35 C
Hubli
ಮಾರ್ಚ್ 28, 2023
eNews Land
ಜಿಲ್ಲೆ

ಕ್ಯಾನ್ಸರ್ ಖಾಯಿಲೆಗೆ ಸಕಾಲದಲ್ಲಿ ಸೂಕ್ತ ಚಿಕಿತ್ಸೆ ಪಡೆಯಬೇಕು : ಡಿಎಚ್ಒ ಡಾ.ಬಿ.ಸಿ.ಕರಿಗೌಡರ

Listen to this article

ವಿಶ್ವ ಕ್ಯಾನ್ಸರ್ ದಿನಾಚರಣೆ ಕಾರ್ಯಕ್ರಮ

ಇಎನ್ಎಲ್ ಧಾರವಾಡ: ಕ್ಯಾನ್ಸರ್ ಖಾಯಿಲೆ ಬಂದಾಗ ಅಥವಾ ಅದರ ಲಕ್ಷಣ ಕಂಡುಬಂದಾಗ ಮಾನಸಿಕವಾಗಿ ಕುಗ್ಗದೆ, ಎಲ್ಲ ಸರ್ಕಾರಿ ಆಸ್ಪತ್ರಗಳಲ್ಲಿ ಉಚಿತವಾಗಿ ಸಿಗುವ ಉತ್ತಮ ಗುಣಮಟ್ಟದ ಚಿಕಿತ್ಸೆ ಪಡೆಯುವ ಮೂಲಕ ಕ್ಯಾನ್ಸರ್ ರೋಗದಿಂದ ರಕ್ಷಿಸಿಕೊಳ್ಳಬೇಕೆಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಬಿ.ಸಿ.ಕರಿಗೌಡರ ಹೇಳಿದರು.
ಅವರು ಇಂದು ಬೆಳಗ್ಗೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಜಿಲ್ಲಾ ಎನ್.ಸಿ.ಡಿ ಕ್ಲಿನಿಕ್ ಮತ್ತು ಜಿಲ್ಲಾ ಆಸ್ಪತ್ರೆ ಸಂಯುಕ್ತವಾಗಿ ಜಿಲ್ಲಾ ಆಸ್ಪತ್ರೆಯ ಎನ್‍ಸಿಡಿ ಘಟಕದಲ್ಲಿ ವಿಶ್ವ ಕ್ಯಾನ್ಸರ್ ದಿನಾಚರಣೆ ಅಂಗವಾಗಿ ಆಯೋಜಿಸಿದ್ದ ಕಾರ್ಯಕ್ರಮ ಉದ್ಘಾಟಿಸಿ, ಮಾತನಾಡಿದರು.
ಕ್ಯಾನ್ಸರ್ ರೋಗ ಬರದೇ ಹಾಗೂ ಬಂದಮೇಲೆ ಮಾನಸಿಕವಾಗಿ ಹೆದರದೆ ಆರೋಗ್ಯ ತಪಾಸಣೆ ಹಾಗೂ ಸಮಗ್ರ ಚಿಕಿತ್ಸೆ ಪಡೆಯುದರ ಮೂಲಕ ಎದರಿಸಬಹುದು. ರಾಜ್ಯ ಮತ್ತು ಕೆಂದ್ರ ಸರ್ಕಾರವು ಸಾರ್ವಜನಿಕ ಆರೋಗ್ಯ ವ್ಯವಸ್ಥೆಯನ್ನು ಅಭಿವೃದ್ಧಿ ಪಡಿಸಲು ಉತ್ತಮ ಗುಣಮಟ್ಟದ ಮೂಲಸೌಕರ್ಯಗಳನ್ನು ಪೂರೈಸಿವೆ. ಸಾರ್ವಜನಿಕರು ಇದರ ಸದುಪಯೋಗ ಮಾಡಿಕೊಳ್ಳಬೇಕೆಂದು ಸಾರ್ವಜನಿಕರಿಗೆ ವಿವರವಾಗಿ ತಿಳಿಸಿದರು.
ಜಿಲ್ಲಾ ಸಮೀಕ್ಷಣಾಧಿಕಾರಿ ಡಾ.ಸುಜಾತಾ ಹಸವಿಮಠ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಪ್ರಸಕ್ತ ಸಾಲಿಗೆ “ಆರೈಕೆಯ ಅಂತರವನ್ನು ಕಡಿತಗೊಳಿಸಿ” ಎಂಬ ಘೋಷ ವಾಕ್ಯವನ್ನು ವಿಶ್ವ ಕ್ಯಾನ್ಸರ್ ದಿನದ ಅಂಗವಾಗಿ ಘೋಷಿಸಲಾಗಿದೆ. ಕ್ಯಾನ್ಸರ್ ಸಂಬಂಧಿ ಕಾಯಿಲೆ ಹರಡುವಿಕೆ ಹಾಗೂ ಅದರ ನಿಯಂತ್ರಣವನ್ನು ನಿಯಮಿತ ಆರೋಗ್ಯ ತಪಾಸಣೆಯಿಂದ ತಡೆಗಟ್ಟಬಹುದು ಎಂದು ಅವರು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಜಿಲ್ಲಾ ಶಸ್ತ್ರ ಚಿಕಿತ್ಸಕರಾದ ಶಿವಕುಮಾರ ಮಾನಕರ ಮಾತನಾಡಿದರು. ಕಾರ್ಯಕ್ರಮದಲ್ಲಿ, ಜಿಲ್ಲಾ ಐ.ಇ.ಸಿ ವಿಭಾಗ ಸಿಬ್ಬಂದಿ, ಜಿಲ್ಲಾ ಆಸ್ಪತ್ರೆಯ ವೈದ್ಯಧಿಕಾಗಳು ಹಾಗೂ ಶೂಶ್ರೂಷಕ ಸಿಬ್ಬಂದಿಯವರು, ತಂಬಾಕು ನಿಯಂತ್ರಣ ಕಾರ್ಯಕ್ರಮದ ಸಿಬ್ಬಂದಿ, ಹಾಗೂ ಎನ್.ಸಿ.ಡಿ ಕಾರ್ಯಕ್ರಮದ ಎಲ್ಲ ಸಿಬ್ಬಂದಿ ಉಪಸ್ಥಿತಿ ಇದ್ದರು.

ವಿಶ್ವ ಕ್ಯಾನ್ಸರ್ ದಿನಾಚರಣೆ ಅಂಗವಾಗಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಬಿ.ಸಿ.ಕರಿಗೌಡರ, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಶಿವಕುಮಾರ ಮಾನಕರ ಮತ್ತು ಜಿಲ್ಲಾ ಸಮೀಕ್ಷಣಾಧಿಕಾರಿ ಡಾ.ಸುಜಾತಾ ಹಸವಿಮಠ ಅವರು ಬಲೂನಗಳನ್ನು ಹಾರಿಸಿದರು ಮತ್ತು ರಾಷ್ಟ್ರೀಯ ತಂಬಾಕು ನಿಯಂತ್ರಣ ಕಾರ್ಯಕ್ರಮದ ಬಿತ್ತಿ ಪತ್ರ ಬಿಡುಗಡೆಗೊಳಿಸಿದರು.

Related posts

ಮನೆ ಚಿಲಕ ಇನ್ನಷ್ಟು ಭದ್ರಪಡಿಸಿ; ಹುಬ್ಬಳ್ಳಿಲಿ ಮನೆಗೆ‌ ಕನ್ನ ಹಾಕಿದ ಕಳ್ಳರು ದೋಚಿದ್ದೆಷ್ಟು ನೋಡಿ!?

eNewsLand Team

ಅತಿವೃಷ್ಟಿ ಹಾನಿ : ಪರಿಹಾರ ಮೊತ್ತ ಹೆಚ್ಚಿಸಿ ಆದೇಶ; ಹಾಲಪ್ಪ ಆಚಾರ್

eNewsLand Team

ಕರ್ನಾಟಕದ 7 ಅದ್ಭುತದ ಸಾಲಲ್ಲಿ ನವಗ್ರಹ ಕ್ಷೇತ್ರ ಸೇರೋಕೆ ವೋಟ್ ಮಾಡಿ. ನಿಮ್ಮ ಜಿಲ್ಲೆ ಭವಿಷ್ಯ ನಿಮ್ಮ ಕೈಯಲ್ಲಿ

eNEWS LAND Team