28 C
Hubli
ಸೆಪ್ಟೆಂಬರ್ 21, 2023
eNews Land
ಸಣ್ಣ ಸುದ್ದಿ

ಸಂಶಿ ಬಸ್ ನಿಲ್ದಾಣದಲ್ಲಿ ದಿಢೀರ್ ಪ್ರತಿಭಟನೆ

ಇಎನ್ಎಲ್ ಕುಂದಗೋಳ: ತಾಲೂಕಿನ ಚಾಕಲಬ್ಬಿ ಗ್ರಾಮಕ್ಕೆ ಸರಿಯಾದ ಬಸ್ಸಿನ ವ್ಯವಸ್ಥೆ ಕಲ್ಪಿಸುವಂತೆ ಸಂಶಿ ಬಸ್ ನಿಲ್ದಾಣದಲ್ಲಿ ವಿದ್ಯಾರ್ಥಿಗಳು ದಿಡೀರ್ ಪ್ರತಿಭಟನೆ ನಡೆಸಿದರು.

ಚಾಕಲಬ್ಬಿ ಗ್ರಾಮದಿಂದ ಸಂಶಿ ಮಾರ್ಗವಾಗಿ ಕುಂದಗೋಳ ಹಾಗೂ ವಿವಿಧ ಊರುಗಳಿಗೆ,ಶಾಲೆ, ಕಾಲೇಜುಗಳಿಗೆ ಹೋಗುವ ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರು ಬಸ್ಸಿನ ಸೌಲಭ್ಯವಿಲ್ಲದೆ ಲಾರಿ, ಟ್ಯಾಕ್ಟರ್ ಹಾಗೂ ಇತರೆ ವಾಹನಗಳನ್ನು ಅವಲಂಬಿಸುವಂತಾಗಿದೆ. ಈ ಸಮಸ್ಯೆಯನ್ನು ಹಲವು ಬಾರಿ ಹುಬ್ಬಳ್ಳಿ ಕೆಎಸ್ ಆರ್ ಟಿಸಿ ಕಾರ್ಯ ನಿರ್ವಹಣಾ ಅಧಿಕಾರಿಗಳಿಗೆ ಮನವಿ ಮೂಲಕ ತಿಳಿಸಿದರು ಸ್ಪಂದಿಸದೆ ಇದ್ದುದರಿಂದ ಗ್ರಾಮದ ವಿದ್ಯಾರ್ಥಿಗಳು ಗ್ರಾಮಸ್ಥರು ಸಂಶಿ ಬಸ್ ನಿಲ್ದಾಣದಲ್ಲಿ ಬರುವ ಬಸ್ಸುಗಳನ್ನು ತಡೆದು ಬೃಹತ್ ಪ್ರತಿಭಟನೆ ನಡೆಸಿದರು.

ಸ್ಥಳಕ್ಕೆ ಬಂದ ಪೊಲೀಸರು ಮಧ್ಯಪ್ರವೇಶಿಸಿ ಭರವಸೆಯನ್ನು ನೀಡಿದ ನಂತರವಷ್ಟೇ ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರು ಪ್ರತಿಭಟನೆ ಹಿಂತೆಗೆದುಕೊಂಡರು.
ಈ ವೇಳೆ ಮಾತನಾಡಿದ ಚಾಕಲಬ್ಬಿ ಗ್ರಾಮದ ರೈತ ಸಂಘದ ಮುಖಂಡರೊಬ್ಬರು ಇನ್ನೆರಡು ದಿನಗಳಲ್ಲಿ ಚಾಕಲಬ್ಬಿ ಗ್ರಾಮಕ್ಕೆ ಬಸ್ಸಿನ ವ್ಯವಸ್ಥೆ ಮಾಡದಿದ್ದರೆ ಸೋಮವಾರ ಮತ್ತೆ ಪ್ರತಿಭಟನೆ ಮಾಡಲಾಗುವುದು ಎಂದು ಎಚ್ಚರಿಸಿದರು.

Related posts

ಅಣ್ಣಿಗೇರಿಯಲ್ಲಿ ಕನ್ನಡ ಗೀತ ಗಾಯನ

eNEWS LAND Team

ಸಿಡಲಿಗೆ ಬಲಿಯಾದ ಅಣಬೂರು ಗ್ರಾಮದ ಇಬ್ಬರು ಯುವಕರು

eNEWS LAND Team

ಹಿಂದೂ ಸಂಘಟನೆಗಳ ಪ್ರತಿಭಟನೆ ತಾತ್ಕಾಲಿಕ ರಾತ್ರಿ 11 ಗಂಟೆಗೆ ಪ್ರಕರಣ ಸುಖಾಂತ್ಯ

eNEWS LAND Team