37 C
Hubli
ಮೇ 5, 2024
eNews Land
ಅಪರಾಧ

ಪೊಲೀಸ್ ಕ್ವಾಟರ್ಸ್’ ನಲ್ಲಿ ಇದ್ದವರನ್ನೇ ಬಿಡದ ಸೈಬರ್ ಖದೀಮರು!! ಹೀಗೆ ಮಾಡೋದಾ ಛೆ..

 ಇಎನ್ಎಲ್ ಧಾರವಾಡ

ಹುಬ್ಬಳ್ಳಿಯ ರಾಯಾಪೂರದ  ಕೆ.ಎಸ್.ಆರ್.ಪಿ ಪೊಲೀಸ ಕಾರ್ಟಸ್ ನಿವಾಸಿ ಮಡಿವಾಳಪ್ಪ ಕೆ ಡಂಬೇರ ಅವರಿಗೆ ಕರೆ ಮಾಡಿದ ಅಪರಿಚಿತ ತಾನು ಎಸ್.ಬಿ.ಐ ಬ್ಯಾಂಕ ಅಧಿಕಾರಿ ಎಂದು ನಂಬಿಸಿ ಎಸ್.ಬಿ.ಐ ಯೋನೋ ಅಪ್ ಅಪಡೇಡ್ ಮಾಡಿಕೊಡುವುದಾಗಿ ಹೇಳಿ ₹ 54,490 ರು. ವಂಚನೆ ಮಾಡಿದ್ದಾನೆ.

ಡಂಬೇರ ಅವರು ಮನೆಯಲ್ಲಿ ತಮ್ಮ ಮೊಬೈಲನಲಿ, ಎಸ್.ಬಿ.ಐ ಯೋನೋ ಆಪ್ ಅಪಡೇಟ್‌ ಮಾಡುತ್ತಿದ್ದಾಗ ಪಿರ್ಯಾದಿದಾರರ ಮೊಬೈಲ ನಂಬರ್‌ 9844461545 ನೇದಕ್ಕೆ ಮೊಬೈಲ ನಂಬರ 8276991950 ನೇದ್ದರಿಂದ ಕರೆ ಮಾಡಿ ಎಸ್.ಬಿ.ಐ ಯೋನೋ ಆಪ್ ಯುಸರ್ ನೇಮ್, ಪಾಸವರ್ಡ್, ಎ.ಟಿ.ಎಮ್ ನಂಬರ ಮತ್ತು ಪಿನ್ ನಂಬರ್‌ ಪಡೆದಿದ್ದಾನೆ.

ಬಳಿಕ ಎನಿಡೆಸ್ಕ್ಆ್ಯಪ್ ಡೌನ್ಲೋಡ್ ಮಾಡುವಂತೆ ಹೇಳಿ  ಬ್ಯಾಂಕ ಖಾತೆ ನಂಬರ್‌ 30130421733 ನೇದ್ದರಿಂದ ಹಂತ ಹಂತವಾಗಿ ₹ 24490, ₹ 10,000, ₹ 10,000 ಮತ್ತು ₹ 10,000 ಒಟ್ಟು ರೂ.54,490/- ಗಳನ್ನು ವರ್ಗಾವಣೆ ಮಾಡಿಕೊಂಡು ಮೋಸ ಮಾಡಲಾಗಿದೆ. ಈ ಬಗ್ಗೆ ಹುಬ್ಬಳ್ಳಿ ಸಿಇಎನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Related posts

ಅಪ್ರಾಪ್ತೆ ಮೇಲೆ ಅತ್ಯಾಚಾರ!

eNEWS LAND Team

ಕಮರೀಪೇಟೆಲಿ ಕಲಬೆರಕೆ ಮದ್ಯ ಮಾರುತ್ತಿದ್ದವ ಅರೆಸ್ಟ್

eNewsLand Team

ಕಲಘಟಗಿ; ಹೇಳಿದಂತೆ ನೇಣು ಹಾಕೊಂಡು ಸತ್ತ ಡ್ರೈವರ್ ಗಂಗ್ಯಾ!!

eNewsLand Team