23.8 C
Hubli
ಮಾರ್ಚ್ 28, 2023
eNews Land
ಸಿನೆಮಾ

`ಬ್ಯಾಡ್ ಬ್ರೋ` ಹುಬ್ಬಳ್ಳಿ ಪ್ರೊಡಕ್ಷನ್ ಮೊದಲ ಸಿನೆಮಾ

Listen to this article

ಇಎನ್ಎಲ್ ಹುಬ್ಬಳ್ಳಿ: ಹುಬ್ಬಳ್ಳಿ ಪ್ರೊಡಕ್ಷನ್ ಮೂಲಕ ನಿರ್ಮಾಣವಾಗುತ್ತಿರುವ ಚಿತ್ರದ ಶೀರ್ಷಿಕೆಯನ್ನು ಇಂದು ಬಿಡುಗಡೆ ಮಾಡಲಾಯಿತು.

ನಗರದಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಚಿತ್ರದ ಶೀರ್ಷಿಕೆ ಬಿಡುಗಡೆ ಮಾಡಿದ ಚಿತ್ರತಂಡ, ಚಿತ್ರಕ್ಕೆ ಬ್ಯಾಡ್ ಬ್ರೋ ಎಂಬ ಹೆಸರಿಟ್ಟಿದೆ. ಇನ್ನೂ ಇದು ಹುಬ್ಬಳ್ಳಿ ಪ್ರೊಡಕ್ಷನ್ ದ ಮೊದಲ ಚಿತ್ರವಾಗಿದ್ದು, ರಿಯಾಜ್ ಮೊಕಾಶಿ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ.

ಈ ಕುರಿತು ನಿರ್ದೇಶಕ ರಿಯಾಜ್ ಮೊಕಾಶಿ ಮಾತನಾಡಿ, ಉತ್ತರ ಕರ್ನಾಟಕ ಭಾಗದ ಯುವಕರೇ ಸೇರಿಕೊಂಡು ನಿರ್ಮಾಣ ಮಾಡಿರುವ ಬ್ಯಾಡ್ ಬ್ರೋ, ಅಣ್ಣ-ತಂಗಿಯ ನಡುವಿನ ಸಂಬಂಧದ ಜೊತೆಗೆ ಹಳ್ಳಿಯಿಂದ ಬಂದಂತಹ ಯುವಕ-ಯುವತಿಯರು ನಗರಕ್ಕೆ ಬಂದು ಬದಲಾಗಿ, ತಮ್ಮ ಜೀವನವನ್ನು ಹಾಳು ಮಾಡಿಕೊಂಡು, ನಗರವನ್ನು ದುಷಿಸುತ್ತಾರೆ. ಇದು ಚಿತ್ರದ ಸಾರಾಂಶವಾಗಿದೆ. ಈ ಚಿತ್ರಕ್ಕೆ ನವನಗರದ ವಜ್ರೇಶ್ವರಿ ಡೆವಲಪರ್ಸ್‌ ಹಾಗೂ ಬಿಲ್ಡ್ ರ್ಸ್, ಆಲ್ ತಾಜ್ ರೆಸ್ಟೋರೆಂಟ್ ಪ್ರಾಯೋಜನೆ ನೀಡಿದೆ ಎಂದರು.

ಇನ್ನೂ ಚಿತ್ರದಲ್ಲಿ ನಾಯಕನಾಗಿ ಸಂತೋಷ, ನಾಯಕಿಯಾಗಿ ಶ್ರೀನಿಧಿ, ಇನ್ನುಳಿದಂತೆ ಮಂಜು ಪೂಜಾರ, ಕಿರಣ ಶೃತಿ ಹಾಸನ ಸೇರಿದಂತೆ ಮುಂತಾದ ಕಲಾವಿದರು ಬಣ್ಣ ಹಚ್ಚಿದ್ದಾರೆ. ಚಿತ್ರಕ್ಕೆ ರಕ್ಷಿತ ಸರಿಪಲ್ಲ ಸಂಗೀತ ನೀಡಿದ್ದು, ಅರುಣ ಚಿಕ್ಕಮಠ ಛಾಯಾಗ್ರಹಣ ಮಾಡಿದ್ದಾರೆ. ಅಲ್ಲದೇ ಚಿತ್ರವನ್ನು ಸೂರಜ್ ಪೂಜಾರಿ ಸಂಕಲ ಮಾಡಿದ್ದಾರೆ. ಹುಬ್ಬಳ್ಳಿ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಚಿತ್ರೀಕರಣ ಮಾಡಲಾಗಿದ್ದು, ಮುಂದಿನ ಫೆಬ್ರವರಿ ಕೊನೆಯ ವಾರ ಇಲ್ಲವೇ ಮಾರ್ಚ್ ತಿಂಗಳಲ್ಲಿ ಚಿತ್ರವನ್ನು ಓ.ಟಿ.ಟಿಯಲ್ಲಿ ಬಿಡುಗಡೆ ಮಾಡುವ ಯೋಜನೆ ಹಮ್ಮಿಕೊಂಡಿದ್ದೇವೆ ಎಂದರು.

ಶಿವಾನಂದ ಮುತ್ತಣ್ಣವರ ಮಾತನಾಡಿ, ಧಾರವಾಡ ಜಿಲ್ಲೆಯ ಕಲಾವಿದರೇ ಸೇರಿಕೊಂಡು ನಿರ್ಮಿಸುವ ಬ್ಯಾಡ್ ಬ್ರೋ ಚಲನಚಿತ್ರ ಉತ್ತಮವಾಗಿ ಬಂದಿದ್ದು, ಈ ಭಾಗದ ಕಲಾವಿದರಿಗೆ ಎಲ್ಲರೂ ಪ್ರೋತ್ಸಾಹಿಸುವ ಕೆಲಸ ಆಗಬೇಕು ಎಂದು ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಚಿತ್ರದ ನಾಯಕ ಸಂತೋಷ, ನಾಯಕಿ ಶ್ರೀನಿಧಿ ಪೂಜಾರ, ಮಂಜು ಪೂಜಾರ, ಸೂರಜ್ ಪೂಜಾರಿ, ರಾಜಣ್ಣ ಕುನ್ನೂರ, ಆಕಾಶ ಹರವಿ ಸೇರಿದಂತೆ ಮುಂತಾದವರು ಇದ್ದರು.

Related posts

ಅಪ್ಪು ನಿತ್ಯ ನಿರಂತರ ಜೀವಂತ : ಸಿಎಂ ಬೊಮ್ಮಾಯಿ

eNewsLand Team

ದಕ್ಷಿಣ ಏಷ್ಯಾದ ಗಣ್ಯರ ಪಟ್ಟಿಯಲ್ಲಿ ನಟ ಪ್ರಭಾಸ್‌ಗೆ ಮೊದಲ ಸ್ಥಾನ

eNEWS LAND Team

ಮಾಯಾವಿ ಹುಡುಕಾಟಕ್ಕೆ ಹೊರಡಲು ಶಿವಾಜಿ ಸೂರತ್ಕಲ್ ಮುಹೂರ್ತ!

eNewsLand Team