34 C
Hubli
ಮಾರ್ಚ್ 23, 2023
eNews Land
ವಿದೇಶ

ಟಿಬೆಟಿಯನ್ ಭಾಷಾ ಕಲಿಕೆ ಬ್ಯಾನ್ ಮಾಡಿದ ಡ್ರ್ಯಾಗನ್ !

Listen to this article

ಇಎನ್ಎಲ್ ಬ್ಯೂರೋ

ಟಿಬೆಟ್ ಹಾಗೂ ಅದರ ಸಂಸ್ಕೃತಿ ಮೇಲೆ ದಬ್ಬಾಳಿಕೆಯನ್ನು ಮುಂದುವರಿಸಿರುವ ಚೀನಾ ಕಿಂಗ್ಹೈ ಪ್ರಾಂತ್ಯದಲ್ಲಿ ಟಿಬೆಟಿಯನ್ ವಿದ್ಯಾರ್ಥಿಗಳಿಗೆ ಅವರ ಭಾಷೆ ಕಲಿಕಾ ತರಗತಿಗಳನ್ನು ನಿಷೇಧಿಸಿದೆ. ಅಲ್ಲದೇ ಈ ಕಾನೂನು ವಿರೋಧಿಸಿದ ಇಬ್ಬರು ವಿದ್ಯಾರ್ಥಿಗಳಿಗೆ ಸೆರೆಮನೆ ದರ್ಶನ ಮಾಡಿಸಿದೆ.

ಸರ್ಕಾರದ ಆದೇಶವನ್ನು ಉಲ್ಲಂಘಿಸಿದರೆ ‘ಗಂಭೀರ ಕಾನೂನು ಪರಿಣಾಮಗಳು ಮತ್ತು ಶಿಕ್ಷೆಯನ್ನು’ ಎದುರಿಸಬೇಕಾಗುತ್ತದೆ ಎಂದು ಅಧಿಕಾರಿಗಳು ಎಚ್ಚರಿಸಿದ್ದಾರೆ ಎಂದು ಮೂಲವನ್ನು ಉಲ್ಲೇಖಿಸಿ ರೇಡಿಯೊ ಫ್ರೀ ಏಷ್ಯಾ ವರದಿ ಮಾಡಿದೆ.

“ಶಾಲೆಗಳನ್ನು ಮುಚ್ಚಿರುವ ಚಳಿಗಾಲದ ರಜಾದಿನಗಳಲ್ಲಿ ಟಿಬೆಟಿಯನ್ ಭಾಷೆಯನ್ನು ಕಲಿಸಲು ಯಾವುದೇ ವ್ಯಕ್ತಿ ಅಥವಾ ಸಂಸ್ಥೆಗೆ ಅನೌಪಚಾರಿಕ ತರಗತಿಗಳು ಅಥವಾ ಕಾರ್ಯಾಗಾರಗಳನ್ನು ನಡೆಸಲು ಅನುಮತಿ ನೀಡಲಾಗುವುದಿಲ್ಲ

“ಎಲ್ಲಾ ಪ್ರಾಥಮಿಕ ಶಾಲೆಗಳಲ್ಲಿ ಈಗಾಗಲೇ ಚೈನೀಸ್ ಭಾಷೆಯಲ್ಲಿ ವಿಷಯಗಳನ್ನು ಕಲಿಸಲಾಗುತ್ತಿದೆ ಮತ್ತು ಟಿಬೆಟಿಯನ್ ಭಾಷೆಯಲ್ಲಿಯೇ ಔಪಚಾರಿಕ ತರಗತಿಗಳನ್ನು ಹೊರತುಪಡಿಸಿ, ಇತರ ಎಲ್ಲಾ ವಿಷಯಗಳನ್ನು ಕ್ರಮೇಣ ಚೈನೀಸ್ ಭಾಷೆಯಲ್ಲಿ ಕಲಿಸಲಾಗುತ್ತದೆ” ಎಂದು ರೇಡಿಯೊ ಫ್ರೀ ಏಷ್ಯಾ ಮೂಲವನ್ನು ಉಲ್ಲೇಖಿಸಲಾಗಿದೆ.

“ಈ ಅನೌಪಚಾರಿಕ ಟಿಬೆಟಿಯನ್ ಭಾಷಾ ತರಗತಿಗಳ ಮೇಲಿನ ಸರ್ಕಾರದ ನಿಷೇಧವು ಟಿಬೆಟಿಯನ್ನರ ಮೂಲಭೂತ ಹಕ್ಕುಗಳನ್ನು ಉಲ್ಲಂಘಿಸುತ್ತದೆ” ಎಂದು ಭಾರತ ಮೂಲದ ಟಿಬೆಟಿಯನ್ ಸೆಂಟರ್ ಫಾರ್ ಹ್ಯೂಮನ್ ರೈಟ್ಸ್ ಅಂಡ್ ಡೆಮಾಕ್ರಸಿ ಖಂಡಿಸಿದೆ.

ಈಗಾಗಲೇ ಕಾನೂನು ವಿರೋಧಿಸಿ ಸಾಮಾಜಿಕ ಜಾಲತಾಣದಲ್ಲಿ ಚೀನಾ ಭಾಷೆ ಹೇರಿಕೆ ಖಂಡಿಸಿದ ಇಬ್ಬರು ಟಿಬೆಟಿಯನ್ ವಿದ್ಯಾರ್ಥಿಗಳನ್ನು ಚೀನಾದ ಅಧಿಕಾರಿಗಳು ಬಂಧಿಸಿದ್ದಾರೆ.

Related posts

ಕುವೈತ್’ನಲ್ಲಿ ಡಾಕ್ಟರ್ ವೃತ್ತಿಗಾಗಿ 468 ಹುದ್ದೆಗಳಿಗೆ ನೇರ ಸಂದರ್ಶನ

eNEWS LAND Team

 ದ.ಆಫ್ರಿಕಾದ ಹೋರಾಟಗಾರ ಡೆಸ್ಮಂಡ್‌ ಟುಟು ನಿಧನ

eNewsLand Team

ಇಸ್ರೇಲ್ ಪ್ರಧಾನಿಯಿಂದ ದೀಪಾವಳಿ ಶುಭಾಶಯ

eNEWS LAND Team