ಇಎನ್ಎಲ್ ಅಣ್ಣಿಗೇರಿ: ನವಲಗುಂದ ಹಾಗೂ ಅಣ್ಣಿಗೇರಿ ತಾಲೂಕಿನ ಕಸಾಪ ಘಟಕದ ತಮ್ಮ 5 ವರ್ಷದ ಅಧ್ಯಕ್ಷರ ಅವಧಿಯಲ್ಲಿ ಕೈಗೊಂಡ ಕಾರ್ಯಕ್ರಮಗಳು, ಕಸಾಪ ಸಂಘಟನೆ, ಕಸಾಪ ಸದಸ್ಯರು ಸಂಖ್ಯೆ ಹೆಚ್ಚಳಿಕೆ, ಕಸಾಪಕ್ಕೆ ದತ್ತಿ ದಾನಿಗಳನ್ನು ಗುರ್ತಿಸಿದ್ದು, ಕಸಾಪ ಸಾಹಿತ್ಯ ಸಮ್ಮೇಳನ ಯಶಸ್ವಿಗೊಳಿಸಿದ್ದು, ಗ್ರಾಮೀಣ ಪ್ರದೇಶಗಳಲ್ಲಿ ಕಸಾಪ ಘಟಕಗಳನ್ನು ಸ್ಥಾಪಿಸಿದ ಕುರಿತು, ಹಲವಾರು ಸಮಸ್ಯೆಗಳ ಸರಮಾಲೆಯ ಸಾಧಕ ಭಾದಕಗಳ ಬಗ್ಗೆ ಹಂಚಿಕೊoಡು, ತಾಲೂಕಿನಲ್ಲಿ ಕಸಾಪ ನೆಲೆ ಗಟ್ಟಿಗೊಳಿಸುವಲ್ಲಿ ತನು-ಮನ-ಧನದಿಂದ ಕನ್ನಡ ಭಾಷೆ, ನೆಲ, ಜಲ, ಸಾಹಿತ್ಯ ಬೆಳೆಸುವಲ್ಲಿ ನಿರಂತರ ಸೇವೆ ಸಲ್ಲಿಸುವುದಾಗಿ ಅಧ್ಯಕ್ಷ ಪ್ರಕಾಶ ಅಂಗಡಿ ಹೇಳಿದರು.ಪಟ್ಟಣದ ಕೆಜಿಎಸ್ ಪ್ರಾಥಮಿಕ ಶಾಲೆಯಲ್ಲಿ ಆಯೋಜಿಸಿದ ಕಸಾಪ ಕಾರ್ಯಕಾರಣಿ ಸಭೆಯಲ್ಲಿ ಮಾತನಾಡಿ. ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದ ರವಿರಾಜ ವೇರ್ಣೆಕರ ಮಾತನಾಡಿ, ಕಸಾಪ ಕಾರ್ಯಕಾರಣಿ ಪದಾಧಿಕಾರಿಗಳ ಸದಸ್ಯರ ಒಮ್ಮತ ಅಭಿಪ್ರಾಯ ಪಡೆದು ನಿರ್ಣಯ ಕೈಗೊಳ್ಳುವುದಾಗಿ ತಿಳಿಸಿದರು.ತಾಲೂಕಿನಲ್ಲಿ ಕಸಾಪ ಭವನ ನಿರ್ಮಾಣ, ಕಸಾಪ ಸಮ್ಮೇಳನ, ಪಂಪ ಉತ್ಸವ, ಅನೇಕ ಜನಪದ ಕಲಾವಿದರನ್ನು ಮತ್ತು ಕವಿಗಳನ್ನು ಗುರ್ತಿಸಿ ಸಾಹಿತ್ಯ ವೇದಿಕೆ ಮೂಲಕ ಪುರಸ್ಕರಿಸುವುದು. ತಮ್ಮ ಆಡಳಿತದಲ್ಲಿ ಕಸಾಪ ಕಾರ್ಯಪ್ರಗತಿ ಜಿಲ್ಲೆಗೆ ಮಾದರಿಯಾಗುವಂತೆ ಮಾಡುವ ಉದ್ದೇಶ ಹೊಂದಿದ್ದು ತಮ್ಮಲ್ಲರ ಸಹಕಾರ, ಪ್ರೀತಿ, ವಿಶ್ವಾಸ, ಸಲಹೆ ಸೂಚನೆ ಮೇರೆಗೆ ಮುನ್ನಡೆಸುವಲ್ಲಿ ಹಿರಿಯರಾಗಿ ಮಾರ್ಗದರ್ಶನ ಮಾಡಬೇಕೆಂದರು.
ಕಸಾಪ ಪದಾಧಿಕಾರಿಗಳ ಪದಗ್ರಹಣ ಫೆಬ್ರವರಿ ಕೊನೆಯ ವಾರದಲ್ಲಿ ದಿನಾಂಕ ನಿಗದಿಗೊಳಿಸಿ, ಪಟ್ಟಣದ ಮಾರ್ಕೆಟಿನಲ್ಲಿರುವ ಚೆನ್ನಮ್ಮ ಸರ್ಕಲ್ ಬಯಲಿನಲ್ಲಿ ಕೋವಿಡ್ ನಿಯಮಗಳನ್ನು ಪಾಲಿಸಿ ಮಾಡುವುದಾಗಿ ಅಣ್ಣಿಗೇರಿ ತಾಲೂಕ ಕಸಾಪ ಕಾರ್ಯಕಾರಣಿ ಸಭೆಯಲ್ಲಿ ಚರ್ಚಿಸಿ, ಒಮ್ಮತ ಅಭಿಪ್ರಾಯ ಮೇರೆಗೆ ತಿರ್ಮಾನಿಸಿದರು.
ನಿಕಟಪೂರ್ವ ಅಣ್ಣಿಗೇರಿ ತಾಲೂಕ ಕಸಾಪ ಅಧ್ಯಕ್ಷ ಪ್ರಕಾಶ ಅಂಗಡಿ, ಕಸಾಪ ಅಧ್ಯಕ್ಷ ರವಿರಾಜ ವೇರ್ಣೆಕರ, ಅವರಿಗೆ ಕಸಾಪ ಕಾರ್ಯಕಾರಣಿ ಸದಸ್ಯರು ಸನ್ಮಾನಿಸಿ ಗೌರವಿಸಿದರು.
ಎನ್.ಎಸ್.ಮೇಲ್ಮುರಿ ಪ್ರಾಸ್ತವಿಕವಾಗಿ ಮಾತನಾಡಿದರು. ಸಸಿಗೆ ನೀರು ಹಣಿಸುವ ಮೂಲಕ ಸಭೆಯನ್ನು ಅಧ್ಯಕ್ಷರು ಉದ್ಘಾಟಿಸಿದರು. ಭಾರತ ರತ್ನ ಸಂಗೀತ ತಪಸ್ವಿ ಲತಾ ಮಂಗೇಶ್ಕರ ಅವರ ಭಾವಚಿತ್ರಕ್ಕೆ ಪುಷ್ಟಸಲ್ಲಿಸಿ ಮೌನಾಚಾರಣೆ ಮಾಡಿ ಶೃದ್ದಾಂಜಲಿ ಅರ್ಪಿಸಿ. ಬಿ.ವಿ.ಅಂಗಡಿ ಸ್ವಾಗತಕೋರಿ, ನಿರೂಪಿಸಿ,ವಂದಿಸಿದರು. ಈ ಸಂದರ್ಭದಲ್ಲಿ ಮಹೇಶ ಎಮ್.ಅಂಗಡಿ, ಎಲ್.ಎನ್.ಸಾಲಿಮಠ, ಜೆ.ಸಿ.ಮುತ್ತಲಗೇರಿ, ಜೆ.ಕೆ.ಅಣ್ಣಿಗೇರಿ, ಶಶಿಕಲಾ ಎಮ್.ತಿಗಡಿ, ಎಮ್.ವಿ.ಇನಾಮತಿ, ಅರುಣಕುಮಾರ ಹೂಗಾರ, ಅರ್ಜುನ ಎನ್.ಕಲಾಲ, ಆಯ್. ವಿ.ನಡುವಿನಹಳ್ಳಿ, ವಿರೇಶ ಎಸ್.ಕುಬಸದ, ಉಮೇಶ ಬಿ.ಬಿಲ್ಲದಣ್ಣವರ, ಕೆ.ಸಿ.ಕುರ್ಲಗೇರಿ, ಉಪಸ್ಥಿತರಿದ್ದರು.