23 C
Hubli
ಸೆಪ್ಟೆಂಬರ್ 25, 2023
eNews Land
ಸುದ್ದಿ

ಪುನೀತ್ ಕನಸಿನ ‘ಗಂಧದ ಗುಡಿ’ ಟೀಸರ್ ರಿಲೀಸ್

ಇಎನ್ಎಲ್ ಫಿಲ್ಮ್ ಕ್ಲಬ್: ಅಭಿಮಾನಿಗಳ ಚಿರಸ್ಥಾಯಿಯಾಗಿರುವ ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಅವರ ಕನಸು ಗಂಧದ ಗುಡಿ ಟೀಸರ್ ರಿಲೀಸ್ ಆಗಿದೆ.

ಪಿ ಆರ್ ಕೆ ಯೂಟ್ಯೂಬ್ ಚಾನಲ್ ಮೂಲಕ ತೆರೆ ಕಂಡ ಟೀಸರ್ ಕೆಲವೇ ಕ್ಷಣದಲ್ಲಿ ಸಾಕಷ್ಟು ವ್ಯೂ ಕಂಡಿದೆ. ತಮ್ಮ ಐಕಾನ್ ಪುನೀತ್ ಕಂಡು ಅಭಿಮಾನಿಗಳು ಸಂತಸ ಪಟ್ಟಿದ್ದಾರೆ.

ಪುನೀತ್ ಪತ್ನಿ ಅಶ್ವಿನಿ ಅವರು ಸಮಾಧಿ ಸ್ಥಳಕ್ಕೆ ತೆರಳಿ ಪೂಜೆ ಸಲ್ಲಿಸಿದ ನಂತರ ಬೆಳಗ್ಗೆ 10 ಗಂಟೆಗೆ ಟೀಸರ್ ಬಿಡುಗಡೆ ಮಾಡಿದರು.

ಕರುನಾಡಿನ ಇಂಚಿಂಚು ಸೌಂದರ್ಯವನ್ನು ಕಟ್ಟಿಕೊಡಲಾಗಿದೆ. ದಟ್ಟವಾದ ಕಾಡು, ಪ್ರಾಣಿ ಸಂಕುಲ, ಸ್ಕೂಬಾ ಡೈವಿಂಗ್, ಆದಿವಾಸಿಗಳನ್ನು ತೋರಿಸಲಾಗಿದೆ.

‘ದಿ ವೈಲ್ಡ್ ಕರ್ನಾಟಕ’ ನಿರ್ದೇಶಿಸಿದ್ದ ಅಮೋಘವರ್ಷ ಅವರು ‘ಗಂಧದಗುಡಿ’ ನಿರ್ದೇಶಿಸಿದ್ದು, ಪಿಆರ್‌ಕೆ ಪ್ರೊಡಕ್ಷನ್ ಅಡಿ ಅಶ್ವಿನಿ ಪುನೀತ್ ರಾಜ್‌ಕುಮಾರ್ ನಿರ್ಮಾಣ ಮಾಡಿದ್ದಾರೆ.

‘ಗಂಧದಗುಡಿ’ ಚಿತ್ರೀಕರಣ ಸಂಪೂರ್ಣ ಮುಗಿಸಿದ್ದು, ಸದ್ಯ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿ ಇದೆ ಎಂದು ಚಿತ್ರತಂಡ ಹೇಳಿದೆ. 2022 ರಲ್ಲಿ ಈ ಸಿನಿಮಾ ಬಿಡುಗಡೆಯಾಗಲಿದೆ. ದಿನಾಂಕವನ್ನು ಪಿಆರ್‌ಕೆ ಶೀಘ್ರದಲ್ಲೇ ಘೋಷಿಸಲಿದೆ.

Related posts

ರಸ್ತೆ ಮಧ್ಯ ಹೋಮ ಮಾಡಿ ಬಿಜೆಪಿ ಮಾನ ಹರಾಜು ಹಾಕಿದ ಕಾಂಗ್ರೆಸ್!!

eNewsLand Team

ಅಂತರoಗದ ಪೂಜೆ, ಬಹಿರಂಗದ ವ್ಯವಹಾರದಲ್ಲಿ ವ್ಯಕ್ತವಾಗಬೇಕು.

eNEWS LAND Team

ಸಾಮಾಜಿಕ ಜಾಲತಾಣಗಳಲ್ಲಿ ಸಮಯ ವ್ಯರ್ಥ ಮಾಡಬೇಡಿ: ಪ್ರಭುಲಿಂಗ ರಂಗಾಪುರ

eNEWS LAND Team