24.8 C
Hubli
ಏಪ್ರಿಲ್ 25, 2024
eNews Land
ಅಪರಾಧ ಜಿಲ್ಲೆ ತಂತ್ರಜ್ಞಾನ

ಲ್ಯಾಪ್‍ಟಾಪ್‍ ದೋಷ: ಸಿಕ್ತು ₹ 52 ಸಾವಿರ ಪರಿಹಾರ!!

ಇಎನ್ಎಲ್ ಧಾರವಾಡ:

ದೋಷಪೂರಿತ ಲ್ಯಾಪ್‍ಟಾಪ್ ಪೂರೈಸಿದ ಲೆನೆವೊ ಕಂಪನಿಗೆ ಸೇವಾ ನ್ಯೂನ್ಯತೆ ಪ್ರಕರಣದಡಿ ಖರೀದಿದಾರ ವಿದ್ಯಾರ್ಥಿಗೆ 52 ಸಾವಿರ ರೂ. ಪರಿಹಾರ ಒದಗಿಸಲು ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗವು ಆದೇಶಿಸಿದೆ.

ಧಾರವಾಡ ನಗರದ ಹತ್ತಿಕೊಳ್ಳದ ನಿವಾಸಿ ಮಹ್ಮದ್ ಪೀರಜಾದೆ ಎಂಬ ವಿದ್ಯಾರ್ಥಿ ಲೆನೆವೊ ಕಂಪನಿಯ ಲ್ಯಾಪ್‍ಟಾಪ್‍ನ್ನು 42,499 ರೂ.ಗಳಿಗೆ 2020 ರ ನವೆಂಬರ್ 22 ರಂದು ಖರೀದಿಸಿದ್ದರು. ಲ್ಯಾಪ್‍ಟಾಪ್‍ನಲ್ಲಿ ದೋಷ ಕಂಡು ಬಂದ ನಂತರ ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗದಲ್ಲಿ ಪ್ರಕರಣ ದಾಖಲಿಸಿದರು. ವಿಚಾರಣೆ ನಡೆಸಿದ ಆಯೋಗವು ಕಂಪನಿಯು ಸೇವಾ ನ್ಯೂನ್ಯತೆ ಎಸಗಿದೆ ಎಂದು ನಿರ್ಣಯಿಸಿ ಲ್ಯಾಪ್‍ಟಾಪ್ ಮೌಲ್ಯ 42,499, ಸೇವಾ ನ್ಯೂನ್ಯತೆಗಾಗಿ 10 ಸಾವಿರ ರೂ.ಗಳನ್ನು ಶೇ.9 ರ ಬಡ್ಡಿ ಸಹಿತವಾಗಿ ಪರಿಹಾರ ನೀಡಬೇಕೆಂದು ಆಯೋಗದ ಅಧ್ಯಕ್ಷರಾದ ಈಶಪ್ಪ ಭೂತೆ, ಸದಸ್ಯರಾದ ವಿ.ಎ. ಬೋಳಶೆಟ್ಟಿ ಹಾಗೂ ಪಿ.ಸಿ. ಹಿರೇಮಠ ತೀರ್ಪು ನೀಡಿದ್ದಾರೆ.

Related posts

ಅವನೂ ಗೆದ್ದಿಲ್ಲ, ಇವನೂ ಸೋತಿಲ್ಲ!! ಬೆಟ್ಟಿಂಗ್ ಮಾಡ್ತಿದ್ದೋರು ಮಾವನ ಮನೆಗೆ!!

eNewsLand Team

ಬಸ್ ಬಾರದ್ದಕ್ಕೆ ಟ್ರ್ಯಾಕ್ಟರ್ ಏರಿದ್ದ ಶಾಲಾ ಬಾಲಕಿ ಬಿದ್ದು ಧಾರುಣ ಸಾವು

eNewsLand Team

ಹಿಜಾಬ್ ನಿರ್ಬಂಧ ಖಂಡಿಸಿ ಹುಬ್ಬಳ್ಳಿಯಲ್ಲಿ ಅಂಜುಮನ್ ಸಂಸ್ಥೆ ಬೃಹತ್ ಪ್ರತಿಭಟನೆ

eNewsLand Team