22 C
Hubli
ಡಿಸೆಂಬರ್ 7, 2023
eNews Land
ಸಿನೆಮಾ

ಡಾರ್ಲಿಂಗ್ ಕೃಷ್ಣ “ದಿಲ್ ಪಸಂದ್” ಫಸ್ಟ್ ಲುಕ್ ಸೂಪರ್!

 

‘ಎ ಕಿಕ್ ಲವ್ ಸ್ಟೋರಿ ‘

ಇಎನ್ಎಲ್ ಫಿಲ್ಮ್ ಬ್ಯೂರೋ

ಡಾರ್ಲಿಂಗ್ ಕೃಷ್ಣ, ನಿಶ್ವಿಕಾ ನಾಯ್ಡು ಜೊತೆಯಾಗಿರುವ “ದಿಲ್ ಪಸಂದ್” ಚಿತ್ರದ ಫಸ್ಟ್‌ ಲುಕ್ ಶುಕ್ರವಾರ ಬಿಡುಗಡೆ ಆಗಿದೆ.

ನಿರ್ದೇಶಕ ಶಿವತೇಜಸ್‌ ಪೋಸ್ಟರ್‌ಗೆ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗಿದೆ. ನಿರ್ಮಾಪಕ ಸುಮನ್ ಕ್ರಾಂತಿ ಅವರ ರಶ್ಮಿ ಫಿಲಂಸ್ ಬ್ಯಾನರ್ ಅಡಿಯಲ್ಲಿ ಚಿತ್ರ ಮೂಡಿ ಬರುತ್ತಿದೆ.

ಚಿತ್ರಕ್ಕೆ ಅರ್ಜುನ್ ಜನ್ಯಾ ಸಂಗೀತ ನೀಡಿದ್ದಾರೆ. ಅವರ ಸ್ಟುಡಿಯೋದಲ್ಲಿ “ದಿಲ್ ಪಸಂದ್” ಹಾಡುಗಳಿಗೆ ಕೆಲಸ ನಡೆಯುತ್ತಿದೆ. ಮೊದಲ ಹಂತದಲ್ಲಿ ಹತ್ತು ದಿನಗಳ ಚಿತ್ರೀಕರಣದಲ್ಲಿ ಶೇ.೩೦ ರಷ್ಟು ಚಿತ್ರೀಕರಣ ಮಾಡಲಾಗಿದೆ.

ಮೊದಲ ಹಂತದ ಚಿತ್ರೀಕರಣದಲ್ಲಿ ಡಾರ್ಲಿಂಗ್ ಕೃಷ್ಣ ನಿಶ್ವಿಕಾ ನಾಯ್ಡು ತಬಲಾ ನಾಣಿ, ರಂಗಾಯಣ ರಘು, ಚಿತ್‌ಕಲಾ, ಅರುಣ ಬಾಲರಾಜ್ ಸೇರಿ ಇತರೆ ಕಲಾವಿದರು ಪಾಲ್ಗೊಂಡಿದ್ದಾರೆ.

ಚಿತ್ರತಂಡ ಫಸ್ಟ್ ಲುಕ್ಕನ್ನು ಟ್ವಿಟ್ಟರ್ ಮೂಲಕ ಹಂಚಿಕೊಂಡಿದೆ. ಡಾರ್ಲಿಂಗ್ ಕೃಷ್ಣ ಮೂರು ದಿನಗಳ ಹಿಂದೆ ಕೂಡ ರೊಮ್ಯಾಂಟಿಕ್ ಪೋಸ್ಟರನ್ನು ಪೋಸ್ಟ್ ಮಾಡಿ ಫಸ್ಟ್ ಇಮೇಜ್ ಬಗ್ಗೆ ಮಾಹಿತಿ ಕೊಟ್ಟಿದ್ದರು.

Related posts

‘ಯುವರತ್ನ’ನಿಗೆ ಮರಣೋತ್ತರ ‘ಕರ್ನಾಟಕ ರತ್ನ ಪ್ರಶಸ್ತಿ’ : ಸಿಎಂ ಘೋಷಣೆ

eNEWS LAND Team

ಬ್ರೇಕ್ ಫೆಲ್ಯೂರ್ ತೆರೆಗೆ; ಹುಬ್ಬಳ್ಳಿ ಹುಡುಗ್ರು ನಟಿಸಿದ್ದಾರೆ

eNEWS LAND Team

ಪುನೀತ ರಾಜಕುಮಾರ ನಿಧನಕ್ಕೆ ಮಂತ್ರಾಲಯ ಶ್ರೀಗಳಿಂದ ಸಂತಾಪ

eNEWS LAND Team