26 C
Hubli
ಏಪ್ರಿಲ್ 27, 2024
eNews Land
ಆರೋಗ್ಯ

ಜಗತ್ತನ್ನು ಕಾಡುತ್ತಾ ಕೋವಿಡ್ ಮತ್ತೊಂದು ಮರಿ ಓಮಿಕ್ರಾನ್!!?

ಇನ್ನೇನು ಕೋವಿಡ್ ಕಡಿಮೆ ಆಯ್ತು ಎನ್ನುವಷ್ಟರಲ್ಲಿ ವೈರಸ್ಸಿನ ಹೊಸ ರೂಪಾಂತರ ತಳಿ ‘ ಓಮಿಕ್ರಾನ್ ‘ ಪತ್ತೆಯಾಗಿದೆ. ಇದು ಜಗತ್ತಿನಲ್ಲಿ ಮತ್ತೊಮ್ಮೆ ಕಳವಳ ಸೃಷ್ಟಿಸಿದೆ

ಇಎನ್ಎಲ್ ಡೆಸ್ಕ್: ದಕ್ಷಿಣ ಆಫ್ರಿಕಾ, ಬೋಟ್ಸ್‌ವಾನಾ, ಜಿಂಬಾಬ್ವೆ, ನಮೀಬಿಯಾ ಮತ್ತು ಲೆಸೊಟೊ ದೇಶದಲ್ಲಿ ಕೊರೋನಾ ಹೊಸ ತಳಿ ಪತ್ತೆಯಾಗಿದೆ. ಈ ರೂಪಾಂತರ ತಳಿಗೆ (ಬಿ.1.1.529) ‘ಓಮಿಕ್ರಾನ್’ ಎಂಬ ಹೆಸರಿಡಲಾಗಿದೆ. ಇದು ಲಸಿಕೆಗೂ ಕೇರ್ ಮಾಡದಿರುವುದು ಜಗತ್ತಿನಾದ್ಯಂತ ಭಾರಿ ಆತಂಕ ಮೂಡಿಸಿದ್ದು, ಅತ್ಯಂತ ವೇಗವಾಗಿ ಹರಡುವ ಸಾಮರ್ಥ್ಯ ಹೊಂದಿದೆ ಎನ್ನಲಾಗಿದೆ.

ಸಿಂಗಪುರ ಈ ತಳಿಯ ಜಿನೋಮ್ ಸೀಕ್ವೆನ್ಸ್ ಅಧ್ಯಯನ ನಡೆಸಿತ್ತು. ಮೂಲ ಕೊರೊನಾವೈರಸ್‌ ಮತ್ತು ಹೆಚ್ಚು ವೇಗವಾಗಿ ಹರಡುವ ಸಾಮರ್ಥ್ಯವಿರುವ ಡೆಲ್ಟಾ ತಳಿಗಿಂತಲೂ ವೇಗವಾಗಿ ಹರಡುವ ಸಾಮರ್ಥ್ಯ ಈ ಓಮಿಕ್ರಾನ್ ತಳಿಗೆ ಇದೆ ಎಂಬುದು ಅಧ್ಯಯನದಲ್ಲಿ ಪತ್ತೆಯಾಗಿದೆ.

ಈ ತಳಿಯ ವೈರಾಣು ಆಫ್ರಿಕಾ ಖಂಡದಿಂದಾಚೆಗೆ ಈಗಾಗಲೇ ಹರಡಿರುವ ಅಪಾಯವಿದೆ. ಇದನ್ನು ನಿಯಂತ್ರಿಸದೇ ಇದ್ದರೆ ಪರಿಸ್ಥಿತಿ ಬಿಗಡಾಯಿಸುವ ಸಾಧ್ಯತೆ ಇದೆ’ ಎಂದು ಬ್ರಿಟನ್‌ನ ಆರೋಗ್ಯ ಸಚಿವಾಲಯ ಕಳವಳ ವ್ಯಕ್ತಪಡಿಸಿದೆ. ಇಸ್ರೇಲ್‌, ಬೆಲ್ಜಿಯಂ ಮತ್ತು ಲೆಸಿಟೊ ದೇಶಗಳಲ್ಲಿ ಈ ತಳಿಯ ತಗುಲಿರುವ ಒಂದೊಂದು ಪ್ರಕರಣಗಳು ಪತ್ತೆಯಾಗಿವೆ.

 

 

ಈ ತಳಿಯ ವೈರಾಣು ಪತ್ತೆಯಾಗಿರುವ ಆಫ್ರಿಕಾದ ಆರು ರಾಷ್ಟ್ರಗಳಿಂದ ವಿಮಾನ ಸಂಚಾರವನ್ನು ಬ್ರಿಟನ್, ಜರ್ಮನಿ ಮತ್ತು ಇಟಲಿ ಈ ದೇಶಗಳಿಗೆ ವಿಮಾನ ಸಂಚಾರವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿವೆ. ಮಲೇಷ್ಯಾ, ಸಿಂಗಪುರ, ಇಸ್ರೇಲ್ ಇದನ್ನೇ ಅನುಸರಿಸಿವೆ ಆನಂತರ ಐರೋಪ್ಯ ಒಕ್ಕೂಟವೂ ಈ ದೇಶಗಳಿಗೆ ವಿಮಾನ ಸಂಚಾರ ಸ್ಥಗಿತಗೊಳಿಸಿದೆ.

ಈ ತಳಿ ಬಗ್ಗೆ ಚರ್ಚಿಸಲು ವಿಶ್ವ ಆರೋಗ್ಯ ಸಂಸ್ಥೆ ಶುಕ್ರವಾರ ಸಭೆ ನಡೆಸಿದೆ. ಓಮಿಕ್ರಾನ್ ಬಗ್ಗೆ ಹೆಚ್ಚಿನ ಮಾಹಿತಿ ಲಭ್ಯವಿಲ್ಲ. ಲಸಿಕೆಗಳು ಇದರ ವಿರುದ್ಧ ರಕ್ಷಣೆ ನೀಡುತ್ತವೆಯೇ ಎಂಬುದನ್ನು ತಿಳಿಯಲು ಇನ್ನೂ ಒಂದು ವಾರ ಬೇಕಾಗುತ್ತದೆ ಎಂದು ಹೇಳಿದೆ.

ಆಧಾರ: (ಎಪಿ/ಎಎಫ್‌ಪಿ/ ರಾಯಿಟರ್ಸ್/ ಪಿವಿ)

 

Related posts

ಎಸ್ ಡಿ ಎಂ: ಮತ್ತೆ 116 ಜನರಲ್ಲಿ ಕೋವಿಡ್ ಸೋಂಕು

eNewsLand Team

ವಿಶ್ವ ಮಹಿಳಾ ದಿನದ ಅಂಗವಾಗಿ ಮಹಿಳೆಯರಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರ

eNEWS LAND Team

ಜಿಮ್ ನಲ್ಲಿ ವರ್ಕೌಟ್ ಮಾಡುವವರು ನೋಡಲೇ ಬೇಕಾದ ವಿಡಿಯೋ

eNEWS LAND Team