35 C
Hubli
ಏಪ್ರಿಲ್ 19, 2024
eNews Land
ಆಧ್ಯಾತ್ಮಿಕ

ಶರಣ ಧರ್ಮದ-ಲಿಂಗಾಯತ ಧರ್ಮದ ತಿರುಳು: ವ್ಯಕ್ತಿಯ ನೈತಿಕ ಬದುಕಿನ ಹುರುಳು

ಇಎನ್ಎಲ್‌ ಅಣ್ಣಿಗೇರಿ: ವ್ಯಕ್ತಿ ಸುಸಂಸ್ಕೃತ, ನೈತಿಕ, ಸಾತ್ವಿಕ, ಬದುಕನ್ನು ಕ್ರೂಡೀಕರಿಸಿಕೊಂಡು ಕಟ್ಟಿಕೊಳ್ಳಬೇಕಾದ ಗುಣ ವಿಶೇಷಗಳೇ ಶರಣ ಧರ್ಮದ ನಿಜಾಚರಣೆಯ ಮುಖ್ಯ ಲಕ್ಷಣಗಳಾಗಿ ರೂಪಿತವಾಗಿವೆ. ಅಂದು-ಇoದು ಎಂದೆoದೂ ಮಾನ್ಯವೂ ಸರ್ವರೂ ಆಚರಿಸಲು ಯೋಗ್ಯವು ಆಗಿವೆ. ಎಕದೇವನಿಷ್ಠೆ, ಕುಲಭೇದರಾಹಿತ್ಯ, ಅಹಿಂಸಾಧರ್ಮ, ಸತ್ಯ ಶುದ್ಧ ಕಾಯಕ, ಆಶೆ, ರೋಷ, ವಂಚನೆರಹಿತ ಸಮತ್ವದ ಬದುಕು ಶರಣಧರ್ಮದ-ಲಿಂಗಾಯತ ಧರ್ಮದ ತಿರುಳು: ವ್ಯಕ್ತಿಯ ಬದುಕಿನ ಹುರುಳು. ಎಂದು ಅಡ್ನೂರಿನ ಪ್ರವಚನಕಾರ ಪಂ.ಎ.ಕಲ್ಲಿನಾಥ ಶಾಸ್ತ್ರಿಗಳು ಹೇಳಿದರು.ತಾಲೂಕಿನ ಮಣಕವಾಡ ಗ್ರಾಮದ ಅನ್ನದಾನೇಶ್ವರ ಮಠದ ಲಿ.ಮೃತುಂಜ್ಯಯ ಶ್ರೀಗಳ ಅಜ್ಜನ ಸಂಭ್ರಮ ಎರಡನೇ ದಿನದ ಪ್ರವಚನ ಸಮಾರಂಭದಲ್ಲಿ ಮಾತನಾಡಿದರು.

ಶರಣರು ಅಂತರoಗದ ಅರಿವಿನ ಅನುಸಂಧಾನಕ್ಕೆ ಆದ್ಯತೆ ನೀಡಿದರು. ಜಾತಿಭೇದ ನಿರಾಕರಣೆ ಶರಣ ಧರ್ಮದ ಮತ್ತೊಂದು ಮುಖ್ಯಲಕ್ಷಣ. ಓಂ ನಮ ಶಿವಾಯ ಎಂಬ ಷಡಕ್ಷರ ಮಂತ್ರವೇ ಶರಣಧರ್ಮದ ಮೂಲಮಂತ್ರ. ಜೀವಕಾರುಣ್ಯ ಶರಣಧರ್ಮದ ಮತ್ತೊಂದು ಮುಖ್ಯ ಲಕ್ಷಣ, ಸತ್ಯಶುದ್ಧ ಕಾಯಕದಿಂದ ಜೀವಿಸುವುದು ಧರ್ಮ ಮಾರ್ಗದಲ್ಲಿ ಸಂಪಾದಿಸುವುದು ಮಾತ್ರ ನಿಜಗಳಿಕೆ. ಆರ್ಥಿಕ ಸಮಾನತೆ ಮೂಲಮಂತ್ರ, ದಾಸೋಹ ರೂಪದಲ್ಲಿ ಇಲ್ಲದವರಿಗೆ ಹಂಚಬೇಕು.
ಶಿವಭಕ್ತರಿಗೆ ಯಾವುದೇ ಕುಲ ಜಾತಿಯ ಸೋಂಕಿಲ್ಲ. ಮಾನವರಲ್ಲಿ ಅಡಗಿರುವ ಆತ್ಮ ಒಂದೇ, ಕುಲ,ಜಾತಿ,ಕಲ್ಪನೆ ಎಲ್ಲಿಯದು? ಶಿವಭಕ್ತರೆಲ್ಲ ಮಾನವ ಕುಲದವರು ಶ್ರೇಷ್ಟತೆ-ಕನಿಷ್ಟತೆ ಅವರವರ ನಡೆ-ನುಡಿ ಅಚಾರ-ವಿಚಾರ ಮೇಲೆ ನಿರ್ಧರಿತವಾಗುತ್ತದೆ. ಶಿವನಲ್ಲಿ ನಿಷ್ಠೆ ಇಟ್ಟವರು ಶಿವಭಕ್ತರು ಅವರೇ ಕುಲಜರು ಶ್ರೇಷ್ಠರು ಎಂಬುದು ಶರಣ ನಿಲವು ಎಂದು ಪ್ರವಚನದಲ್ಲಿ ಶರಣ ಧರ್ಮ ಅರಿತು ಆಚರಿಸುವ ಬಸವಾದಿ ಶರಣರ ಕುರಿತು ಸವಿಸ್ತಾರವಾಗಿ ಮಾತನಾಡಿದರು.
ಸಾನಿಧ್ಯವಹಿಸಿದ್ದ ಅನ್ನದಾನೇಶ್ವರ ಮಠದ ಅಭಿನವ ಮೃತ್ಯುಂಜಯ ಶ್ರೀ ಆರ್ಶೀವಚನದಲ್ಲಿ ದಿನದಿಂದ ದಿನಕ್ಕೆ ಹೆಚ್ಚಿನ ಸಂಖೈಯಲ್ಲಿ ಮಠದ ಸದ್ಭಕ್ತರು ಪ್ರವಚನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಬಸವಾದಿ ಶಿವಶರಣ ತತ್ವಸಿದ್ದಾಂತ ವಚನಾಮೃತ ತಿರುಳನ್ನು ಅರುಹಿ, ಅಜ್ಜನ ದರುಷನ ಪಡೆದು ಪ್ರಸಾಧ ಸ್ವೀಕರಿಸಿ ಪುನಿರಾಗುತ್ತಿರೋದು ಸಂತಸ ತಂದಿದೆ. ಅಜ್ಜನ ಸಂಭ್ರಮದಲ್ಲಿ ಧಾರ್ಮಿಕ ಚಿಂತನೆಗಳನ್ನು ಅರಿದು ಆಚರಿಸಲ್ಪಟ್ಟರೇ ಕಾರ್ಯಕ್ರಮದ ಯಶಸ್ವಿರೂವಾರಿ ಸದ್ಭಕ್ತರಾಗಿ ಭಕ್ತಿ ಮಾರ್ಗದಲ್ಲಿ ಹೊರಹೊಮ್ಮತ್ತೀರಿ ಎಂದು ಆರ್ಶೀವಚನದಲ್ಲಿ ನುಡಿದರು.
ಮಣಕವಾಡದ ಗ್ರಾ.ಪಂ ಸರ್ವಸದಸ್ಯರನ್ನು ಸನ್ಮಾನಿಸಿ ಗೌರವಿಸಲಾಯಿತು. ಅನ್ನಪೂರ್ಣೇಶ್ವರಿ ಕಲಾತಂಡದವರಿoದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ವಿರೇಶ ಕುಬಸದ ನಿರೂಪಿಸಿದರು. ಪಟ್ಟಣ ಹಾಗೂ ತಾಲೂಕಿನ ಸುತ್ತಮುತ್ತಲಿನ ಗ್ರಾಮದ ಸದ್ಭಕ್ತರು ಉಪಸ್ಥಿತರಿದ್ದರು.

Related posts

ಅಣ್ಣಿಗೇರಿ ನೀಲಗುಂದ ಪುಣ್ಯಪುರುಷ ಗುದ್ನೇಶ್ವರ ಶ್ರೀಗಳ ಬಗ್ಗೆ ಇನ್ನಷ್ಟು ಓದಿ ತಿಳಿಯಿರಿ. ರಥೋತ್ಸವಕ್ಕೆ ತಪ್ಪದೇ ನಾಳೆ ಬನ್ನಿ…

eNEWS LAND Team

ನಿತ್ಯ ಪಂಚಾಂಗ 22/05/2023

eNEWS LAND Team

ಲೋಚನೇಶ್ವರ ಶ್ರೀಗಳು ಲಿಂಗೈಕ್ಯ ಶೋಕದಲ್ಲಿ ಭಕ್ತ ಜನತೆ

eNewsLand Team