22.3 C
Hubli
ಜೂನ್ 13, 2024
eNews Land
ಜಿಲ್ಲೆ ಸುದ್ದಿ

ವಾಕರಸಾಸಂ: ಇಂಧನ ಉಳಿತಾಯದಲ್ಲಿ ಕಾರ್ಯಕ್ಷಮತೆ ತೋರಿದವರಿಗೆ ಪ್ರಶಸ್ತಿ ಪ್ರದಾನ

ಇಎನ್ಎಲ್ ಹುಬ್ಬಳ್ಳಿ: ಗೋಕುಲ ರಸ್ತೆಯ ಹುಬ್ಬಳ್ಳಿ ನಗರ ಸಾರಿಗೆ ವಿಭಾಗದ ಸಭಾಂಗಣ ಕೊಠಡಿಯಲ್ಲಿ ಜರುಗಿದ, ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ವ್ಯಾಪ್ತಿಯ ಘಟಕ ವ್ಯವಸ್ಥಾಪಕರ ಮತ್ತು ಇಲಾಖಾ ಮುಖ್ಯಸ್ಥರ ಸಭೆಯಲ್ಲಿ, ಅತೀ ಹೆಚ್ಚು ಇಂಧನ ಉಳಿತಾಯ ಮಾಡಿ ಕಾರ್ಯಕ್ಷಮತೆ ತೋರಿದ 27 ಅಧಿಕಾರಿಗಳಿಗೆ ಸಂಸ್ಥೆಯ ಅಧ್ಯಕ್ಷ ವಿ.ಎಸ್ ಪಾಟೀಲ್, ಉಪಾಧ್ಯಕ್ಷ ಡಾ. ಬಸವರಾಜ ಕೆಲಗಾರ ಮತ್ತು ಇಲಾಖಾ ಮುಖ್ಯಸ್ಥರು ಪ್ರಶಸ್ತಿ ಪ್ರಧಾನ ಮಾಡಿ ಅಭಿನಂದಿಸಿದರು.

ಪ್ರಸ್ತುತ ಸಾಲಿನಲ್ಲಿ ಒಟ್ಟು 2,18,585 ಲೀಟರ್‌ಗಳಷ್ಟು ಇಂಧನ ಉಳಿತಾಯ ಮಾಡಿ ರೂ.1.80 ಕೋಟಿಗಳಷ್ಟು ಇಂಧನದ ವೆಚ್ಚವನ್ನು ಸಂಸ್ಥೆಯಲ್ಲಿ ಉಳಿತಾಯ ಮಾಡಲಾಗಿದೆ.
ಜನೆವರಿ-2021 ರಿಂದ ಡಿಸೆಂಬರ್-2021 ರ ವರೆಗೆ ಅತೀ ಹೆಚ್ಚು ಸಂಚಿತ ಇಂಧನ ಉಳಿತಾಯ ಸಾಧನೆ ಮಾಡಿದ ಬಾಗಲಕೋಟೆ ವಿಭಾಗೀಯ ನಿಯಂತ್ರಣಾಧಿಕಾರಿ ಬಸವರಾಜ ಅಮ್ಮನವರ, ಚಿಕ್ಕೋಡಿ ವಿಭಾಗೀಯ ನಿಯಂತ್ರಣಾಧಿಕಾರಿ ಶಶೀಧರ ಮರಿದೇವರಮಠ, ಎಪ್.ಸಿ.ಹಿರೇಮಠ, ಟಿ ಎಲ್ ಶ್ರೀನಾಥ, ವಿವೇಕಾನಂದ ವಿಶ್ವಜ್ಙ, ಘಟಕ ವ್ಯವಸ್ಥಾಪಕರುಗಳಾದ ವಿದ್ಯಾನಾಯಕ, ಪ್ರಶಾಂತ ಪಾನಬುಡೆ , ಎಚ್ ಟಿ ಬಳೂಟಗಿ, ಎಸ್ ಬಿ ಗಸ್ತಿ ,ಎಸ್ ಆರ್ ಸೊನ್ನದ, ಎ ಎ ಕೋರಿ, ಅರವಿಂದ ಭಜಂತ್ರಿ , ಜಿ.ಎಸ್. ಬಿರಾದಾರ, ದೇವಕ್ಕ ನಾಯಕ, ಎಮ್ ಎಸ್ ಕಾಡರಕೋಪ್ಪ , ಬಸಪ್ಪ ಪೂಜಾರಿ, ಸಂತೋಷ ಕಮತ, ದೀಪಕ ಜಾಧವ, ಎ ವಾಯ್ ಶಿರಗುಪ್ಪಿಕರ್, ವಿಧ್ಯಾ ನಾಯಕ ,ರೋಹಿಣಿ ಬೇವಿನಕಟ್ಟಿ, ವಿ ಎಮ್ ಅರ್ಕಾಚಾರಿ, ಪ್ರಶಾಂತ ಪಾನಬುಡೆ ,ಕು.ಮಹೇಶ್ವರಿ ಬೈಲಪತ್ತಾರ, ವಿಭಾಗೀಯ ಯಾಂತ್ರಿಕ ಅಭಿಯಂತರರಾದ ಎಸ್.ಬಿ. ಭಾಯಿಸರ್ಕಾರ, ವಾಯ್.ಗಡಾದ, ಕಿರಣಕುಮಾರ ಎಫ್, ಬಸಾಪೂರ ಅವರು ಪ್ರಶಸ್ತಿ ಪಡೆದುಕೊಂಡರು.
ಈ ಸಂದರ್ಭದಲ್ಲಿ ಇಲಾಖಾ ಮುಖ್ಯಸ್ಥರಾದ ಬಸಲಿಂಗಪ್ಪ ಬೀಡಿ , ವಿಜಯಶ್ರೀ ನರಗುಂದ, ಎಚ್. ರಾಮನಗೌಡರ, ಆಯ್.ಎ.ಕಂದಗಲ್ ಎಂ ಆರ್ ಮುಂಜಿ, ಮಾಲತಿ.ಎಸ್.ಎಸ್ ಹಾಗೂ ಇನ್ನಿತರ ಅಧಿಕಾರಿಗಳು ಉಪಸ್ಥಿತರಿದ್ದರು.

Related posts

ಹಿರಿಯ ರಂಗಕಲಾವಿದ ನಾಡೋಜ ಬೆಳಗಲ್ಲು ವೀರಣ್ಣ ನಿಧನ : ಕಸಾಪ ಅಧ್ಯಕ್ಷ ನಾಡೋಜ ಡಾ.ಮಹೇಶ ಜೋಶಿ ಕಂಬನಿ

eNEWS LAND Team

ಶಿಕ್ಷಕರ ಹಾಗೂ ಶಿಕ್ಷಕೇತರ ಸಮಸ್ಯೆಗಳನ್ನು ಬಗೆಹರಿಸದಿದ್ದಲ್ಲಿ ಉಗ್ರ ಹೋರಾಟ

eNEWS LAND Team

ನದಿ ಜೋಡಣೆಲಿ ಕರ್ನಾಟಕಕ್ಕೆ ಸಮರ್ಪಕ ಪಾಲು ದೊರೆಯಬೇಕು: ಬೊಮ್ಮಾಯಿ

eNewsLand Team