eNews Land
ಅಪರಾಧ

ಕಲಘಟಗಿ; ಹೇಳಿದಂತೆ ನೇಣು ಹಾಕೊಂಡು ಸತ್ತ ಡ್ರೈವರ್ ಗಂಗ್ಯಾ!!

Listen to this article

ಇಎನ್ಎಲ್ ಕಲಘಟಗಿ:
ಬಸವನಕೊಪ್ಪದ ನಿವಾಸಿ ಡ್ರೈವರ್ ಗಂಗಪ್ಪ ಹನಮಂತಪ್ಪ ಅಕ್ಕಮ್ಮನವರ (35) ಕುಡಿಯುವ ಚಟಕ್ಕೆ ಬಿದ್ದು ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಈತನು ಸುಮಾರು 5-6 ವರ್ಷದಿಂದ ವಿಪರೀತ ಸಾರಾಯಿ ಕುಡಿಯುವ ಚಟಕ್ಕೆ ಬಿದ್ದು, ಯಾರು ಎಷ್ಟೇ ಬುದ್ದಿ ಮಾತು ಹೇಳಿದರೂ ಕೇಳದೇ ವಿನಾಕಾರಣ ತನ್ನ ಹೆಂಡತಿಯ ಜೊತೆ ದಿನಾಲು ಸಾರಾಯಿ ಕುಡಿದು ಬಂದು ತಂಟೆ ತಕರಾರು ಮಾಡಿ ಜಗಳ ಮಾಡುತ್ತ ಹುಚ್ಚರ ಆಕಾರ ಮಾಡುತ್ತ ನನಗೆ ಜೀವನ ಬ್ಯಾಸರ ಆಗೇತಿ ನಾ ಏನಾರ ಮಾಡಿಕೊಂಡು ಸಾಯತೀನಿ ಅಂತ ಅನ್ನುತ್ತ ಇದ್ದ.
23/05/2022 ರಂದು ರಾತ್ರಿ 10.30 ಗಂಟೆಯಿಂದ ದಿನಾಂಕ: 24/05/2022 ರಂದು ಮುಂಜಾನೆ 11.30 ಗಂಟೆಯ ನಡುವಿನ ಅವಧಿಯಲ್ಲಿ ಸಾರಾಯಿ ಕುಡಿದ ನಿಶೆಯಲ್ಲಿ ಜಿ.ಬಸವನಕೊಪ್ಪದ ತನ್ನ ವಾಸದ ಮನೆಯಲ್ಲಿಯ ದನಕಟ್ಟುವ ಹಕ್ಕಿಯ ಮೇಲಿನ ಜಂತಿಯ ಕಟ್ಟಿಗೆಯ ಎಳೆಗೆ ತಾನಾಗಿಯೇ ಪತ್ತಲ ಕಟ್ಟಿ ತನ್ನ ಕುತ್ತಿಗೆಗೆ ನೇಣು ಹಾಕಿಕೊಂಡು ನೇತು ಬಿದ್ದು ಮೃತಪಟ್ಟಿದ್ದು, ನನ್ನ ಗಂಡನ ಸಾವಿನಲ್ಲಿ ನನ್ನದು ಯಾರ ಮೇಲೆ ಬೇರೆ ಯಾವ ಸಂಶಯ ವಗೈರೆ ಏನೂ ಇರುವದಿಲ್ಲಾ ತಾವು ಮುಂದಿನ ಕ್ರಮ ಕೈಕೊಳ್ಳಲು ವಿನಂತಿಸುತ್ತೇನೆ ಅಂತ ಮೃತನ ಹೆಂಡತಿ ವರದಿ ಕೊಟ್ಟಿದ್ದು ಇರುತ್ತದೆ.
ಈ ಕುರಿತು ಕಲಘಟಗಿ ಪೊಲೀಸ್ ಠಾಣೆಯಲ್ಲಿ ಯುಡಿನಂ 36/2022 ಕಲಂ 174 ಸಿ.ಆರ್ ಪಿ ಸಿ ನೇದ್ದರಲ್ಲಿ ಪ್ರಕರಣ ದಾಖಲಿಸಿದ್ದು ಇರುತ್ತದೆ.

Related posts

ಲೈಂಗಿಕ ಕಿರುಕುಳ ನೀಡುತ್ತಿದ್ದ ತಂದೆಯ ಹೆಣ ಬೀಳಿಸಿದ ಪುತ್ರಿ!

eNewsLand Team

ಹಿಜಾಬ್ ಪ್ರಕರಣ ಆದೇಶ ಸಂಭವ:ಜಿಲ್ಲೆಯಲ್ಲಿ ಮಾ.15 ರಿಂದ 19 ರವರೆಗೆ ಪ್ರತಿಬಂಧಕಾಜ್ಞೆ

eNewsLand Team

ಬೆಳಗಲಿ-ನೂಲ್ವಿ ಕ್ರಾಸ್ ಬಳಿ ಲಾರಿ ಬೈಕ್ ಅಪಘಾತ

eNEWS LAND Team