18 C
Hubli
ನವೆಂಬರ್ 30, 2022
eNews Land
ದೇಶ ರಾಜ್ಯ

ಇದು ಅತ್ಯಂತ ಬಡ ರಾಜ್ಯ, ಕರ್ನಾಟಕದ ಬಡ ಜಿಲ್ಲೆ ಯಾವ್ದು ಗೊತ್ತೆ?

Listen to this article

ಬಿಹಾರ, ಜಾರ್ಖಂಡ್, ಉತ್ತರ ಪ್ರದೇಶ ಭಾರತದ ಅತ್ಯಂತ ಬಡ ರಾಜ್ಯಗಳಾಗಿ ಹೊರಹೊಮ್ಮಿವೆ: ನೀತಿ ಆಯೋಗ

ಇಎನ್ಎಲ್ ಡೆಸ್ಕ್: ನೀತಿ ಆಯೋಗದ ಬಹು ಆಯಾಮ ಬಡತನ ಸೂಚ್ಯಂಕ(ಎಂಪಿಐ)ದ ಪ್ರಕಾರ ಬಿಹಾರ, ಜಾರ್ಖಂಡ್ ಮತ್ತು ಉತ್ತರ ಪ್ರದೇಶ ರಾಜ್ಯಗಳು ಭಾರತದ ಅತ್ಯಂತ ಬಡ ರಾಜ್ಯಗಳಾಗಿ ಹೊರಹೊಮ್ಮಿವೆ.

ಈ ಸೂಚ್ಯಂಕದ ಪ್ರಕಾರ, ಬಿಹಾರದಲ್ಲಿ ಶೇ. 51.91 ರಷ್ಟು ಜನ ಬಡವರಾಗಿದ್ದರೆ, ಜಾರ್ಖಂಡ್‌ನಲ್ಲಿ ಶೇ. 42.16 ರಷ್ಟು ಜನ ಹಾಗೂ ಉತ್ತರ ಪ್ರದೇಶದಲ್ಲಿ ಶೇ. 37.79 ರಷ್ಟು ಜನ ಬಡವರಾಗಿದ್ದಾರೆ.

ಅತ್ಯಂತ ಬಡ ರಾಜ್ಯಗಳ ಸೂಚ್ಯಂಕದಲ್ಲಿ ಮಧ್ಯಪ್ರದೇಶ(ಶೇ 36.65)ನಾಲ್ಕನೇ ಸ್ಥಾನದಲ್ಲಿದ್ದರೆ, ಮೇಘಾಲಯ (ಶೇ 32.67) ಐದನೇ ಸ್ಥಾನದಲ್ಲಿದೆ.

ಕೇರಳ(ಶೇ. 0.71), ಗೋವಾ(ಶೇ. 3.76), ಸಿಕ್ಕಿಂ (ಶೇ. 3.82), ತಮಿಳುನಾಡು(ಶೇ. 4.89) ಮತ್ತು ಪಂಜಾಬ್(ಶೇ. 5.59) ರಾಜ್ಯಗಳು ದೇಶದಲ್ಲಿಯೇ ಅತ್ಯಂತ ಕಡಿಮೆ ಪ್ರಮಾಣದ ಬಡತನವನ್ನು ದಾಖಲಿಸಿವೆ ಮತ್ತು ಸೂಚ್ಯಂಕದ ಕೆಳಭಾಗದಲ್ಲಿವೆ.

ವರದಿಯ ಪ್ರಕಾರ, ಭಾರತದ ರಾಷ್ಟ್ರೀಯ ಎಂಪಿಐ ಮಾಪನವೂ ಆಕ್ಸ್‌ಫರ್ಡ್ ಪಾವರ್ಟಿ ಮತ್ತು ಮಾನವ ಅಭಿವೃದ್ಧಿ ಉಪಕ್ರಮ(OPHI) ಮತ್ತು ವಿಶ್ವಸಂಸ್ಥೆಯ ಅಭಿವೃದ್ಧಿ ಕಾರ್ಯಕ್ರಮ(UNDP) ಅಭಿವೃದ್ಧಿಪಡಿಸಿದ ಜಾಗತಿಕವಾಗಿ ಅಂಗೀಕರಿಸಲ್ಪಟ್ಟ ಮತ್ತು ದೃಢವಾದ ವಿಧಾನವನ್ನು ಬಳಸುತ್ತದೆ.

ಕರ್ನಾಟಕದ ಜಿಲ್ಲೆಗಳಲ್ಲಿ ಯಾದಗಿರಿ ಹೆಚ್ಚು ಬಡತನ ಹೊಂದಿರುವ ಎಂಬ ಹಣೆಪಟ್ಟಿ ಹೊತ್ತಿದೆ. ನಂತರ ರಾಯಚೂರು, ಕೊಪ್ಪಳ, ಬಳ್ಳಾರಿ, ವಿಜಯಪುರ ಹಾಗೂ ಕಲಬುರಗಿ ಕ್ರಮವಾಗಿವೆ.

ಈ ಪಟ್ಟಿ ಗಮನಿಸಿದಾಗ ಹಿಂದೆ ಹೈದರಾಬಾದ್ ಕರ್ನಾಟಕ ಎಂದು ಕರೆಸಿಕೊಳ್ಳುತ್ತಿದ್ದ ಈಗಿನ ಕಲ್ಯಾಣ ಕರ್ನಾಟಕ’ದ ಜಿಲ್ಲೆಗಳು ಹಾಗೂ ಮುಂಬೈ ಕರ್ನಾಟಕ ಎಂದು ಕರೆಸಿಕೊಳ್ಳುತ್ತಿದ್ದ ಈಗಿನ’ ಕಿತ್ತೂರು ಕರ್ನಾಟಕ’ದ ಬಹುತೇಕ ಚಿತ್ರಗಳು ತೀರಾ ಹಿಂದುಳಿದಿವೆ ಎಂಬುದು ಸಾಬೀತಾಗಿದೆ.

ಬಡತನದಲ್ಲಿ ನಂ.1 ಸ್ಥಾನದಲ್ಲಿರುವ ಯಾದಗಿರಿ ಜಿಲ್ಲೆಯ ಒಟ್ಟು ಜನಸಂಖ್ಯೆಯಲ್ಲಿ ಶೇ.41.67ರಷ್ಟು ಜನ ಬಡವರಾಗಿದ್ದಾರೆ. ನಂತರದ 9 ಸ್ಥಾನದಲ್ಲಿ ರಾಯಚೂರ (ಶೇ. 32.19 ). ಕೊಪ್ಪಳ (24.6), ವಿಜಯನಗರ ಸೇರಿದಂತೆ ಬಳ್ಳಾರಿ (ಶೇ.23.4), ವಿಜಯಪುರ (ಶೇ.22.4) ಕಲಬುರಗಿ (ಶೇ.21.8), ಗದಗ (22.20.27), ಬಾಗಲಕೋಟೆ (ಶೇ.20.23), ಬೀದರ್ (ಶೇ.19.42) ಹಾಗೂ ಚಾಮರಾಜನಗರ (ಶೇ.18.91) ಇವೆ.

ಹಳೆ ಮೈಸೂರಲ್ಲಿ ಬಡವರು ಕಮ್ಮಿ: ಹಳೆ ಮೈಸೂರು ಭಾಗಗಳು ‘ಸಂಪದ್ಭರಿತ’ ಎಂದು ಮೊದಲಿನಿಂದಲೂ ಜನಮಾನಸದಲ್ಲಿದೆ. ಇದಕ್ಕೆ ಪೂರಕವಾಗಿ ರಾಜಧಾನಿ ಬೆಂಗಳೂರಿನಲ್ಲಿ ರಾಜ್ಯದಲ್ಲೇ ಅತಿ ಕಮ್ಮಿ ಬಡವರು (ಶೇ.2.31) ಮಂಡ್ಯ (ಶೇ.6.62 ಬಡವರು) ಹಾಸನ (ಶೇ.6.64), ದಕ್ಷಿಣ ಕನ್ನಡ (ಶೇ.0.69). ಮೈಸೂರು (ಶೇ.8.39). ಕೊಡಗು (ಶೇ.6.74), ರಾಮನಗರ (ಶೇ.8.77), ಧಾರವಾಡ (ಶೇ.9.65) ಹಾಗೂ ಉಡುಪಿ (ಶೇ.10.32) ಬಡವರು ಇದ್ದಾರೆ.

Related posts

ಚಂಬೆಳಕಿನ ಮಹಾಬೆಳಗು; ಸಮನ್ವಯ ಕವಿ ಬಗ್ಗೆ ನಿಮಗೆಷ್ಟು ಗೊತ್ತು?

eNewsLand Team

ಜನರ ರಾಜಕಾರಣ ಮಾಡ್ತೇವೆ, ಅಧಿಕಾರದ ರಾಜಕೀಯ ಮಾಡಲ್ಲ: ಸಿಎಂ

eNewsLand Team

ನೈಋತ್ಯ ರೈಲ್ವೆ: ಸೊಲ್ಲಾಪುರ – ಯಶವಂತಪುರ -ಸೊಲ್ಲಾಪುರ ವಿದ್ಯುದೀಕರಣ

eNewsLand Team