್ಲಿ ಮಣಿಸಿ ಕಪ್ ಎತ್ತಿದೆ.

ನಾಯಕ ಹಾರ್ದಿಕ್ ಪಾಂಡ್ಯಾ ನಾಯಕತ್ವಕ್ಕೆ ಎಲ್ಲೆಡೆ ಶ್ಲಾಘನೆ ವ್ಯಕ್ತವಾಗಿದ್ದು, ಸಾಮೂಹಿಕ ಉತ್ತಮ ಪ್ರದರ್ಶನದಿಂದ ಚಾಂಪಿಯನ್ ಪಟ್ಟಕ್ಕೇರಿದೆ. ಆರ್.ಆರ್. ರನ್ನರ್ ಅಪ್ ಆಗಿದೆ.

ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಟಾಸ್ ಗೆದ್ದ ರಾಜಸ್ಥಾನ ರಾಯಲ್ಸ್ ನಾಯಕ ಸಂಜು ಸ್ಯಾಮ್ಸನ್ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿತು. ಹೀಗಾಗಿ ಹಾರ್ದಿಕ್ ಪಾಂಡ್ಯ ನಾಯಕತ್ವದ ಗುಜರಾತ್ ಟೈಟನ್ಸ್ ಮೊದಲು ಬೌಲಿಂಗ್ ಮಾಡಿತು.

ರಾಜಸ್ಥಾನ ರಾಯಲ್ಸ್ ಪರ ಆರಂಭಿಕರಾಗಿ ಕಣಕ್ಕಿಳಿದಿದ್ದ ಆರೆಂಜ್ ಕ್ಯಾಪ್ ವೀರ ಜೋಸ್ ಬಟ್ಲರ್ (39) ಮತ್ತು ಯಶಸ್ವಿ ಜೈಸ್ವಾಲ್ (22) ನೆರವಿನಿಂದ ರಾಜಸ್ಥಾನ ರಾಯಲ್ಸ್ ನಿಗದಿತ 20 ಓವರ್‌ಗಳಲ್ಲಿ 9 ವಿಕೆಟ್ ನಷ್ಟಕ್ಕೆ 130 ರನ್ ಗಳಿಸಿ, ಗುಜರಾತ್ ಟೈಟನ್ಸ್ ತಂಡಕ್ಕೆ 131 ರನ್‌ಗಳ ಸಾಧಾರಣ ಮೊತ್ತದ ಟಾರ್ಗೆಟ್ ನೀಡಿತ್ತು.

ಗೆಲವಿನ ಬೆನ್ನತ್ತಿದ ಗುಜರಾತ್ ಟೈಟನ್ಸ್ ಆರಂಭಿಕ ಶುಭ್‌ಮನ್ ಗಿಲ್ (45), ವೃದ್ಧಿಮಾನ್ ಸಹಾ (5), ನಾಯಕ ಹಾರ್ದಿಕ ಪಾಂಡ್ಯ (34) ಮ್ಯಾಥ್ಯೂ ವೇಡ್ (8) ಮತ್ತು ಡೇವಿಡ್ ಮಿಲ್ಲರ್ (32) ಅವರ ಅಮೋಘ ಬ್ಯಾಟಿಂಗ್ ನೆರವಿನಿಂದ 18.1 ಓವರ್‌ಗಳಲ್ಲಿ 3 ವಿಕೆಟ್ ನಷ್ಟಕ್ಕೆ 133 ರನ್ ಗಳಿಸಿ ಗೆದ್ದು ಚಾಂಪಿಯನ್ ಆಯಿತು.

ರಾಜಸ್ಥಾನ್ ರಾಯಲ್ಸ್ ತಂಡ ಬ್ಯಾಟಿಂಗ್‌ನಲ್ಲಿ ಸಂಪೂರ್ಣ ವಿಫಲವಾಗುವ ಮೂಲಕ ಆರಂಭದಲ್ಲಿಯೇ ಹಿನ್ನಡೆ ಅನುಭವಿಸಿತ್ತು. ಬೌಲಿಂಗ್‌ನಲ್ಲಿ ಒಂದು ಹಂತದಲ್ಲಿ ಯಶಸ್ಸು ಸಾಧಿಸಿದರೂ ಆ ಲಾಭವನ್ನು ಪೂರ್ಣ ಪ್ರಮಾಣದಲ್ಲಿ ಬಳಸಿಕೊಳ್ಳಲು ಸಾಧ್ಯವಾಗಿಲ್ಲ. ಆದರೆ ಟೂರ್ನಿಯಲ್ಲಿ ಆರಂಭದಿಂದಲೂ ಉತ್ತಮ ಪ್ರದರ್ಶನ ನೀಡಿದ ಜಿಟಿ ಫೈನಲ್ ಪಂದ್ಯವನ್ನು ಸಲೀಸಾಗಿ ಗೆದ್ದಿದೆ.

ಜಿಟಿ ಹಾರ್ದಿಕ್ ಪಾಂಡ್ಯಾ ನಾಯಕನ ಜವಾಬ್ದಾರಿಯನ್ನು ಉತ್ತಮವಾಗಿ ನಿರ್ವಹಿಸಿ ಫೈನಲ್ ಪಂದ್ಯದಲ್ಲಿ 3 ವಿಕೆಟ್, 34 ರನ್ ಗಳಿಸಿದರು.

 

Related posts

ಐಎಸ್ಎಲ್ : ಬೆಂಗಳೂರು ಎಫ್‌ಸಿ ಶುಭಾರಂಭ!

eNewsLand Team

ಬ್ಲಾಕ್ ಆ್ಯಂಡ್ ವೈಟ್ ನಂಬಿ ಕಲಘಟಗಿ ಕೆಲಸ ಬಿಟ್ಟ ವೈದ್ಯೆಗೆ ₹ 50 ಲಕ್ಷ ಪಂಗನಾಮ!!

eNewsLand Team

ಹುಬ್ಬಳ್ಳಿಯಲ್ಲಿ ಅಕ್ರಮ ಮದ್ಯದ ಅಮಲು!

eNewsLand Team