34 C
Hubli
ಏಪ್ರಿಲ್ 25, 2024
eNews Land
ಆರೋಗ್ಯ

ಎಸ್ ಡಿ ಎಂ: ಹೊಸ 77 ಕೋವಿಡ್ ಪ್ರಕರಣ ದೃಢ, ಒಟ್ಟಾರೆ 281 ಸೋಂಕಿತರು!

ಇಎನ್ಎಲ್ ಧಾರವಾಡ: ಇಲ್ಲಿನ ಎಸ್ ಡಿ ಎಂ ಮೆಡಿಕಲ್ ಕಾಲೇಜು ಹಾಗೂ ಆಸ್ಪತ್ರೆಯಲ್ಲಿ ಕಾಣಿಸಿಕೊಂಡಿರುವ ಕೋವಿಡ್ ಸೋಂಕು ಶನಿವಾರ ಮತ್ತೆ 77 ಜನರಲ್ಲಿ ದೃಢಪಟ್ಟಿದೆ.

ಕಳೆದ ಎರಡು ದಿನಗಳಲ್ಲಿ 204 ಜನರಲ್ಲಿ ಹಾಗೂ ಇಂದು 77 ಪ್ರಕರಣಗಳು ಸೇರಿ ಒಟ್ಟು 281 ಕೋವಿಡ್ ಪ್ರಕರಣಗಳು ದೃಢಪಟ್ಟಿವೆ. ಎಲ್ಲರಿಗೂ ಚಿಕಿತ್ಸೆ,ಔಷಧೋಪಚಾರ ನಡೆಯುತ್ತಿದೆ.ಸೋಂಕಿತರನ್ನು ಕ್ವಾರಂಟೈನ್ ಮಾಡಲಾಗಿದೆ. ತಪಾಸಣೆಗೆ ಒಳಪಟ್ಟವರು ಪ್ರತ್ಯೇಕವಾಗಿ ಇರಲು ಸೂಚಿಸಲಾಗಿದೆ.
ಇನ್ನೂ 1822 ಜನರ ತಪಾಸಣಾ ವರದಿಗಳು ಬರಬೇಕಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

ಎಲ್ಲರ ಆರೋಗ್ಯ ಸ್ಥಿರ

ವರದಿಯಾಗಿರುವ 281 ಪ್ರಕರಣಗಳಲ್ಲಿ , ಕೇವಲ 6 ಜನರಲ್ಲಿ ಮಾತ್ರ ರೋಗದ ಸಾಮಾನ್ಯ ಲಕ್ಷಣಗಳಿವೆ(Mild Symptomatic) ಖಾಯಿಲೆ ತೀವ್ರತರವಾಗಿಲ್ಲ. ಉಳಿದ 275 ಜನರಲ್ಲಿ ರೋಗದ ಲಕ್ಷಣಗಳು ಇಲ್ಲ (Asymptomatic). ಯಾವುದೇ ಸಾವು ಸಂಭವಿಸಿಲ್ಲ.

Related posts

ಧಾರವಾಡ: ಎಸ್ಡಿಎಂ ಕಾಲೇಜಿನ 66 ವಿದ್ಯಾರ್ಥಿಗಳಿಗೆ ಕೋವಿಡ್ ಪಾಸಿಟಿವ್!

eNewsLand Team

ಬಾದಾಮ್.. ಬಾದಾಮ್.. ಕಚ್ಚಾ ಬಾದಾಮ್…

eNEWS LAND Team

ಕೋವಿಡ್; ಗಡಿ ಜಿಲ್ಲೆಗಳಲ್ಲಿ ಸೋಂಕು ನಿಯಂತ್ರಣಕ್ಕೆ ಕಟ್ಟೆಚ್ಚರ: ಸಿಎಂ

eNewsLand Team