27 C
Hubli
ಏಪ್ರಿಲ್ 20, 2024
eNews Land
ಜಿಲ್ಲೆ

ಮಳೆ: ಧಾರವಾಡದಲ್ಲಿ 8600 ಹೆಕ್ಟೇರ್ ಬೆಳೆ ಹಾನಿ: ಡಿಸಿ

ಇಎನ್ಎಲ್ ಧಾರವಾಡ:

ಕಳೆದ 3 ದಿನಗಳಿಂದ ಜಿಲ್ಲೆಯಾದ್ಯಂತ ಅತಿಯಾದ ಮಳೆಯಾಗುತ್ತಿದ್ದು, ವಾಡಿಕೆಗಿಂತ ಹೆಚ್ಚುವರಿಯಾಗಿ 167 ಎಂಎಂ ಮಳೆಯಾಗಿದೆ ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ತಿಳಿಸಿದರು.

ಅವರು ಇಂದು ಮಧ್ಯಾಹ್ನ ಜಿಲ್ಲಾಧಿಕಾರಿಗಳ ಕಚೇರಿಯ ನೂತನ ಸಭಾಂಗಣದಲ್ಲಿ ಮಾಧ್ಯಮ ಪ್ರತಿನಿಧಿಗಳನ್ನುದ್ದೇಶಿಸಿ ಮಾತನಾಡಿದರು.

ಮಳೆ ಹೆಚ್ಚಿನ ಪ್ರಮಾಣದಲ್ಲಿ ಆಗುತ್ತಿರುವುದರಿಂದ ಸುಮಾರು 28 ಕಿ.ಮೀ. ರಸ್ತೆ ಹಾನಿಯಾಗಿದೆ. ಮತ್ತು 7390 ಹೆಕ್ಟೇರ್ ಕೃಷಿ ಬೆಳೆ ಹಾಗೂ 1210 ಹೆಕ್ಟೇರ್ ತೋಟಗಾರಿಕೆ ಬೆಳೆ ಸೇರಿಗೆ ಒಟ್ಟು 8600 ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಹಾನಿಯಾಗಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.

ಧಾರವಾಡ ತಾಲೂಕಿನಲ್ಲಿ ನವೆಂಬರ್ 1 ರಿಂದ 18 ರ ವರೆಗೆ 304 ಎಂಎಂ, ಹುಬ್ಬಳ್ಳಿ ತಾಲೂಕು 110 ಎಂಎಂ, ಕಲಘಟಗಿ ತಾಲೂಕು 212 ಎಂಎಂ, ಕುಂದಗೋಳ ತಾಲೂಕು 121 ಎಂಎಂ, ನವಲಗುಂದ ತಾಲೂಕು 71 ಎಂಎಂ, ಹುಬ್ಬಳ್ಳಿ ನಗರ 202 ಎಂಎಂ, ಅಳ್ನಾವರ ತಾಲೂಕು 483 ಎಂಎಂ, ಅಣ್ಣೀಗೇರಿ ತಾಲೂಕು 29 ಎಂಎಂ ಮಳೆಯಾಗಿದ್ದು, ಒಟ್ಟಾರೆಯಾಗಿ ಜಿಲ್ಲೆಯಲ್ಲಿ ಸರಾಸರಿ 26.3 ಎಂಎಂ ಮಳೆಯಾಗಬೇಕಿತ್ತು ಆದರೆ 70.1 ಎಂಎಂ ಮಳೆಯಾಗಿದ್ದು, ವಾಡಿಕೆಗಿಂತ ಹೆಚ್ಚುವರಿಯಾಗಿ 167 ಎಂಎಂ ಮಳೆಯಾಗಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.

ನವೆಂಬರ್ ತಿಂಗಳ ಅಕಾಲಿಕ ಮಳೆಯಿಂದ ಧಾರವಾಡ ತಾಲೂಕಿನ ಹುಲ್ತಿಕೋಟಿ ಕೆರೆ ಒಡೆದು ಸುಮಾರು 25 ಮೀಟರ್ ಹಾನಿಯಾಗಿದೆ. ಸುಮಾರು 15 ಲಕ್ಷ ರೂ.ಗಳ ಅಂದಾಜು ವೆಚ್ಚದಲ್ಲಿ ಸಣ್ಣ ನೀರಾವರಿ ಇಲಾಖೆಯಿಂದ ತಕ್ಷಣೆಕ್ಕೆ ದುರಸ್ತಿ ಕಾರ್ಯ ಕೈಗೊಳ್ಳಲಾಗುವುದು. ಮತ್ತು ಕೆರೆಯ ಶಾಶ್ವತ ದುರಸ್ತಿಗಾಗಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ಅವರು ಹೇಳಿದರು.

ಮನೆ ಹಾನಿ : ನವೆಂಬರ್ 1 ರಿಂದ 18 ರ ವರೆಗೆ ಜಿಲ್ಲೆಯಲ್ಲಿ ಸುರಿದ ಅಕಾಲಿಕ ಮಳೆಯಿಂದಾಗಿ 188 ಮನೆಗಳು ಭಾಗಶ: ಮತ್ತು 22 ಮನೆಗಳು ಪೂರ್ಣ ಪ್ರಮಾಣದಲ್ಲಿ ಹಾನಿಯಾಗಿವೆ. ಧಾರವಾಡ ತಾಲೂಕಿನಲ್ಲಿ ಭಾಗಶ: 60, ಪೂರ್ಣ ಪ್ರಮಾಣದಲ್ಲಿ 15, ಅಳ್ನಾವರ ತಾಲೂಕಿನಲ್ಲಿ ಪೂರ್ಣಪ್ರಮಾಣದಲ್ಲಿ 1, ಹುಬ್ಬಳ್ಳಿ ಗ್ರಾಮೀಣ ತಾಲೂಕಿನಲ್ಲಿ ಭಾಗಶ: 29 ಮನೆಗಳು ಹಾನಿಯಾಗಿವೆ. ಹುಬ್ಬಳ್ಳಿ ನಗರ ತಾಲೂಕಿನಲ್ಲಿ 7 ಮನೆಗಳು ಭಾಗಶ: ಹಾನಿಯಾಗಿವೆ. ಕಲಘಟಗಿ ತಾಲೂಕಿನಲ್ಲಿ 22 ಮನೆಗಳು ಭಾಗಶ: ಹಾನಿಯಾಗಿವೆ. ಕುಂದಗೋಳ ತಾಲೂಕಿನಲ್ಲಿ 57 ಮನೆಗಳು ಭಾಗಶ: ಮತ್ತು 6 ಮನೆಗಳು ಪೂರ್ಣಪ್ರಮಾಣದಲ್ಲಿ ಹಾನಿಯಾಗಿವೆ. ನವಲಗುಂದ ತಾಲೂಕಿನಲ್ಲಿ 9 ಮನೆಗಳು ಭಾಗಶ: ಹಾನಿಯಾಗಿವೆ.ಅಣ್ಣಿಗೇರಿ ತಾಲೂಕಿನಲ್ಲಿ 4 ಮನೆಗಳು ಭಾಗಶ: ಹಾನಿಯಾಗಿವೆ. ನಿನ್ನೆ ರಾತ್ರಿ (ನ.18) ಯಿಂದ ನಿರಂತರವಾಗಿ ಮಳೆಯಾಗುತ್ತಿದ್ದು, ಸಿಬ್ಬಂದಿಗಳು ಕ್ಷೇತ್ರ ಕಾರ್ಯದಲ್ಲಿದ್ದಾರೆ. ಹಾನಿಯಾದ ಮನೆಗಳ ಸಂಖ್ಯೆ ಹೆಚ್ಚಾಗುವ ಸಾಧ್ಯತೆಯಿದೆ.

ಬೆಳೆಹಾನಿ : ನವೆಂಬರ್ ತಿಂಗಳ ಅಕಾಲಿಕ ಮಳೆಯಿಂದಾಗಿ ಧಾರವಾಡ ತಾಲೂಕಿನಲ್ಲಿ 297.86 ಹೆಕ್ಟೇರ್ (ಭತ್ತ) ಕೃಷಿಬೆಳೆ, 7 ಹೆಕ್ಟೇರ್ (ಟೊಮೆಟೋ, ಮೆಣಸಿನಕಾಯಿ, ಹೂವು) ತೋಟಗಾರಿಕಾ ಬೆಳೆ, ಅಳ್ನಾವರ ತಾಲೂಕಿನಲ್ಲಿ 344 ಹೆಕ್ಟೇರ್ (ಭತ್ತ) ಕೃಷಿಬೆಳೆ, 2 ಹೆಕ್ಟೇರ್ (ಹೂವು) ತೋಟಗಾರಿಕಾ ಬೆಳೆ, ಹುಬ್ಬಳ್ಳಿ ಗ್ರಾಮೀಣ ತಾಲೂಕಿನಲ್ಲಿ 1331 ಹೆಕ್ಟೇರ್ (ಹತ್ತಿ) ಕೃಷಿಬೆಳೆ, 1.60 ಹೆಕ್ಟೇರ್ (ಟೊಮೆಟೋ, ಬೀನ್ಸ್) ತೋಟಗಾರಿಕಾ ಬೆಳೆ, ಕಲಘಟಗಿ ತಾಲೂಕಿನಲ್ಲಿ 1699 ಹೆಕ್ಟೇರ್ (ಭತ್ತ) ಕೃಷಿ ಬೆಳೆ ಮತ್ತು ಕುಂದಗೋಳ ತಾಲೂಕಿನಲ್ಲಿ 3502 ಹೆಕ್ಟೇರ್ (ಹತ್ತಿ) ಕೃಷಿ ಬೆಳೆ, 1200 ಹೆಕ್ಟೇರ್ (ಮೆಣಸಿನಕಾಯಿ) ತೋಟಗಾರಿಕೆ ಬೆಳೆ, ನವಲಗುಂದ ತಾಲೂಕಿನಲ್ಲಿ 265 ಹೆಕ್ಟೇರ್ (ಉದ್ದು) ಕೃಷಿಬೆಳೆ, ಅಣ್ಣಿಗೇರಿ ತಾಲೂಕಿನಲ್ಲಿ 52 ಹೆಕ್ಟೇರ್ (ಉದ್ದು, ಕಡಲೆ) ಕೃಷಿಬೆಳೆ ಹಾನಿಯಾಗಿವೆ. ಒಟ್ಟು 7,390.86 ಹೆಕ್ಟೇರ್ ಕೃಷಿ ಬೆಳೆ ಹಾಗೂ 1210.60 ಹೆಕ್ಟೇರ್ ಪ್ರದೇಶದಲ್ಲಿ ತೋಟಗಾರಿಕಾ ಬೆಳೆ ಹಾನಿಯಾಗಿದೆ. ನಿರಂತರ ಮಳೆ ಸುರಿಯುತ್ತಿರುವುದರಿಂದ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಬೆಳೆಹಾನಿಯಾಗುವ ಸಾಧ್ಯತೆಯಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.

ಬೆಳೆಪರಿಹಾರ ವಿತರಣೆ: 2021-22 ನೇ ಸಾಲಿನ ಮುಂಗಾರು ಬೆಳೆ ಹಾನಿಗೆ ಸಂಬಂಧಿಸಿದಂತೆ, ಜಿಲ್ಲೆಯಲ್ಲಿ 10726 ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಹಾನಿಯಾಗಿದ್ದು, ಇಲ್ಲಿಯವರೆಗೆ 4489 ರೈತರ ಖಾತೆಗೆ 318.89 ಲಕ್ಷ ರೂ.ಗಳನ್ನು ಜಮೆ ಮಾಡಲಾಗಿದೆ. ಮತ್ತು 1684 ಜನ ಫಲಾನುಭವಿ ರೈತರಿಗೆ 90.248 ಲಕ್ಷ ರೂ.ಗಳ ಪರಿಹಾರವನ್ನು ಜಮೆ ಮಾಡಲಾಗುತ್ತಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.

Related posts

ಡಾ.ಮಲ್ಲಿಕಾರ್ಜುನ ಮನಸೂರ ರಾಷ್ಟ್ರೀಯ ಪ್ರಶಸ್ತಿ ಮತ್ತು ಯುವ ರಾಷ್ಟ್ರೀಯ ಪ್ರಶಸ್ತಿ ಪ್ರದಾನ

eNewsLand Team

ಮಹಿಳೆ ಮೇಲೆ ಚಿರತೆ ದಾಳಿ

eNEWS LAND Team

ಅಣ್ಣಿಗೇರಿ ಪುರಸಭೆ ಮತದಾನ : ಜಾತ್ರೆ, ಸಂತೆ ನಿಷೇಧ

eNewsLand Team