37 C
Hubli
ಮೇ 4, 2024
eNews Land
ಕೃಷಿ ಜಿಲ್ಲೆ

ಜಿಲ್ಲೆಯ 1,21,135 ರೈತರಿಗೆ ಸರ್ಕಾರದಿಂದ 96,33 ಕೋಟಿ ಪರಿಹಾರ ಜಮೆ: ಮುನೇನಕೊಪ್ಪ

ಇಎನ್ಎಲ್ ಧಾರವಾಡ: ಧಾರವಾಡ ಜಿಲ್ಲೆಯಲ್ಲಿ ಕಳೆದ ಜುಲೈ ಮತ್ತು ನವೆಂಬರ್ ತಿಂಗಳಲ್ಲಿ ಸುರಿದ ಭಾರೀ ಮಳೆಯಿಂದಾಗಿ ಉಂಟಾದ ವಿವಿಧ ಕೃಷಿ, ತೋಟಗಾರಿಕೆ ಬೆಳೆಗಳ ಹಾನಿಯ ವಿವರವನ್ನು ಪರಿಹಾರ ತಂತ್ರಾಂಶದಲ್ಲಿ ದಿನಂಪ್ರತಿ ದಾಖಲಿಸಲಾಗಿದ್ದು, 121135 ರೈತರಿಗೆ ಸರ್ಕಾರದಿಂದ ₹ 96,33 ಕೋಟಿ ಪರಿಹಾರ ಮೊತ್ತವನ್ನು ನೇರವಾಗಿ ರೈತರ ಖಾತೆಗೆ ಜನವರಿ ₹17,2022 ರವರೆಗೆ ಬೆಳೆ ಪರಿಹಾರಧನ ಜಮೆ ಮಾಡಲಾಗಿದೆ ಎಂದು ಕೈಮಗ್ಗ ಮತ್ತು ಜವಳಿ ಇಲಾಖೆ, ಕಬ್ಬು ಅಭಿವೃದ್ಧಿ ಹಾಗೂ ಸಕ್ಕರೆ ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಅವರು ತಿಳಿಸಿದ್ದಾರೆ.

ಈ ಕುರಿತು ಪ್ರಕಟಣೆ ನೀಡಿರುವ ಅವರು, ಈಗ ಸದ್ಯ ಸರ್ಕಾರವು ಘೋಷಿಸಿರುವಂತೆ ಬೆಳೆ ಹಾನಿಯಾದ ರೈತರಿಗೆ ಹೆಚ್ಚುವರಿಯಾಗಿ ಪರಿಹಾರ ಮೊತ್ತ ರೂ. 96.11 ಕೋಟಿಗಳನ್ನು ಡಿಸೆಂಬರ್ 09,2022 ರಂದು ಆರ್.ಟಿ.ಜಿ.ಎಸ್. ಮೂಲಕ ನೇರವಾಗಿ ರೈತರ ಉಳಿತಾಯ ಖಾತೆಗೆ ಜಮಾ ಮಾಡಲಾಗಿದೆ.
ಜಿಲ್ಲೆಯ ರೈತರಿಗೆ ಇಲ್ಲಿಯವರೆಗೆ ಒಟ್ಟು ಮೊತ್ತ ರೂ. 192.43 ಕೋಟಿಗಳನ್ನು ಜಮಾ ಮಾಡಲಾಗಿದೆ. ಹಾಗೂ ರೈತರ ಬೆಳೆ ಹಾನಿ ಪರಿಹಾರ ಕಾರ್ಯ ಪ್ರಗತಿ ಹಂತದಲ್ಲಿದೆ ಎಂದು ಸಚಿವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Related posts

ಧಾರವಾಡ : ಕಸಾಪ ಮತದಾನ ಬಿರುಸು

eNewsLand Team

ಮಳೆ: ಧಾರವಾಡದಲ್ಲಿ 8600 ಹೆಕ್ಟೇರ್ ಬೆಳೆ ಹಾನಿ: ಡಿಸಿ

eNewsLand Team

ಮಹಿಳೆ ಮೇಲೆ ಚಿರತೆ ದಾಳಿ

eNEWS LAND Team