24 C
Hubli
ಸೆಪ್ಟೆಂಬರ್ 21, 2023
eNews Land
ಅಪರಾಧ

ನಿವೇಶನ ಕೊಡಿಸೊದಾಗಿ ಲಕ್ಷ ಲಕ್ಷ ಗುಳುಂ! ಓದಿ ನಾಳೆ ನಿಮಗೂ ಪಂಗನಾಮ ಹಾಕಬಹುದು!

ಇಎನ್ಎಲ್ ಧಾರವಾಡ: ಲಕ್ಕಿ ಡ್ರಾ ಸ್ಕೀಂ ಮೂಲಕ ನಿವೇಶನ ನೀಡುವುದಾಗಿ ₹9.45 ಲಕ್ಷ ಪಡೆದು ವಂಚಿಸಿರುವ ಬಗ್ಗೆ ಒಂಬತ್ತು ಜನರ ವಿರುದ್ಧ ಬೆಂಡಿಗೇರಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬಿಡ್ನಾಳದ ಮನ್ಸೂರ್‌ಅಲಿ ಹೊಸಪೇಟೆ ಹಾಗೂ ಅವರ ತಾಯಿ ವಂಚನೆಗೆ ಒಳಗಾದವರು. ಸ್ಥಳೀಯ ನಿವಾಸಿಯಾದ ಜೈ ರೇಣುಕಯ್ಯ, ಶೋಭಾ ರೇಣುಕಯ್ಯ, ಮಹ್ಮದ್‌ ಲಡಾಲೆಸಾಬ್‌, ಜುನೈದ್‌ ಮುದ್ದೇಬಿಹಾಳ, ಶಹೇರಬಾನು ಮುದ್ದೇಬಿಹಾಳ, ತೌಸಿಫ್‌ಅಹ್ಮದ್‌ ಮುದ್ದೇಬಿಹಾಳ, ಅಬ್ದುಲ್‌ ಮಕಾಂದಾರ, ಜಾವೀದ್‌ ಮಕಾಂದಾರ ಮತ್ತು ಇಫ್ರಾಜ್‌ ಸಿತಾರವಾಲೆ ಆರೋಪಿತರು.

ಇವರು ಸುಲಭ ಕಂತುಗಳಲ್ಲಿ ಪ್ಲಾಟ್‌ ಪಡೆಯಲು ನವ ಭಾರತ (ಸ್ನೇಹಿತರಲ್ಲಿ ಮಾತ್ರ) ಹೆಸರಲ್ಲಿ ಲಕ್ಕಿ ಡ್ರಾ ಸ್ಕೀಂ ಮಾಡಿದ್ದರು. ಅದರಲ್ಲಿ ಸೇರಿಕೊಂಡಿದ್ದ ಮನ್ಸೂರ್‌ಅಲಿ, 800 ಚದರ ಅಡಿಯ 20 ಎನ್‌ಎ ಸಿಸಿ ನಿವೇಶನ ಪಡೆಯಲೆಂದು ನಗದು ಹಾಗೂ ಬ್ಯಾಂಕ್‌ ಮೂಲಕ ಹಣ ಪಾವತಿಸಿದ್ದರು. ನಂತರ ಅವರಿಗೆ ನಿವೇಶನವೂ ನೀಡದೆ, ಹಣವೂ ಮರಳಿಸದೆ ವಂಚಿಸಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

Related posts

ಬಿಟ್ ಕಾಯಿನ್ ಹಗರಣದ ಬಗ್ಗೆ ದಾಖಲೆಗಳಿದ್ದರೆ ತನಿಖಾ ಸಂಸ್ಥೆಗಳಿಗೆ ನೀಡಿ- ಸಿಎಂ ಬೊಮ್ಮಾಯಿ

eNEWS LAND Team

ಸಾಲಬಾಧೆಗೆ ನೇಣು ಹಾಕಿಕೊಂಡು ರೈತ ಆತ್ಮಹತ್ಯೆ; ಕಣ್ಣೀರಲ್ಲಿ ಕುಟುಂಬ

eNewsLand Team

ದನದ ಕೊಟ್ಟಿಗೆಗೆ ಬೆಂಕಿ 6 ದನ ಸಜೀವ ದಹನ, ಮತ್ತೊಂದು ತೀವ್ರ ಗಾಯ!

eNEWS LAND Team