27 C
Hubli
ಡಿಸೆಂಬರ್ 7, 2023
eNews Land
ಅಪರಾಧ

ಅಪ್ರಾಪ್ತೆ ಮೇಲೆ ಅತ್ಯಾಚಾರ!

ಇಎನ್ಎಲ್ ಬ್ಯೂರೋ
ಲಲಿತಪುರ, ಉತ್ತರಪ್ರದೇಶ:
ಅಪ್ರಾಪ್ತೆ ಮೇಲೆ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿ ಸಮಾಜವಾದಿ ಪಕ್ಷದ ಮತ್ತು ಬಹುಜನ ಸಮಾಜ ಪಕ್ಷದ ಜಿಲ್ಲಾ ಅಧ್ಯಕ್ಷರು ಸೇರಿ ಏಳು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ಶನಿವಾರ ತಿಳಿಸಿದ್ದಾರೆ.

ಅ.12 ರಂದು ಸದರ್ ಕೊತ್ವಾಲಿ ಪೊಲೀಸ್ ಠಾಣೆಯಲ್ಲಿ ಸಂತ್ರಸ್ತೆಯ ತಂದೆ ಮತ್ತು ಚಿಕ್ಕಪ್ಪ ಹಾಗೂ ಮೂವರು ಅಪರಿಚಿತ ವ್ಯಕ್ತಿಗಳು ಸೇರಿ 25 ಜನರ ವಿರುದ್ಧ ಪ್ರಕರಣ ದಾಖಲಾಗಿತ್ತು.

ನಗರದ ವಿವಿಧ ಭಾಗಗಳಲ್ಲಿ ತನ್ನ ಮೇಲೆ ಐದು ವರ್ಷಗಳ ಕಾಲ ಅತ್ಯಾಚಾರ ಮಾಡಿರುವುದಾಗಿ ಬಾಲಕಿ ಮೂವರು ಅಪರಿಚಿತರು ಸೇರಿ 25 ವ್ಯಕ್ತಿಗಳ ಹೆಸರು ಹೇಳಿದ್ದಾಳೆ. ಬಾಲಕಿಯ ದೂರಿನ ಆಧಾರದ ಮೇಲೆ ಬಂಧಿಸಲಾಗಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ನಿಖಿಲ್ ಪಾಠಕ್ ಹೇಳಿದ್ದಾರೆ.

Related posts

ಹಿಜಾಬ್ ಪ್ರಕರಣ ಆದೇಶ ಸಂಭವ:ಜಿಲ್ಲೆಯಲ್ಲಿ ಮಾ.15 ರಿಂದ 19 ರವರೆಗೆ ಪ್ರತಿಬಂಧಕಾಜ್ಞೆ

eNewsLand Team

ನಗರವಾಸದ ಗೀಳು; ಸುಂದರ ಸಂಸಾರ ಈಗ ಸಾವಿನ ಮನೆ

eNEWS LAND Team

ಅಕ್ಕ ತಂಗ್ಯಾರ ಅಪರಿಚಿತ ಗಂಡಸ್ರ ಫ್ರೆಂಡ್ ರಿಕ್ವೆಸ್ಟ್ ಅಕ್ಸೆಪ್ಟ್ ಮಾಡೋಕು ಮೊದ್ಲು ಹುಬ್ಬಳ್ಯಾಗ ಏನಾಗೈತಿ ನೋಡ್ರಿ

eNewsLand Team