ಇಎನ್ಎಲ್ ಹುಬ್ಬಳ್ಳಿ: ಇಲ್ಲಿನ ದೇಶಪಾಂಡೆ ನಗರದ ಹೆಬಸೂರ ಆಸ್ಪತ್ರೆಯಲ್ಲಿ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ರೋಟರಿ ಕ್ಲಬ್ ಹುಬ್ಬಳ್ಳಿ ಸೆಂಟ್ರಲ್, ಟೈಜೆಂಟ್ ಕ್ಲಬ್ ಹುಬ್ಬಳ್ಳಿ, ಇನ್ನರ್‌ವೀಲ್ ಕ್ಲಬ್ ಆಫ್ ಹುಬ್ಬಳ್ಳಿ ಮಿಡಟೌನ ಹಾಗೂ ಹೆಬಸೂರ ಆಸ್ಪತ್ರೆಯ ಸಹಯೋಗದೊಂದಿಗೆ ಗರ್ಭಿಣಿ ಮಹಿಳೆಯರಿಗಾಗಿ ವಿವಿಧ ಆರೋಗ್ಯ ತಪಾಸಣಾ ಶಿಬಿರವನ್ನು ಹಮ್ಮಿಕೊಳ್ಳಲಾಗಿತ್ತು. ಇದೇ ಸಂದರ್ಭದಲ್ಲಿ ಗರ್ಭಿಣಿ ಮಹಿಳೆಯರಿಗೆ ರಾಂಪ್’ವಾಕ್ (RAMP WALK) ಮನೋರಂಜನೆ ಕ್ರೀಡೆ ಆಯೋಜಿಸಲಾಗಿತ್ತು.
ವಿಜೇತರಿಗೆ ವಿಶೇಷ ಬಹುಮಾನ ನೀಡಲಾಯಿತು. ಈ ಶಿಬಿರದಲ್ಲಿ ಸರ್‌ವೈಕಲ್ ಕ್ಯಾನ್ಸರ್, ಸ್ತನ ಕ್ಯಾನ್ಸರ್ (ಬೀಸ್ಟ್ ಕ್ಯಾನ್ಸರ್) ಹಾಗೂ ಸಂಧಿವಾತ (ಬೋನ್ ಡೆನ್ಸಿಟಿ) ಮುಂತಾದ ಸಮಸ್ಯೆಗಳ ಬಗ್ಗೆ ಗರ್ಭಿಣಿ ಮಹಿಳೆಯರಿಗೆ ಜಾಗೃತಿ ಮೂಡಿಸಿ ಉಚಿತವಾಗಿ ತಪಾಸಣೆ ಮಾಡಲಾಯಿತು. ಇದೇ ವೇಳೆ ಗರ್ಭಿಣಿ ಸ್ತ್ರೀಯರಿಗೆ ಉಚಿತವಾಗಿ ಕ್ಯಾಲ್ಸಿಯಂ ಮಾತ್ರೆ, ಪ್ರೋಟಿನ್ ಪೌಡರ (ಪೌಸ್ಟಿಕ ಪೌಡರ ) ನೀಡಲಾಯಿತು.
ಈ ವೇಳೆ ಆಸ್ಪತ್ರೆಯ ಮುಖ್ಯ ವೈದ್ಯೆ ಡಾ.ನಾಗರೇಖಾ ಹೆಬಸೂರ, ಸಂಗೀತಾ ಕಂದಕೂರ, ಸಂಜನಾ ಮಹೇಶ್ವರಿ, ಸಂಧ್ಯಾ ಮೋದಿ, ರಾಧಿಕಾ ಗೋಕಲೆ, ಸರಿತಾ ರಾವ, ಮನೀಷಾ ಡಿಸೋಜಾ ಮತ್ತು ಕ್ಲಬ್ ಸದಸ್ಯರು ಇದ್ದರು ಎಂದು ಹೆಬಸೂರ ಆಸ್ಪತ್ರೆಯ ಮುಖ್ಯ ವೈದ್ಯೆ ಡಾ.ನಾಗರೇಖಾ ಹೆಬಸೂರ ಪ್ರಕಟಣೆಗೆ ತಿಳಿಸಿದ್ದಾರೆ.
ಸುದ್ದಿಯನ್ನು ಹೆಚ್ಚಿನ ಸಂಖ್ಯೆಯಲ್ಲಿ ಹಂಚಿಕೊಳ್ಳಿ ನಮಗೆ ಬೆಂಬಲಿಸಿದಂತಾಗುತ್ತದೆ. ಪ್ಲೀಸ್ ಲೈಕ್ & ಶೇರ್
ಸುದ್ದಿ, ಜಾಹೀರಾತು, ಬ್ಯುಸಿನೆಸ್ ಪ್ರಮೋಷನ್ ಹಾಗೂ ಮಾಧ್ಯಮ ಸಲಹೆಗಾಗಿ ಸಂಪರ್ಕಿಸಿರಿ.
ಮೊಬೈಲ್ :+91 9141651260
ಇಮೇಲ್ : enewsland@gmail.com