33.2 C
Hubli
ಮೇ 8, 2024
eNews Land
ಸುದ್ದಿ

ಗೂಗಲ್ ನಲ್ಲಿ ಯಂತ್ರ ಖರೀದಿ ಮಾಡಕ ಹೋದ ಹುಬ್ಳಿಂವ ನಾಮ ಹಾಕ್ಸಗೊಂಡಾನ!!

ಇಎನ್ಎಲ್ ಧಾರವಾಡ

ಪೇಪರ್‌ ಪ್ಲೇಟ್‌ ತಯಾರಿಸುವ ಯಂತ್ರ ಖರೀದಿಸಲು ಆನ್‌ಲೈನ್‌ನಲ್ಲಿ ಹಣ ವರ್ಗಾವಣೆ ಮಾಡಿದ ಗೋಪನಕೊಪ್ಪದ ಎನೋಷ್‌ ಜಮಖಂಡಿ ₹30 ಸಾವಿರ ವಂಚನೆಗೊಳಗಾಗಿದ್ದಾರೆ.

ಎನೋಷ್‌ ಅವರು ಆನ್‌ಲೈನ್‌ ಮಾರ್ಕೆಟ್‌ಲ್ಲಿ ಪೇಪರ್‌ ಪ್ಲೇಟ್‌ ತಯಾರಿಸುವ ಯಂತ್ರ ಖರೀದಿಸಲೆಂದು ಗೂಗಲ್‌ನಲ್ಲಿ ಹುಡುಕುತ್ತಿದ್ದಾಗ, ನರೇಶ ಎಂದು ಪರಿಚಯಿಸಿಕೊಂಡ ವ್ಯಕ್ತಿ ಒಂದು ಯಂತ್ರಕ್ಕೆ ₹35 ಸಾವಿರ ಎಂದು, ಮುಂಗಡವಾಗಿ ₹30 ಸಾವಿರ ವರ್ಗಾಯಿಸಿಕೊಂಡಿದ್ದ. ನಂತರ ಜಿಎಸ್‌ಟಿ ವರ್ಗಾಯಿಸುವಂತೆ ಹೇಳಿ ನಂಬರ್‌ ಕಳುಹಿಸಿದ್ದ. ಅದನ್ನು ಪರಿಶೀಲಿಸಿದಾಗ ನಕಲಿ ಜಿಎಸ್‌ಟಿ ಎಂದು ತಿಳಿದು ಬಂದಿದೆ. ಹುಬ್ಬಳ್ಳಿ ಸೈಬರ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Related posts

ತೊಗರಿ ಬೆಳೆಯಲ್ಲಿ ಉತ್ತಮ ಇಳುವರಿಗೆ ಏನು ಮಾಡಬೇಕು?

eNEWS LAND Team

ಪುನೀತ್ ಕನಸಿನ ‘ಗಂಧದ ಗುಡಿ’ ಟೀಸರ್ ರಿಲೀಸ್

eNewsLand Team

ವಾಕರಸಾಸಂ: ಇಂಧನ ಉಳಿತಾಯದಲ್ಲಿ ಕಾರ್ಯಕ್ಷಮತೆ ತೋರಿದವರಿಗೆ ಪ್ರಶಸ್ತಿ ಪ್ರದಾನ

eNewsLand Team